ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮಿಂಚಿನ ನೊಂದಣಿಯಲ್ಲಿ 6918 ಅರ್ಜಿ ಸಲ್ಲಿಕೆ

Pinterest LinkedIn Tumblr

ಉಡುಪಿ: ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಕುರಿತಂತೆ ಜಿಲ್ಲೆಯಲ್ಲಿ ಜನವರಿ 6 ರಿಂದ 10 ರ ವರೆಗೆ ನಡೆದ ಮಿಂಚಿನ ನೊಂದಣಿ ಕಾರ್ಯಕ್ರಮದಲ್ಲಿ 6918 ಮತದಾರರದಿಂದ ಅರ್ಜಿ ಸಲ್ಲಿಕೆಯಾಗಿದೆ.

(ಸಾಂದರ್ಭಿಕ ಚಿತ್ರ)

118 ಬೈಂದೂರು ಕ್ಷೇತ್ರದ 246 ಮತಗಟ್ಟೆಗಳಲ್ಲಿ 889 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 388 ಮಂದಿ ರದ್ದುಗೊಳಿಸಲು, 311 ಮಂದಿ ತಿದ್ದುಪಡಿಗೆ ಹಾಗೂ 12 ಮಂದಿ ವಿಧಾನಸಭಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಬೈಂದೂರು ಕ್ಷೇತ್ರದಲ್ಲಿ ಒಟ್ಟು 1600 ಅರ್ಜಿ ಸಲ್ಲಿಕೆಯಾಗಿವೆ.

119 ಕುಂದಾಪುರ ಕ್ಷೇತ್ರದ 222 ಮತಗಟ್ಟೆಗಳಲ್ಲಿ 893 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 85 ಮಂದಿ ರದ್ದುಗೊಳಿಸಲು, 69 ಮಂದಿ ತಿದ್ದುಪಡಿಗೆ ಹಾಗೂ 28 ಮಂದಿ ವಿಧಾನಸಭಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಕುಂದಾಪುರ ಕ್ಷೇತ್ರದಲ್ಲಿ ಒಟ್ಟು 1075 ಅರ್ಜಿ ಸಲ್ಲಿಕೆಯಾಗಿವೆ.

120 ಉಡುಪಿ ಕ್ಷೇತ್ರದ 226 ಮತಗಟ್ಟೆಗಳಲ್ಲಿ 959 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 631 ಮಂದಿ ರದ್ದುಗೊಳಿಸಲು, 430 ಮಂದಿ ತಿದ್ದುಪಡಿಗೆ ಹಾಗೂ 68 ಮಂದಿ ವಿಧಾನಸಭಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಉಡುಪಿ ಕ್ಷೇತ್ರದಲ್ಲಿ ಒಟ್ಟು 2088 ಅರ್ಜಿ ಸಲ್ಲಿಕೆಯಾಗಿವೆ.

121 ಕಾಪು ಕ್ಷೇತ್ರದ 208 ಮತಗಟ್ಟೆಗಳಲ್ಲಿ 594 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 299 ಮಂದಿ ರದ್ದುಗೊಳಿಸಲು, 224 ಮಂದಿ ತಿದ್ದುಪಡಿಗೆ ಹಾಗೂ 10 ಮಂದಿ ವಿಧಾನಸಭಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಕಾಪು ಕ್ಷೇತ್ರದಲ್ಲಿ ಒಟ್ಟು 1127 ಅರ್ಜಿ ಸಲ್ಲಿಕೆಯಾಗಿವೆ.

122 ಕಾರ್ಕಳ ಕ್ಷೇತ್ರದ 209 ಮತಗಟ್ಟೆಗಳಲ್ಲಿ 719 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 90 ಮಂದಿ ರದ್ದುಗೊಳಿಸಲು, 157 ಮಂದಿ ತಿದ್ದುಪಡಿಗೆ ಹಾಗೂ 62 ಮಂದಿ ವಿಧಾನಸಭಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಕಾರ್ಕಳ ಕ್ಷೇತ್ರದಲ್ಲಿ ಒಟ್ಟು 1028 ಅರ್ಜಿ ಸಲ್ಲಿಕೆಯಾಗಿವೆ.

ಮಿಂಚಿನ ನೊಂದಣಿ ಅವಧಿಯಲ್ಲಿ ಜಿಲ್ಲೆಯ ಒಟ್ಟು 1111 ಮತಗಟ್ಟೆಗಳ ವ್ಯಾಪ್ತಿಯಲ್ಲಿ 4054 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 1493 ಮಂದಿ ರದ್ದುಗೊಳಿಸಲು, 1191 ಮಂದಿ ತಿದ್ದುಪಡಿಗೆ ಹಾಗೂ 180 ಮಂದಿ ವಿಧಾನಸಭಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಒಟ್ಟು 6918 ಅರ್ಜಿಗಳು ಸಲ್ಲಿಕೆಯಾಗಿವೆ.

ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಪ್ರಸ್ತುತ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲು ಜನವರಿ 27 ಕೊನೆಯ ದಿನಾಂಕವಾಗಿದ್ದು, ಪರಿಷ್ಕøತ ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 7 ರಂದು ಪ್ರಕಟಿಸಲಾಗುವುದು, ಜನವರಿ 25 ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನದಂದು, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಕೆಲವು ಮಂದಿಗೆ ಸಾಂಕೇತಿಕವಾಗಿ ಹೊಸ ಮತದಾರರ ಚೀಟಿಯನ್ನು ವಿತರಿಸಲಾಗುವುದು

Comments are closed.