ಮಂಗಳೂರು : ಚತುರ್ವೇದ ಪಂಡಿತರೂ, ವ್ಯಾಖ್ಯಾನಕಾರರೂ, ವ್ಯಾಕರಣ ವಿದ್ವಾಂಸರೂ ಆಗಿರುವ ಕದ್ರಿಯ ಡಾ| ಪ್ರಭಾಕರ ಅಡಿಗರು ರಚಿಸಿರುವ ಶುತಿತತ್ತ್ವ ಪ್ರದೀಪಿಕಾ (ಫಿಟ್ ಸೂತ್ರಾರ್ಥವ್ಯಾಖ್ಯಾನಮ್) ಗ್ರಂಥ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನುಡಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ಶುತಿತತ್ತ್ವ ಪ್ರದೀಪಿಕಾ ‘ಗ್ರಂಥ’ ಲೋಕಾರ್ಪಣೆಗೈದು ಅವರು ಮಾತನಾಡಿದರು. ವೇದದ ಶಬ್ದ ಸ್ವರಗಳಿಗೆ ಸಂಬಂಧಿಸಿದ ಈ ಗ್ರಂಥವು ವೇದಾಧ್ಯಯನವನ್ನು ಸಾಂಗವಾಗಿ ಮಾಡುವವರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು. ಶ್ರೀಯುತ ಅಡಿಗರಿಂದಇನ್ನಷ್ಟು ಮೌಲ್ಯಯುತ ಹಾಗೂ ಸಂಶೋಧನಾತ್ಮಕವಾದ ಗ್ರಂಥಗಳು ರಚಿಸಿಲ್ಪಡುವಂತಾಗಲೆಂದು ಶುಭ ಹಾರೈಸಿದರು.
ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿರಾಜಾಧ್ಯಕ್ಷ ಹರಿಕೃಷ್ಣ ಪುನರೂರುಡಾ| ಪ್ರಭಾಕರಅಡಿಗ ಈ ಸಂದರ್ಭ ಉಪಸ್ಥಿತರಿದ್ದರು.

Comments are closed.