ಕರಾವಳಿ

ದುಬೈನ ಪ್ರಸಿದ್ಧ ಯಕ್ಷಗಾನ-ನಾಟಕ ಕಲಾವಿದ ವಿಠ್ಠಲ ಶೆಟ್ಟಿ ಹೃದಯಾಘಾತದಿಂದ ನಿಧನ

Pinterest LinkedIn Tumblr

ಮಂಗಳೂರು: ದುಬೈನ ಪ್ರಸಿದ್ಧ ಯಕ್ಷಗಾನ ದಿಗ್ಗಜ ಮತ್ತು ನಾಟಕ ಕಲಾವಿದ ಕ್ರಿಯಾಶೀಲ ವ್ಯಕ್ತಿ ವಿಠ್ಠಲ್ ಶೆಟ್ಟಿ ಮಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. 63 ವರ್ಷ ಪ್ರಾಯದ ವಿಠ್ಠಲ ಶೆಟ್ಟಿ ಅವರಿಗೆ ತೀವ್ರ ತರದ ಹೃದಯಾಘಾತವಾಗಿತ್ತು.

ಅವರು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಯುಎಇ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಚಿದಾನಂದ ಪೂಜಾರಿ ಅವರೊಂದಿಗೆ ದುಬೈನ ಯಕ್ಷ ಮಿತ್ರರು ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು ಯುಎಇ ಬಂಟ್ಸ್, ಯುಎಇ ತುಳು ಕೂಟ, ಗಮ್ಮತ್ ಕಲಾವಿದರು ಮತ್ತು ಯುಎಇಯ ವಿವಿಧ ತುಳು ಮತ್ತು ಕರ್ನಾಟಕ ಸಂಘಗಳ ಸದಸ್ಯರಾಗಿದ್ದರು. ದಿನೇಶ್ ಶೆಟ್ಟಿ ಮತ್ತು ಶೇಖರ್ ಶೆಟ್ಟಿಗಾರ್ ನೇತೃತ್ವದ ದುಬೈನ ಯಕ್ಷಗಾನ ತರಬೇತಿ ಕೇಂದ್ರದ ರುವಾರಿಯಾಗಿದ್ದರು.

ಮಂಗಳೂರಿನ ನಂತೂರಿನ ತಾರೆತೋಟ ನಿವಾಸಿ ವಿಠ್ಠಲ ಶೆಟ್ಟಿ 30 ವರ್ಷಗಳಿಂದ ಯುಎಇಯಲ್ಲಿದ್ದರು. ಮಂಗಳೂರಿನಲ್ಲಿ ವ್ಯಾಪಾರವನ್ನು ಪುನರಾರಂಭಿಸಲು ಅವರು ಕೆಲವು ವರ್ಷಗಳ ಹಿಂದೆ ಯುಎಇ ತೊರೆದರು. ‘ವಿಠಲಣ್ಣ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಮೃದು ಸ್ವಭಾವದವರಾಗಿದ್ದರು. ನಗುಮುಖದ ವರ್ತನೆಯನ್ನು ಹೊಂದಿದ್ದರು, ಉತ್ತಮ ನಟ, ವಾಗ್ಮಿ, ನಿರೂಪಕ ಮತ್ತು ಶ್ರೇಷ್ಠ ಕಲಾವಿದರಾಗಿದ್ದರು.

 

Comments are closed.