ಕರಾವಳಿ

ಜೈಲಿಗೆ ಹೋದ ಮಗ; ನಮಗೆ ನ್ಯಾಯ ಬೇಕೆಂದು ಅರಣ್ಯಾಧಿಕಾರಿಗಳೆದುರು ತಾಯಿಯ ಕಣ್ಣೀರು..!

Pinterest LinkedIn Tumblr

ಕುಂದಾಪುರ: ‘ನನ್ನ ಮಗ ನಿರಪರಾಧಿ, ನಮಗೆ ನ್ಯಾಯ ಬೇಕು’ ಎಂದು ಆರೋಪಿಯ ತಾಯಿ ಅರಣ್ಯಾಧಿಕಾರಿಗಳೆದುರು ಕಣ್ಣಿರು ಹಾಕಿ ಕೈಮುಗಿದು ಅಂಗಲಾಚಿದ ಘಟನೆ ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿರುವ ಆಗುಂಬೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಅಮಾಸೆಬೈಲು ವಲಯದ ವನ್ಯಜೀವಿ ವಲಯದ ವಿಭಾಗದ ಅಧಿಕಾರಗಳು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಅಮಾಸೆಬೈಲು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಸಂದರ್ಭ ಈ ಮನಕಲುಕುವ ದ್ರಶ್ಯ ನಡೆದಿದೆ.

ಅಮಾಸೆಬೈಲಿನ ಗೋಳಿಕಾಡು ನಿವಾಸಿ ಮಾಲತಿ ನಾಯ್ಕ್ ಎನ್ನುವರ ಮಗ ನಟರಾಜ ನಾಯ್ಕ್ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರು ಎರ್ ಗನ್ ಹಿಡಿದುಕೊಂಡು ರಾತ್ರಿ ಬೈಕ್ ನಲ್ಲಿ ಬರುತ್ತಿದ್ದರೆನ್ನುವ ಆರೋಪದಲ್ಲಿ ವನ್ಯಜೀವಿ ವಲ ಸಂರಕ್ಷಾಣಾಧಿಕಾರಿಯವರು ತಂಡ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಎರ್ ಗನ್ ಮತ್ತು ಬೈಕ್ ನ್ನು ವಶಕ್ಕೆ ಪಡೆದು, ಇಬ್ಬರನ್ನೂ ಬಂಧಿಸಿ ಜಾಮೀನು ರಹಿತ ಕೇಸ್ ದಾಖಲಿಸಿದ್ದರು. ಆದರೆ ತನ್ನ ಮಗ ಯಾವುದೇ ಮಾರಾಕಾಸ್ತ್ರ ಹೊಂದಿರಲಿಲ್ಲ. ಯಾವುದೇ ಕಾನೂನು ವಿರೋಧಿ ಕೃತ್ಯ ಮಾಡಿರಲಿಲ್ಲ. ಆದರೆ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಲಾಗಿದೆ. ನಟರಾಜ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಮಾಲತಿ ಅವರು ಗ್ರಾಮಸ್ಥರೊಂದಿಗೆ ಇಂದು ಅಮಾಸೆಬೈಲು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭ ಅಮಾಸೆಬೈಲು ಪೇಟೆಯಿಂದ ಅರಣ್ಯಾಧಿಕಾರಿ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ನಡೆಯಿತು. ನೊಂದ ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ಇಲಾಖೆಗೆ ನೆರೆದ ಸಾರ್ವಜನಿಕರು ಕೂಡ ಆಗ್ರಹಿಸಿದರು. ಅರಣ್ಯಾಧಿಕಾರಿ ಕಚೇರಿ ಎದುರು ಧರಣಿಗೆ ಮುಂದಾದ ನಾಗರಿಕರಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಸಾರ್ವಜನಿಕರು ಧರಣಿ ವಾಪಾಸ್ ಪಡೆದರು.

ಗ್ರಾ.ಪಂ ಸದಸ್ಯರಾದ ಚಂದ್ರ ಶೆಟ್ಟಿ ಕೆಲಾ, ಜಯಪ್ರಕಾಶ್ ಶೆಟ್ಟಿ, ಶಂಕರ್ ಪೂಜಾರಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಠ್ಠಲ ಶೆಟ್ಟಿ, ಮುಖಂಡರಾದ ಸದಾನಂದ ಶೆಟ್ಟಿ ರಟ್ಟಾಡಿ, ಸದಾಶಿವ ಶೆಟ್ಟಿ ಜಡ್ಡಿನಗದ್ದೆ, ರಾಮಣ್ಣ ಹೆಗ್ಡೆ, ಸೂರ್ಯನಾರಾಯಣ ಐತಾಳ್,ನವೀನ್ ಚಂದ್ರ ಶೆಟ್ಟಿ ಅಮಾಸೆಬೈಲು, ಕೇಶವ ಆಚಾರ್ಯ ಕೆಲಾ, ಸುಧೀರ್ ಕುಮಾರ್, ವಿಕ್ರಮ್ ಶೆಟ್ಟಿ ಹೊಳೆ ಬಾಗಿಲು, ಬಾಲಕ್ರಷ್ಣ ಶೆಟ್ಟಿಗಾರ ಬೆಳ್ಮನೆ, ಕರುಣಾಕರ್ ಶೆಟ್ಟಿಗಾರ್ ಬೆಳ್ಮನೆ, ಕಾಳು ನಾಯ್ಕ ಮೊದಲಾದವರು ಭಾಗಿಯಾಗಿದ್ದರು

(ವರದಿ- ಯೋಗೀಶ್ ಕುಂಭಾಸಿ)

 

Comments are closed.