ಕರಾವಳಿ

ನವಂಬರ್ 12 : ವಿಜ್ಞಾನಿ ಇಗ್ನೇಷಿಯಸ್ ಒರ್‍ವಿನ್ ನೊರ್‍ಹೊನಾರಿಗೆ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು, ಆಕ್ಟೋಬರ್.30 : 15ನೇ ವರುಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ವಿಷರಹಿತ, ಪರಿಸರ ಸ್ನೇಹಿಯಾದ ಸೊಳ್ಳೆ ನಿವಾರಕ ಯಂತ್ರವನ್ನು ಅವಿಷ್ಕಾರ ಮಾಡಿದ ಅಂತರಾಷ್ಟೀಯ ಮಾನ್ಯತೆ ಪಡೆದ ವಿಜ್ಞಾನಿ ಮಂಗಳೂರಿನ ಇಗ್ನೇಷಿಯಸ್ ಒರ್‍ವಿನ್ ನೊರ್‍ಹೊನಾ ಅವರನ್ನು ಅಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಕಾರ್ಯದರ್ಶಿ ಹಾಗೂ ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿ’ಕುನ್ಹಾ ತಿಳಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತನ್ನ ಹದಿಮೂರು ವರುಷಗಳ ನಿರಂತರ ಪ್ರಯತ್ನದ ಫಲವಾಗಿ ಮಂಗಳೂರಿನಲ್ಲಿಯೇ ಸೊಳ್ಳೆ ನಿವಾರಕ ಯಂತ್ರದ ಉತ್ಪಾದನಾ ಘಟಕದಿಂದ ವಿವಿಧ ಮಾದರಿಯ ಸೊಳ್ಳೆ ನಿವಾರಕ ಯಂತ್ರಗಳನ್ನು ತಯಾರಿಸಿ ಮನೆಗಳಲ್ಲಿ ಮಾತ್ರವಲ್ಲ ಗೋಶಾಲೆಗಳಲ್ಲಿ, ಹಾಸ್ಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಈ ಯಂತ್ರವನ್ನು ಯಶಸ್ವಿಯಾಗಿ ಉಪಯೋಗಿಸಿ ಕೋಟ್ಯಾಂತರ ಸೊಳ್ಳೆಗಳನ್ನು ನಾಶ ಮಾಡಿ ತೋರಿಸಿ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕೋರ್ಡನಲ್ಲಿ ದಾಖಲಾಗಿದ್ದಾರೆ.

ಮೊಝಿಕ್ವಿಟ್ ಎಂಬ ಸೊಳ್ಳೆ ಕೊಲ್ಲುವ ಹಾಗೂ ಯಾವುದೇ ರಾಸಾಯನಿಕದ ಉಪಯೋಗ ರಹಿತ ಯಂತ್ರಕ್ಕೆ ಕೇಂದ್ರ ಸರಕಾರ ಈಗಾಗಲೇ ರೂ ಹದಿನೈದು ಲಕ್ಶದ ಅನುದಾನ ನೀಡಿ ಉತ್ಪಾದನೆಗೆ ಅನುವು ಮಾಡಿದೆ. ವಿಶೇಷವೆಂದರೆ ಈ ಪ್ರಶಸ್ತಿಗಾಗಿ ಇಗ್ನೇಷಿಯಸ್ ಒರ್‍ವಿನ್ ನೊರ್‍ಹೊನಾ ಇವರ ಹೆಸರನ್ನು ಬೆಂಗಳೂರಿನ ಮಲೇರಿಯಾ ಸಂಶೋಧನಾ ಸಂಸ್ಥೆಯ ಮಾಜಿ ವಿಜ್ಞಾನಿಯೊಬ್ಬರು ಸೂಚಿಸಿದ್ದಾರೆ. ಡೆಂಗ್ಯು, ಮಲೇರಿಯಾ ಪೀಡಿತ ಇತ್ತೀಚಿಗಿನ ದಿನಗಳಲ್ಲಿ ಈ ಸಾಧನೆ ನಿಜವಾಗಿ ಸಹಕಾರಿಯಾಗಲಿದೆ ಎಂದರು.

ನವಂಬರ್ 12ರಂದು ಪ್ರಸಸ್ತಿ ಪ್ರಧಾನ :

ನವಂಬರ್ 12ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 4 ಗಂಟೆಗೆ ಜರಗಲಿರುವ ಪ್ರಸಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಂಗಳೂರಿ ನ ಬಿಷಪರಾದ ಅತೀ ವಂದನೀಯ ಡಾಕ್ಟರೇಟ್ ಪೀಟರ್ ಪಾವ್ಲ್ ಸಾಲ್ದಾನಾ ಅದ್ಯಕ್ಷತೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.

ಇದೇ ಸಂದರ್ಭದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ತನ್ನ ವಾರ್ಷಿಕೋತ್ಸವವನ್ನೂ ಆಚರಿಸಿ ಗೀತಾ ನಾಟಕ ಗೋಕುಲ ನಿರ್ಗಮನ ಹಾಗೂ ಇಪ್ಪತೈದು ಕವಿಗಳ ಕವಿ ಗೋಷ್ಟಿ ನಡೆಸಲಿರುವರು.

ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕರಾದ ಜೆ ಆರ್ ಲೋಬೊ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೊಂಕಣಿ ಸಾಹಿತ್ಯ ಪರಿಷತ್‌ನ ಮಾಜಿ ಅದ್ಯಕ್ಷ ರೋಯ್ ಕಾಸ್ತೆಲಿನೊ, ಚುಟುಕು ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಡಾ ಸುರೇಶ್ ನೆಗಲಗುಳಿ ಇರುವರು ಭಾಗವಹಿಸಲಿರುವರು ಎಂದವರು ತಿಳಿಸಿದರು.

ಆಯ್ಕೆ ಸಮಿತಿ: ಕಳೆದ 15 ವರುಷಗಳಿಂದ ಆಯ್ಕೆ ಸಮಿತಿಯ ಕಾರ್ಯದರ್ಶಿಯಾಗಿ ರೇಮಂಡ್ ಡಿ’ಕುನ್ಹಾ ಹಾಗೂ ಕೊಂಕಣಿ ಸಾಹಿತ್ಯ ಪರಿಷತ್‌ನ ಮಾಜಿ ಅದ್ಯಕ್ಷ ರೋಯ್ ಕಾಸ್ತೆಲಿನೊ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಒಟ್ಟಾಗಿ ಸಂಚಾಲಕತ್ವ ವಹಿಸಿ ಈ ಪ್ರಶಸ್ತಿಯ ಆಯ್ಕೆ ಆಗಲಿದೆ ಪ್ರಶಸ್ತಿಯ ಸಂಯೋಜಕರಾಗಿ ಅಂಜೆಲೋರ್ ಚರ್ಚಿನ ವಂ| ಗುರು ವಿಲಿಯಂ ಮೆನೆಜಸ್ ಹಾಗೂ ಮಂಗಳೂರಿನ ಫರ್ ವಿಂಡ್ಸ್ ಜಾಹಿರಾತು ಸಂಸ್ಥೆಯ ನಿರ್ದೇಶಕರಾದ ಇ. ಫೆರ್ನಾಂಡಿಸ್ ಸಹಕರಿಸುತ್ತಾರೆ.

ಇತರ ಸದಸ್ಯರು: ಕಾರ್ಪೋರೇಷನ್ ಬ್ಯಾಂಕ್‌ನ ಮಾಜಿ ಮಹಾ ಪ್ರಭಂದಕರಾದ ಸಿ. ಜಿ. ಪಿಂಟೋ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಅಭಿವೃದ್ಧಿ ಮಂಡಳಿ ಸದಸ್ಯ ಡಾ ಬಿ ಜಿ ಸುವರ್ಣ ಇವರುಗಳು ಇತರ ಸದಸ್ಯರಾಗಿ ಕಾರ್ಯನಿರ್ವಹಿಸಲಿರುವರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೊಂಕಣಿ ಸಾಹಿತ್ಯ ಪರಿಷತ್‌ನ ಮಾಜಿ ಅದ್ಯಕ್ಷ ರೋಯ್ ಕಾಸ್ತೆಲಿನೊ ಮತ್ತು ನಗರದ ಜಾಹಿರಾತು ಸಂಸ್ಥೆಯ ನಿರ್ದೇಶಕರಾದ ಇ. ಫೆರ್ನಾಂಡಿಸ್ ಪೂರಕ ಮಾಹಿತಿ ನೀಡಿದರು.

Comments are closed.