ಉಡುಪಿ: ಕಾರ್ಕಳ ನಗರದ ಹವಾಲ್ದಾರ್ ಬೆಟ್ಟು ಎಂಬಲ್ಲಿ ವೃದ್ಧ ದಂಪತಿಗಳು ವಿಷ ಸೇವಿಸಿ ಅಸ್ವಸ್ಥರಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತರನ್ನು ಕೆ.ಪಿ.ಅನಂತ ಪ್ರಭು(84),ಕೆಪಿ.ಪದ್ಮಾ ಪ್ರಭು(82) ಎಂದು ಗುರುತಿಸಲಾಗಿದೆ. ಇವರು ಮೇ 31ರಂದು ತಮ್ಮದೇ ಮನೆಯಲ್ಲಿ ವಿಷ ಪದಾರ್ಥ ಸೇವನೆಗೈದು ಅಸ್ವಸ್ಥರಾಗಿದ್ದರು . ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೇ ದಂಪತಿಗಳು ಕೊನೆಯುಸಿರೆಳೆದಿದ್ದಾರೆ. ಅನಂತಪ್ರಭು ಜೂ.1 ರ ಬೆಳಗ್ಗೆ ಮೃತಪಟ್ಟಿದ್ದು ಪದ್ಮಾಪ್ರಭುರವರು ಮಧ್ಯಾಹ್ನದ ವೇಳೆಗೆ ಮೃತರಾದರು.
ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿ ಯಾಗಿದ್ದ ಕೆ.ಪಿ ಅನಂತ ಪ್ರಭು, ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಕಾರ್ಕಳ ನಗರದಲ್ಲಿ ಪಾತ್ರೆ ಮಳಿಗೆ ನಡೆಸುತ್ತಿದ್ದರು. ಈ ನಡುವೆ ಪತ್ನಿ ಕೆ.ಪಿ ಪದ್ಮಾ ಪ್ರಭು ಅನಾರೋಗ್ಯಕ್ಕೆ ತುತ್ತಾಗಿದ್ದರೆಂದು ತಿಳಿದುಬಂದಿದ್ದು, ಇದುವೇ ಘಟನೆಗೆ ಕಾರಣವೆನ್ನಲಾಗಿದೆ.
ದಂಪತಿಗಳು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿರುವ ಮಗನನ್ನು ಸೇರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Comments are closed.