ಉಡುಪಿ: ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿಪಡಿಸಿದ ಆರೋಪಿಗಳಿಗೆ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಆರೋಪಿತರಾದ ಲಲಿತಾ ಭಟ್, ತುಳಸಿದಾಸ್ ಮಲ್ಯ ಮತ್ತು ಇಂದುಮತಿ ಮಲ್ಯ ಇವರು 2015, ಜುಲೈ 6 ರಂದು ಮೂಡು ತೋನ್ಸೆ ಗ್ರಾಮದ ಕಲ್ಯಾಣಪುರ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಕಮಲ ಬಾಯಿಯವರ ಬಾಬ್ತು ಸರ್ವೇ ನಂಬ್ರ: 169/7(ಬಿ) ಜಾಗದಲ್ಲಿ ಜಿಲ್ಲಾಧಿಕಾರಿಯವರ ಆದೇಶ ಸಂಖ್ಯೆ: ಸಿಡಿಎಸ್/ಎಂ, ಎಜಿ(2) ಎಸ್. ಆರ್.01/2015-16. ದಿನಾಂಕ: 29-05-2016 ನೇ ದರ ಆದೇಶದಂತೆ ಅದೇ ಸರ್ವೇ ನಂಬ್ರದಲ್ಲಿ ವಾಸವಾಗಿರುವ ವಸಂತ ಕುಮಾರ್ ಎಂಬುವರ ಮನೆಗೆ ಆರೋಪಿತರ ಮನೆಯ ಎದುರು ಇರುವ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ನೀಡಲು ಹೋಗಿದ್ದ ಬ್ರಹ್ಮಾವರ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮತ್ತು ಸಿಬ್ಬಂದಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬಿಡುವುದಿಲ್ಲವೆಂದು ವಿದ್ಯುತ್ ಕಂಬದ ಬಳಿ ಹೋಗದಂತೆ ತಡೆಯೊಡ್ಡಿ ಜಿಲ್ಲಾದಿಕಾರಿಯವರ ಆದೇಶವನ್ನು ಪಾಲಿಸಲು ಬಿಡದೇ ಕರ್ತವ್ಯ ಮಾಡಲು ಅಡ್ಡಿ ಪಡಿಸಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಭಾದಂಸಂ ಕಲಂ 353 ಜೊತೆಗೆ 34 ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಮಲ್ಪೆ ಆಗಿನ ಪೊಲೀಸ್ ಉಪನಿರೀಕ್ಷಕ ರವಿ ಕುಮಾರ್ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಎಮ್.ಎನ್.ಮಂಜುನಾಥ್ ರವರು 2 ನೇ ಆರೋಪಿ ತುಳಸಿದಾಸ್ ಮಲ್ಯ ಮತ್ತು 3 ನೇ ಆರೋಪಿ ಇಂದುಮತಿ ಮಲ್ಯರವರಿಗೆ 1000 ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.