ಕುಂದಾಪುರ: ಹಕ್ಲಾಡಿ ಗ್ರಾಮ ಕುಂದಬಾರಂದಾಡಿಯಲ್ಲಿ ಹೊಳ್ಮಗೆ ಕರುಣಾಕರ ಶೆಟ್ಟಿ ಕಾವ್ರಾಡಿ ಸ್ಮರಣಾರ್ಥ 15 ಲಕ್ಷ ವೆಚ್ಚದಲ್ಲಿ ಪುತ್ರ ನಿಕಟಪೂರ್ವ ಹಕ್ಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ ಹಾಗೂ ಸಹೋದರಿಯರು ನಿರ್ಮಿಸಿದ ಹೈಟೆಕ್ ತಂಗುದಾಣ ದಿ.ಕರುಣಾಕರ ಶೆಟ್ಟಿ ಒಡನಾಡಿ ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಉದ್ಘಾಟಿಸಿದರು. ಪ್ರಯಾಣಿಕರು ತಂಗಲು ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಾಣಿಜ್ಯ ಸಂಕೀರ್ಣ ಈ ತಂಗುದಾಣದಲ್ಲಿದೆ. ಸದ್ಯ ಇದನ್ನು ಗ್ರಾಮಪಂಚಾಯತಿಗೆ ಹಸ್ತಾಂತರ ಮಾಡಲಾಗಿದೆ.

ಹಕ್ಲಾಡಿ ಚೆನ್ನಕೇಶವ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಾಳೆಮನೆ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಅಧ್ಯಕ್ಷ ಎನ್.ಎಂ.ಹೆಗ್ಡೆ, ಲಯನ್ಸ್ ಪದಾಧಿಕಾರಿಗಳಾದ ವಿ.ಜಿ.ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ, ಹಕ್ಲಾಡಿ ಗ್ರಾಪಂ ಪಿಡಿಒ ಚಂದ್ರ ಬಿಲ್ಲವ, ಉಮಾನಾಥ ಹೆಗ್ಡೆ ಸಲ್ವಾಡಿ ಇದ್ದರು.
ಹಕ್ಲಾಡಿ ಕೊಳ್ಳೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಡಾ.ಕಿಶೋರ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಸಂಜೀವ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
Comments are closed.