ಉಡುಪಿ: ಕಾಸರಗೋಡು ಬಂದರು ಸಮೀಪ ಪೊಲೀಸ್ ಹ್ಯಾಂಡ್ ಕಪ್ (ಬೇಡಿ) ಸಹಿತ ಸಮುದ್ರಕ್ಕೆ ಹಾರಿದ್ದ ಅತ್ಯಾಚಾರ ಪ್ರಕರಣದ ಆರೋಪಿಯ ಮೃತದೇಹ ಉಡುಪಿ ಜಿಲ್ಲೆ ಕೋಟ ಸಮೀಪದ ಮಣೂರು ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಕೂಡ್ಲು ಕಾಳ್ಯಾಂಗಾಡ್ ಮೂಲದ ಮಹೇಶ್( 28) ಸಮುದ್ರಕ್ಕೆ ಹಾರಿದ್ದ ಆರೋಪಿ.




ಅತ್ಯಾಚಾರ ಪ್ರಕರಣವೊಂದರಲ್ಲಿ ಕಾಸರಗೋಡು ಪೊಲೀಸರು ಜುಲೈ 22ರಂದು ಬೆಳಗ್ಗೆ ಮಹಜರು ಕಾಸರಗೋಡು ಬಂದರು ಬಳಿಗೆ ಕರೆ ತಂದ ಸಂದರ್ಭ ಈತ ಪೊಲೀಸರಿಂದ ತಪ್ಪಿಸಿಕೊಂಡು ಸಮುದ್ರಕ್ಕೆ ಹಾರಿದ್ದನು. ಈತನನ್ನು ರಕ್ಷಿಸಲು ಜೊತೆಗಿದ್ದ ಪೊಲೀಸರು, ಮುಳುಗು ತಜ್ಞರು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ.
ಕೋಟ ಸಮೀಪದ ಮಣೂರು ಪಡುಕೆರೆ ಕಡಲ ಕಿನಾರೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತಪಾಸಣೆ ನಡೆಸುವ ವೇಳೆ ಆರೋಪಿ ಸಮುದ್ರಕ್ಕೆ ಹಾರುವಾಗ ಧರಿಸಿದ ಟಿ ಶರ್ಟ್ ಹಾಗೂ ಮೃತದೇಹದಲ್ಲಿದ್ದ ಟಿ ಶರ್ಟ್ ಒಂದೇ ಆಗಿತ್ತು. ಕೋಟ ಪಿಎಸ್ಐ ಹಾಗೂ ಸಿಬ್ಬಂದಿಗಳು ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Comments are closed.