ಉಡುಪಿ: ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲದ ವತಿಯಿಂದ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವರ ಬಲಿದಾನದ ಸಂಸ್ಮರಣೆಯ ಅಂಗವಾಗಿ ಪಂಜಿನ ಮೆರವಣಿಗೆ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಮಂಗಳವಾರ ರಾತ್ರಿ ನಡೆಯಿತು.
ಪಂಜಿನ ಮೆರವಣಿಗೆಯನ್ನು ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕೊಡ್ಗಿ ಉದ್ಘಾಟಿಸಿದರು.
ಯುವಮೋರ್ಚಾ,ಭಾಜಪಾ ಹಾಗೂ ಸಂಘಟನಾ ಕಾರ್ಯಕರ್ತರು ಪಂಜನ್ನು ಹಿಡಿದು ಕುಂದಾಪುರ ಪೇಟೆಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾದರು.
ಭಾರತ ಮಾತೆಯ ಹಾಗೂ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ರ ಭಾವಚಿತ್ರಕ್ಕೆ ಪು಼ಷ್ಪಾರ್ಷನೆ ಮಾಡುವ ಮೂಲಕ ಸಭಾ ಕಾರ್ಯಕ್ರಮ ಆರಂಭಿಸಲಾಯಿತು. ಕಾರ್ಯಕ್ರಮದ ಕೇಂದ್ರ ಬಿಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಾಲ್ಲಿಕಾರ್ಜುನ ಬಾಳಿಕಾಯಿಯವರು ದಿಕ್ಸೂಚಿ ಮಾತನಾಡಿ ಭಾರತದ ಸ್ವಾತಂತ್ರ್ಯ ಕ್ಕೆ ಬಲಿದಾನ ಗೈದ ಕ್ರಾಂತಿಕಾರಿಗಳ ದೇಶ ಭಕ್ತಿ,ಸ್ವಾತಂತ್ರ್ಯದ ಹೋರಾಟಗಳು ಅವರ ಆದರ್ಶಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಜಪಾ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ ವಹಿಸಿದ್ದರು. ಕುಂದಾಪುರ ಯುವಮೋರ್ಚಾ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು ಸ್ವಾಗತಿಸಿ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರ ವೇದಿಕೆ ಗಣ್ಯರಿಗೆ ಕೇಸರಿ ಶಲ್ಯ ಹೊದಿಸಿದರು, ಮಹಿಳಾ ಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷೆ ರೂಪಾ ಪೈ ವಂದೇ ಮಾತರಂ ಹಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನ ಕುದ್ರು, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ,ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಕುಂದಾಪುರ, ಶರತ್ ಶೆಟ್ಟಿ ಉಪ್ಪುಂದ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ , ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುಣರತ್ನಾ, ಸದಾನಂದ ಬಳ್ಕೂರು, ಮಂಡಲ ಪ್ರಧಾನ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ,ಸುರೇಶ್ ಶೆಟ್ಟಿ ಗೋಪಾಡಿ, ಕುಂದಾಪುರ ನಗರ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಮುಖಂಡರಾದ ಸುರೇಶ್ ಶೆಟ್ಟಿ ಕಾಡೂರು, ಮೋಹನ್ ದಾಸ್ ಶೆಣೈ,ಸಂಪತ್ ಶೆಟ್ಟಿ ಶಾನಾಡಿ, ನಗರ ಬಿಜೆಪಿ ಅಧ್ಯಕ್ ರಾಜೇಶ್ ಖಡ್ಗಿ, ಯುವಮೋರ್ಚಾ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಕುಂದಾಪುರ, ದೀಕ್ಷಿತ್ ಶೆಟ್ಟಿ, ಸಫಲ್ ಶೆಟ್ಟಿ, ಸಂತೋಪ್ ಪೂಜಾರಿ, ಉಪಾಧ್ಯಕ್ಷರಾದ ವಿನಯ್ ಶಿರಿಯಾರ, ಯುವಮೋರ್ಚಾ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿವೇಕ್ ದೇವಾಡಿಗ, ಸಂಪತ್ ಶೇರಿಗಾರ್, ಅನಿಲ್ ಕುಮಾರ್ ಸಾಲಿಗ್ರಾಮ, ನಾಗರಾಜ್ ಐತಾಳ್, ಸುಶಾಂತ್ ಅಚ್ಲಾಡಿ, ರೋಹಿತ್ ಕಾಡೂರು ಎಲ್ಲಾ ಮೋರ್ಚಾಗಳ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯರು, ಪುರಸಭಾ ಸದಸ್ಯರು, ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಯುವಮೋರ್ಚಾ ಮಂಲಡ ಪ್ರದಾನ ಕಾರ್ಯದರ್ಶಿ ಸುನಿಲ್ ಖಾರ್ವಿ ಧನ್ಯವಾದ ತಿಳಿಸಿದರು, ಗಣೇಶ್ ಅರಸಮ್ಮನಕಾನ್ ಕಾರ್ಯಕ್ರಮ ನಿರೂಪಿಸಿದರು.