ಕರಾವಳಿ

ಸಾಮೂಹಿಕ ವಿವಾಹಕ್ಕೆ ಚಿನ್ನದ ತಾಳಿ, ಗುಂಡುಗಳ ಸರಬರಾಜು- ಟೆಂಡರ್ ಆಹ್ವಾನ

Pinterest LinkedIn Tumblr

ಉಡುಪಿ: ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ದೇವಾಲಯಗಳಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ನೆರವೇರಿಸಲು ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆಯನ್ವಯ ಆದೇಶಿಸಲಾಗಿರುತ್ತದೆ.

(ಸಾಂದರ್ಭಿಕ ಚಿತ್ರ)

ಆದ್ದರಿಂದ ಏಪ್ರಿಲ್ 26 ಹಾಗೂ ಮೇ 24 ರಂದು ವಿವಿಧ ದೇವಾಲಯಗಳಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು- ವರರಿಗೆ ಅವಶ್ಯಕವಾದ ಒಂದು ಚಿನ್ನದ ತಾಳಿ ಹಾಗೂ ಎರಡು ಗುಂಡುಗಳು ಸೇರಿಸಿ 8 ಗ್ರಾಂ. ತೂಕದಲ್ಲಿ 14 ಗ್ರಾಂ ಬೆಳ್ಳಿಯ ಸರಿಗೆಯಲ್ಲಿ (ಚಿನ್ನದ ಲೇಪನವಿರುವ) ಕರಿಮಣಿ ಪೋಣಿಸಿದ 26 ಇಂಚು ಉದ್ದದ ಮಾಂಗಲ್ಯ ಸೂತ್ರವನ್ನು ಸರಬರಾಜು ಮಾಡಲು ಆಸಕ್ತಿಯುಳ್ಳ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ಅಧಿಕೃತ ತಯಾರಕರು / ಸರಬರಾಜುದಾರರಿಂದ ಷರತ್ತಿಗೊಳಪಟ್ಟು ಟೆಂಡರ್‍ಗಳನ್ನು http://www.eproc.karnataka.gov.in ವೆಬ್‍ಸೈಟ್‍ನಲ್ಲಿ ದ್ವಿಪ್ರತಿಯಲ್ಲಿ ಆಹ್ವಾನಿಸಲಾಗಿದೆ.

ಟೆಂಡರ್‍ಗಳನ್ನು ಫೆಬ್ರವರಿ 25 ರ ಸಂಜೆ 4 ಗಂಟೆಯ ಒಳಗೆ ಸಲ್ಲಿಸಬೇಕು. ಟೆಂಡರ್ ತಾಂತ್ರಿಕ ಬಿಡ್ಡನ್ನು ಫೆಬ್ರವರಿ 28 ರಂದು ಬೆಳಗ್ಗೆ 11 ಗಂಟೆಗೆ ತೆರೆಯಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.