ಕರಾವಳಿ

ಉಡುಪಿ ಜಿಲ್ಲೆಯ ಎಲ್ಲಾ ಕ್ಷೌರದಂಗಡಿಗಳು ಮೇ 18 ರಿಂದ ತೆರೆಯಲಿದೆ: ಸವಿತಾ ಸಮಾಜ

Pinterest LinkedIn Tumblr

ಉಡುಪಿ: ಸವಿತಾ ಸಮಾಜದ ನಿಯೋಗವು ಮೇ 13 ರಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಚರ್ಚಿಸಿದ್ದು, ಮೇ 18 ರಂದು ಕ್ಷೌರದಂಗಡಿಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಷರತ್ತುಬದ್ಧ ಅನುಮತಿ ನೀಡಲು ಒಪ್ಪಿದ್ದಾರೆ. ಜಿಲ್ಲೆಯ ಎಲ್ಲಾ ಕ್ಷೌರದಂಗಡಿಗಳು ಮೇ 18 ರಿಂದ ಕಾರ್ಯ ನಿರ್ವಹಿಸಲಿದೆ ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಭಾಸ್ಕರ್ ಭಂಡಾರಿ ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

ಮೇ 14 ರ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 53 ದಿನಗಳ ಲಾಕ್‌ಡೌನ್ ಸಮಯದಲ್ಲಿ ತಮ್ಮೊಂದಿಗೆ ಸಹಕರಿಸಿದ್ದಕ್ಕಾಗಿ ಜಿಲ್ಲೆಯ ಕ್ಷೌರಿಕರು ಜನರಿಗೆ ಹಾಗೂ ಸಂಕಷ್ಟದಲ್ಲಿದ್ದ ಕ್ಷೌರಿಕರಿಗೆ ಆಹಾರದ ಕಿಟ್‌ಗಳನ್ನು ಒದಗಿಸಿದ ನಾಡೋಜ ಡಾ.ಜಿ.ಶಂಕರ್ ಮತ್ತು ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್‌ಗೆ ಕೃತಜ್ಞರಾಗಿದದ್ದು, ಕ್ಷೌರಿಕ ಸಮುದಾಯದ ಎಲ್ಲ ಸದಸ್ಯರಿಗೆ 5,000 ರೂ.ಗಳ ಹಣಕಾಸು ಪ್ಯಾಕೇಜ್ ಘೋಷಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಎಂದರು.

ಷರತ್ತುಗಳು:
ಕ್ಷೌರದಂಗಡಿಗೆ ಬರುವ ಗ್ರಾಹಕರು ಮುಂಚಿತವಾಗಿಯೇ ನೇಮಕಾತಿ ಮಾಡುವುದು ಉತ್ತಮ. ಯಾವುದೇ ಕಾರಣಕ್ಕೂ ಹವಾನಿಯಂತ್ರಣಗಳನ್ನು ಬಳಸಲಾಗುವುದಿಲ್ಲ. ಗ್ರಾಹಕರು ಮತ್ತು ಕ್ಷೌರಿಕರ ನಡುವೆ ಕನಿಷ್ಠ ಎರಡು ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಕ್ಷೌರದಂಗಡಿಯಲ್ಲಿ ಬಟ್ಟೆಗಳು ಸ್ವಷ್ಚವಾಗಿರಬೇಕು. ಕ್ಷೌರಿಕರು ಗ್ರಾಹಕರಿಗೆ ಸೇವೆ ಸಲ್ಲಿಸುವಾಗ ಮಾಸ್ಕ್‌ ಮತ್ತು ಕೈ ಕೈಗವಸುಗಳನ್ನು ಧರಿಸಬೇಕು. ಗ್ರಾಹಕರಿಗೆ ಸೇವೆ ಸಲ್ಲಿಸಿದ ನಂತರ, ಅವರು ಸೋಪಿನಿಂದ ಕೈ ತೊಳೆಯಬೇಕು. ಗ್ರಾಹಕರು ಭೇಟಿ ನೀಡಿದಾಗ ಸಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸತಕ್ಕದು. ಒಂದೇ ಸಲೂನ್‌ನಲ್ಲಿ ಇಬ್ಬರು ಕ್ಷೌರಿಕರು ಕೆಲಸ ಮಾಡುತ್ತಿದ್ದಲ್ಲಿ ಎರಡು ಕುರ್ಚಿಗಳ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಒಬ್ಬ ಗ್ರಾಹಕನಿಗೆ ಬಳಸುವ ಬಟ್ಟೆಗಳನ್ನು ಇನ್ನೊಬ್ಬರಿಗೆ ಬಳಸಬಾರದು. ಅದನ್ನು ತೊಳೆದು ಸ್ವಚ್ಚಗೊಳಿಸಿದ ನಂತರವೇ ಮತ್ತೆ ಬಳಸಬಹುದು. ಪ್ರತಿಯೊಬ್ಬ ಕ್ಷೌರಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಲು, ಖಜಾಂಚಿ ಶೇಖರ್ ಸಾಲಿಯನ್ ಆದಿ ಉಡುಪಿ, ಗೌರವ ಅಧ್ಯಕ್ಷ ಗೋವಿಂದ್ ಭಂಡಾರಿ, ಉಡುಪಿ ತಾಲ್ಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಸಿ ಭಂಡಾರಿ ಕಿನ್ನಿಮುಲ್ಕಿ, ಕಾರ್ಯದರ್ಶಿ ಶಂಕರ್‌ ಸಾಲಿಯಾನ್‌ ಕಟ್ಟಪಾಡಿ ಉಪಸ್ಥಿತರಿದ್ದರು.

Comments are closed.