ಕರಾವಳಿ

ಬೈಂದೂರು ತಾರಾಪತಿ ಬಳಿ ದೋಣಿ ಮಗುಚಿ ಇಬ್ಬರು ಮೀನುಗಾರರು ನಾಪತ್ತೆ, ಐವರು ಪಾರು

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಮರಳಿ ಅಳ್ವೆಕೋಡಿಗೆ ಬರುತ್ತಿದ್ದ ನಾಡಾ ದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ಕಾಣೆಯಾಗಿದ್ದಾರೆ.

ಚರಣ ಖಾರ್ವಿ ಮಾಲಿಕತ್ವದ ಜೈ ಗುರುಜಿ ನಾಡ ದೋಣಿ ತೆರೆಯ ಹೊಡೆತಕ್ಕೆ ಸಿಕ್ಕಿ ಮಗುಚಿ ಬಿದ್ದಿದ್ದು ದೋಣಿಯಲ್ಲಿದ್ದ ಇಬ್ಬರು ಕಾಣೆಯಾಗಿದ್ದಾರೆ.

ದೋಣಿಯಲ್ಲಿದ್ದ ಇತರೆ ನಾಲ್ಕೈದು‌ ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರಿದ್ದಾರೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು,

ಮೀನುಗಾರರು, ಮುಳುಗು ತಜ್ಞರು ಕಾಣೆಯಾದವರ ಹುಡುಕಾಟದಲ್ಲಿ ತಡರಾತ್ರಿ ತನಕ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

Comments are closed.