ಕರಾವಳಿ

ಆಟೋ ರಿಕ್ಷಾದಲ್ಲಿ ದನದ ಮಾಂಸ ಸಾಗಾಟ: ಕಾಪುವಿನಲ್ಲಿ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಅಕ್ರಮವಾಗಿ ದನದ ಮಾಂಸವನ್ನು ರಿಕ್ಷಾದಲ್ಲಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾಪು ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ. ಮಲ್ಲಾರು ನಿವಾಸಿ ಅರಾಫತ್ (32) ಮತ್ತು ಹುಸೈನಬ್ಬ (52) ಬಂದಿತ ಆರೋಪಿಗಳು.

ಶನಿವಾರ ಸಂಜೆ 6.30 ರ ಸುಮಾರಿಗೆ ಕಾಪು ಕ್ರೈಂ ಪಿಎಸ್ಐ ಐ.ಆರ್ ಗಡ್ಡೇಕರ್ ಅವರಿಗೆ ಬೀಟ್ ಸಿಬಂದಿ ರವೀಂದ್ರ ಹೆಚ್ ರವರು ಆಟೋ ರಿಕ್ಷಾದಲ್ಲಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವುದಾಗಿ ನೀಡಿದ ಮಾಹಿತಿಯಂತೆ ತನ್ನ ಸಿಬ್ಬಂದಿಗಳೊಂದಿಗೆ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಜಂಕ್ಷನಲ್ಲಿ ವಾಹನ ತಪಾಸಣೆ ನಡೆಸುತ್ತಿರುವಾಗ ಸಂಜೆ 7:00 ಗಂಟೆ ಸಮಯಕ್ಕೆ ಬೆಳಪು ಕಡೆಯಿಂದ ಮಜೂರು ಕಡೆಗೆ ಆಟೋ ರಿಕ್ಷಾ ಬಂದಿದ್ದು ಆ ಆಟೋ ರಿಕ್ಷಾ ವನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾನೂನು ಬಾಹಿರವಾಗಿ ದನದ ಮಾಂಸ ಸಾಗಿಸುವುದು ಪತ್ತೆಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ದನದ ಮಾಂಸ ಸಾಗಾಟಕ್ಕೆ ಬಳಸಿದ ಆಟೋ ರಿಕ್ಷಾ ಮತ್ತು ದನದ ಮಾಂಸವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Comments are closed.