ಕರಾವಳಿ

ಕೋಡಿ ಕಡಲ್ಕೊರೆತ ಪ್ರದೇಶಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ

Pinterest LinkedIn Tumblr

ಕುಂದಾಪುರ: ಕಳೆದ ಕೆಲವು ದಿನಗಳಿಂದ ಸುರಿದ ಬಾರೀ ಮಳೆ ಹಾಗೂ ಸಮುದ್ರದಲ್ಲಿ ತೂಫಾನ್ ಇರುವ ಹಿನ್ನೆಲೆ ಕುಂದಾಪುರ ತಾಲೂಕಿನ ಕೋಡಿ ಭಾಗದಲ್ಲಿ ಹಲವೆಡೆ ತೀವೃ ಕಡಲ್ಕೊರೆತ ಉಂಟಾಗಿದ್ದು ಶನಿವಾರ ಮಧ್ಯಾಹ್ನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಎಂ ಕೋಡಿ ಪ್ರದೇಶದಿಂದ ಹಾಯ್ಗುಳಿ ಬಸ್ ನಿಲ್ದಾಣದವರೆಗಿನ ಕಡಲ್ಕೊರೆತ ಪ್ರದೇಶಕ್ಕೆ ಭೇಟಿಯಿತ್ತ ಶಾಸಕರ ಬಳಿ‌ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು ಈಗಾಗಲೇ ಕಡಲ್ಕೊರೆತ ವಿಚಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು ಸಮಸ್ಯೆ ಬಗೆಹರಿಸಲು ಸೂಚನೆ ನೀಡಿರುವುದಾಗಿ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಪುರಸಭಾ ಸದಸ್ಯೆ ಕಮಲಾ‌ ಮಂಜು ಪೂಜಾರಿ, ಮುಖಂಡರಾದ ನಾಗರಾಜ್ ಕಾಂಚನ್ ಮೊದಲಾದವರು ಈ‌ ಸಂದರ್ಭ ಇದ್ದರು.

Comments are closed.