ಮಂಗಳೂರು: ಪ್ರಸಿದ್ಧ ಐಸ್ಕ್ರೀಂ ಸಂಸ್ಥೆ ಐಡಿಯಲ್ಸ್ನ ಸ್ಥಾಪಕರಾದ ಎಸ್.ಪ್ರಭಾಕರ ಕಾಮತ್(79) ಶನಿವಾರ ಮುಂಜಾನೆ ನಿಧನರಾದರು.

ಅವರು ಪತ್ನಿ, ಪುತ್ರ, ಐಡಿಯಲ್ ಐಸ್ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರಭಾಕರ ಕಾಮತ್ ಅವರನ್ನು ಜನರು ಪ್ರೀತಿಯಿಂದ ಪಬ್ಬಾ ಮಾಮ್ ಎಂದೂ ಕರೆಯುತ್ತಿದ್ದರು.
ಮಂಗಳೂರಿನಲ್ಲಿ ಟೈಲರಿಂಗ್ ವಸ್ತುಗಳ ವಿತರಣೆ, ಪಟಾಕಿ ವಿತರಣೆ ಮಾಡಿಕೊಂಡಿದ್ದ ಪ್ರಭಾಕರ ಕಾಮತ್ ಅವರು ವರ್ಷಪೂರ್ತಿ ಬೇಡಿಕೆಯ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದರು. ಆದರಂತೆ 1975ರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಆರಂಭಿಸಿದ್ದು, ಅವರೇ ಸ್ವತಃ ವಿವಿಧ ನಮೂನೆಯ ಐಸ್ ಕ್ರೀಂ ಮನೆಯಲ್ಲಿ ತಯಾರಿಸಿದ್ದರು. ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಐಡಿಯಲ್ಸ್ ಮನೆಮಾತಾಗಿದೆ. ಮಂಗಳೂರಿನಲ್ಲಿ ‘ಪಬ್ಬಾ ಮಾಮ್’ ಎಂಬ ಐಸ್ ಕ್ರೀಂ ಪಾರ್ಲರ್ ಕೂಡಾ ಇದೆ.
Comments are closed.