ಕರಾವಳಿ

ಮಾರ್ಚ್,12: ದಕ್ಷಿಣ ಭಾರತದ ಬೃಹತ್ ಫ್ಯಾಮಿಲಿ ಫ್ಯಾಶನ್ ಸ್ಟೋರ್ “ಜಯಲಕ್ಷ್ಮಿ” ಮಂಗಳೂರಿನಲ್ಲಿ ಶುಭಾರಂಭ

Pinterest LinkedIn Tumblr

ಮಂಗಳೂರು : ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ ಜಯಲಕ್ಷ್ಮಿ ತನ್ನ ಮೆಗಾ ಶೋ ರೂಂ ಮಂಗಳೂರಿನ ಪ್ರಮುಖ ಸ್ಥಳವಾದ ಬಿಜೈನಲ್ಲಿ ಮಾರ್ಚ್12ರಂದು ಶುಭಾರಂಭಗೊಳ್ಳಲಿದೆ ಎಂದು ಜಯಲಕ್ಷ್ಮೀ ಸಂಸ್ಥೆಯ ಅಧ್ಯಕ್ಷ ನಾರಾಯಣ ಕಾಮತ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದ ಉಡುಪು, ಸೀರೆ ಮೊದಲಾದ ಉಡುಪುಗಳಿಗೆ ದಕ್ಷಿಣ ಭಾರತದಲ್ಲಿಯೇ ಹೆಸರಾದ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮಿ’ ಯ ಬೃಹತ್ ಮಳಿಗೆಯು 1 ಲಕ್ಷ ಚ.ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಕರ್ನಾಟಕದ ಅತೀ ದೊಡ್ಡ ಶೋ ರೂಂ ಆಗಿದೆ. 4 ಮಹಡಿಗಳ ಬೃಹತ್ ಶಾಪಿಂಗ್ ಮಾಲ್‌ನಲ್ಲಿ ಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ. ವಧುವಿನ ಸೀರೆಗಳು, ಡಿಸೈನರ್ ವೇರ್, ಜಂಟ್ಸ್ ಕಲೆಕ್ಷನ್ಸ್‌ನಿಂದ ಮಕ್ಕಳ ಉಡುಗೆಗಳವರೆಗೆ, ಅತ್ಯುತ್ತಮ ಮತ್ತು ನೂತನ ಕಲೆಕ್ಷನ್ ಜಯಲಕ್ಷ್ಮಿ ಫ್ಯಾಷನ್‌ನಲ್ಲಿ ಲಭ್ಯವಿದೆ ಎಂದು ಹೇಳಿದರು.

ಬಹುಮಹಡಿ ಕಟ್ಟಡದಲ್ಲಿ ಚೂಡಿದಾರ್, ಚೂಡಿದಾರ್ ಮೆಟೀರಿಯಲ್ಸ್‌ಗಳು, ಡ್ರೆಸ್ ಮೆಟೀರಿಯಲ್ಸ್‌ಗಳು, ಎತ್ನಿಕ್ ವೇರ್‌ಗಳು, (ನೆಲ ಮಹಡಿಯಲ್ಲಿ), ಮಕ್ಕಳ ಉಡುಗೆ ತೊಡುಗೆಗಳು, ಪಾಶ್ಚಿಮಾತ್ಯ ಉಡುಗೆ (1ನೇ ಮಹಡಿಯಲ್ಲಿ), ಪುರುಷರ ಉಡುಗೆ ತೊಡುಗೆಗಳು, ಬ್ಲೌಸ್ ಮೆಟೀರಿಯಲ್ಸ್, ಒಳ ಉಡುಪುಗಳು (2ನೇ ಮಹಡಿಯಲ್ಲಿ) ಲೆಹೆಂಗಾ ಮತ್ತು ಸೀರೆಗಳ ಸಂಗ್ರಹ (3ನೇ ಮಹಡಿಯಲ್ಲಿ). ಕಾರ್ ಪಾರ್ಕಿಂಗ್‌ಗಾಗಿ ನೆಲಮಾಳಿಗೆಯಲ್ಲಿರುವ 2 ಮಹಡಿಗಳನ್ನು ಕಾಯ್ದಿರಿಸಿದ್ದು ಇಲ್ಲಿ ಸುಮಾರು 250 ವಾಹನಗಳ ಪಾರ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಪುಟ್ಟ ಮಕ್ಕಳಿಗಾಗಿ ಮೋಜನ್ನು ನೀಡುವ ಸಲುವಾಗಿ ಮಕ್ಕಳ ಆಟದ ಸ್ಥಳವನ್ನು ಮೀಸಲಿರಿಲಾಗಿದೆ. ವ್ಯಾಪಕ ಸಂಗ್ರಹದ, ಅತ್ಯುತ್ತಮ ಗುಣಮಟ್ಟದ ಉತ್ತಮ ಶ್ರೇಣಿಯ ಯಾವುದಕ್ಕೂ ಸಾಟಿಯಿಲ್ಲದ ಜಯಲಕ್ಷ್ಮಿ, ಪ್ರತಿದಿನವು ಶಾಪಿಂಗ್ ಮಾಡುವ ಭರವಸೆಯನ್ನ ನೀಡುತ್ತದೆ. ಜವಳಿ ಕ್ಷೇತ್ರದಲ್ಲಿ ತನ್ನ 7 ದಶಕಗಳ ಪರಿಣತಿ ಹೊಂದಿರುವ ಜಯಲಕ್ಷ್ಮಿ ಭಾರತೀಯ, ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಫ್ಯಾಷನ್ ವಸ್ತ್ರೋದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದು, ಪ್ರತಿಯೊಂದು ವಿಭಾಗದ ಜನರ ಅಭಿರುಚಿಯನ್ನು ಪೂರೈಸಲು ಸಜ್ಜಾಗಿದೆ.

ನವ ವಿನ್ಯಾಸದೊಂದಿಗೆ ನೂತನ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾದ ವಿಶಾಲವಾದ ಶೋ ರೂಂ, ಪ್ರತಿಯೊಬ್ಬ ಗ್ರಾಹಕರ ಕಾಳಜಿ ವಹಿಸಲು 500ಕ್ಕೂ ಹೆಚ್ಚು ಹರ್ಷಚಿತ್ತದ ಉತ್ಸಾಹಿ ಸಿಬ್ಬಂದಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಗಳು ಗ್ರಾಹಕರಿಗೆ ಅಂತರರಾಷ್ಟ್ರೀಯ ಶಾಪಿಂಗ್ ಅನುಭವವನ್ನು ನೀಡಲಿದೆ ಎಂದು ನಾರಾಯಣ ಕಾಮತ್ ಅವರು ತಿಳಿಸಿದರು.

ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಕೇಂದ್ರಗಳು ಮತ್ತು ಐಟಿ ಹಬ್‌ಗಳನ್ನು ಹೊಂದಿರುವ ಮಂಗಳೂರನ್ನು ಯುವಜನರ, ವೈವಿಧ್ಯ ಮತ್ತು ವರ್ಣಮಯ ನಗರವೆಂದು ಕರೆಯಲಾಗುತ್ತದೆ. ಮಂಗಳೂರಿನವರು ಫ್ಯಾಷನ್ ಮತ್ತು ಸ್ಟೈಲ್‌ಗೆ ಮನ್ನಣೆ ಕೊಡುತ್ತಾರೆ ಮತ್ತು ಯಾವಾಗಲೂ ಉತ್ತಮ ಗುಣಮಟ್ಟದ ಯಾವುದೆ ವಸ್ತುಗಳನ್ನಾದರೂ ಮೆಚ್ಚುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಇಂದು ಪ್ರೀಮಿಯಂ ಉಡುಪುಗಳು ಮತ್ತು ನವವಧುವಿನ ಉಡುಗೆ ತೊಡುಗೆ ಗಳ ಸಂಗ್ರಹಗಳ ಮಳಿಗೆ “ಜಯಲಕ್ಷ್ಮಿ” ತನ್ನ 5ನೇ ಶೋ ರೂಂ ಅನ್ನು ಈ ಐತಿಹಾಸಿಕ ನಗರ ಮಂಗಳೂರಿನ ಹೃದಯಭಾಗವಾದ ಬಿಜೈನಲ್ಲಿ ಪ್ರಾರಂಭಿಸಲು ಉತ್ಸುಕವಾಗಿದೆ ಎಂದರು.

“ಜಯಲಕ್ಷ್ಮಿ” 1947ರಲ್ಲಿ ಆರಂಭ

ಜಯಲಕ್ಷ್ಮಿ ಮಳಿಗೆಯನ್ನು 1947ರಲ್ಲಿ ಕೊಚ್ಚಿನ್‌ನ ಕ್ಲೋತ್ ಬಜಾರ್ ರಸ್ತೆಯಲ್ಲಿ ದಿವಂಗತ ಶ್ರೀ ಆರ್. ನರಸಿಂಹ ಕಾಮತ್ ಅವರು ಸ್ಥಾಪಿಸಿದರು. ಪ್ರಾರಂಭದಲ್ಲಿ 200 ಚದರ ಅಡಿ ಅಳತೆಯ ಸಣ್ಣ ಅಂಗಡಿಯೊಂದಿಗೆ ವ್ಯವಹಾರವು ಪ್ರಾರಂಭಗೊಂಡಿತು.

1997ರಲ್ಲಿ, ದಿವಂಗತ ಶ್ರೀ ಆರ್ ನರಸಿಂಹ ಕಾಮತ್‌ರವರ ಮೂವರು ಪುತ್ರರು. ಶ್ರೀ ಎನ್. ನಾರಾಯಣ ಕಾಮತ್, ಶ್ರೀ ಎನ್. ಗೋವಿಂದ್ ಕಾಮತ್ ಮತ್ತು ಶ್ರೀ ಎನ್. ಸತೀಶ್ ಕಾಮತ್, ಎಂಜಿ ರೋಡ್ ಕೊಚ್ಚಿನ್‌ನಲ್ಲಿ 60,000ಚದರ ಅಡಿ ಅತ್ಯಾಧುನಿಕ ಶೋ ರೂಂ ಅನ್ನು ತೆರೆದರು. ಗ್ರಾಹಕರಿಗೆ ಉತ್ತಮ ಗುಣಮಟ್ಟ ಮತ್ತು ಫ್ಯಾಶನ್ ಉಡುಪುಗಳನ್ನು ಒದಗಿಸುವ ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮ ಉತ್ತಮ ದೃಷ್ಟಿಕೋನದೊಂದಿಗೆ ತಮ್ಮ ಸಂಸ್ಥೆಯ ಬೆಳವಣಿಗೆಯ ಕಥೆಯನ್ನು ಪ್ರಾರಂಭಿಸಿದರು.

ಗುಣಮಟ್ಟದೊಂದಿಗೆ ಉತ್ಕೃಷ್ಟ ಸೇವೆಗೆ ಹೆಸರುವಾಸಿ ;

15 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಜಯಲಕ್ಷ್ಮಿ ಬ್ರಾಂಡ್ ಕೇರಳದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಅಲ್ಲದೆ ತಿರುವನಂತಪುರ, ತ್ರಿಶೂರ್ ಮತ್ತು ಕ್ಯಾಲಿಕಟ್‌ನಲ್ಲಿ ಭವ್ಯವಾದ ಶೋ ರೂಂಗಳನ್ನು ತೆರೆಯಿತು. ಇಂದು ಜಯಲಕ್ಷ್ಮಿ ಬ್ರ್ಯಾಂಡ್ ತನ್ನ ಗುಣಮಟ್ಟದ ಉತ್ಪನ್ನಗಳು, ಅತೀ ಅದ್ಭುತ ಸಂಗ್ರಹಗಳು ಮತ್ತು ಉತ್ಕೃಷ್ಟ ಸೇವೆಗೆ ಹೆಸರುವಾಸಿಯಾಗಿದೆ.

ಕಳೆದ 7 ದಶಕಗಳಲ್ಲಿ ಲಕ್ಷಾಂತರ ನಿಷ್ಠಾವಂತ ಗ್ರಾಹಕರಿಗೆ ಸೇವೆ ಸಲ್ಲಿಸಿದ ಜಯಲಕ್ಷ್ಮಿ ಬ್ರ್ಯಾಂಡ್ ಮದುವೆಯ ರೇಷ್ಮೆ ಸೀರೆಗಳ ಬೃಹತ ಸಂಗ್ರಹಗಳ ಮಧ್ಯೆ ವಧುವಿನ ಶೃಂಗಾರದ ಉಡುಪುಗಳ ಸಂಗ್ರಹ ತಾಣ’ (ಬ್ರೈಡಲ್ ಡೆಸ್ಟಿನೇಶನ್) ಎಂಬ ಟ್ಯಾಗ್‌ನ್ನು ಹೊಂದಿದೆ. ಎಂದು ನಾರಾಯಣ ಕಾಮತ್ ಅವರು ಸಂಸ್ಥೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಯಲಕ್ಷ್ಮೀ ಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕರಾದ ಸತೀಶ್ ಕಾಮತ್, ಗೋವಿಂದ ಕಾಮತ್, ಕಾರ್ಯ ನಿರ್ವಾಹಕ ನಿರ್ದೇಶಕ ಸುಜೀತ್ ಕಾಮತ್ ಉಪಸ್ಥಿತರಿದ್ದರು.

Comments are closed.