ಕರಾವಳಿ

ಅ.3 ರಿಂದ 8: ಉಳ್ಳಾಲ ಶ್ರೀ ಶಾರದಾ ನಿಕೇತನದಲ್ಲಿ 72ನೇ ಶಾರದೋತ್ಸವ

Pinterest LinkedIn Tumblr

ಮಂಗಳೂರು / ಉಳ್ಳಾಲ: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ‌ಉತ್ಸವ ಸಮಿತಿ, ಉಳ್ಳಾಲ ಇದರ ವತಿಯಿಂದ 72ನೇ ವರ್ಷದ ಶಾರದಾ‌ ಉತ್ಸವವು‌ ಇದೇ‌ಅಕ್ಟೋಬರ್ 3, ಗುರುವಾರದಿಂದ ಅ.8 ಮಂಗಳವಾರವರೆಗೆ ‘ಶ್ರೀ ಶಾರದಾ ನಿಕೇತನದಲ್ಲಿ ಜರಗಲಿರುವುದು.

ತಾ. 3ರಂದು ಸಂಜೆ ಶ್ರೀ ಶಾರದಾ ಮಾತೆಯ ಪಟ್ಟ ಬಂಧೋತ್ಸವ ಮೆರವಣಿಗೆ ಶ್ರೀ ಶಾರದಾ ನಿಕೇತನದಿಂದ ಹೊರಟು ಉಳ್ಳಾಲದ ಪ್ರಮುಖ ಬೀದಿಗಳಲ್ಲಿ ಸಾಗಿ ಬರಲಿದ್ದು. ಶುಕ್ರವಾರ ತಾ.5ರಂದು ಮಧ್ಯಾಹ್ನ ಶಾರದಾ ಪ್ರತಿಷ್ಠೆಯಾಗಲಿದೆ.

ಅಂದು ಸಂಜೆಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿರುವುದು. ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಶಾಲೆ ಮತ್ತು ಬಿ.ಇ.ಎಂ. ಶಾಲೆ ಉಳ್ಳಾಲ ಇಲ್ಲಿನ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ಹಾಗೂ ಶ್ರೀ ಶಾರದಾ ಮಹಿಳಾ ವೇದಿಕೆಯ‌ಆಶ್ರಯದಲ್ಲಿ ದಿ| ಯು. ಸುಬ್ರಾಯ ನಾಯಕ್ ಸ್ಮರಣಾರ್ಥ ಕಲಾ ಕಾರ್ಯಕ್ರಮ ನಡೆಯುವುದು.

ತಾ. ೦5 ಶನಿವಾರ ಬೆಳಿಗ್ಗೆ ದಿ| ಪೈಲ್ವಾನ್ ಮೋತಿ ಪುತ್ರನ್ ಸ್ಮರಣಾರ್ಥ ಬೆಳ್ಳಿಗದೆಯ ಕುಸ್ತಿ ಪಂದ್ಯಾಟವು ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ಬ್ರದರ್‍ಸ್ ಸ್ಪೋರ್ಟ್ಸ್‌ಕ್ಲಬ್ ಹಾಗೂ ಬ್ರದರ್‍ಸ್‌ಯುವಕ ಮಂಡಲ ಇವರ ಸಂಯೋಜನೆಯಲ್ಲಿ ಹಮ್ಮಿಕೊಳ್ಳ ಲಾಗಿದೆ.

ರಾತ್ರಿ‌ಅನುದಾನಿತ ಮೊಗವೀರ ಹಿ.ಪ್ರಾ. ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿ ಪ್ರದರ್ಶನಗೊಳ್ಳಲಿರುವುದು. ತಾ. 06, ಭಾನುವಾರ, ಬೆಳಿಗ್ಗೆ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಅಪರಾಹ್ನರಸಪ್ರಶ್ನೆಜರಗಲಿದೆ. ಸಂಜೆ ಜರಗುವಧಾರ್ಮಿಕ ಸಭೆಯಲ್ಲಿ ದಿ| ಯುದಯಾನಂದ ನಾಯಕ್‌ ದತ್ತಿ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದ್ದು, ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರವನ್ನು ‘ದತ್ತಿ ಪ್ರಶಸ್ತಿ’ ನೀಡಿಗೌರವಿಸಲಾಗುವುದು.

ರಾತ್ರಿ ಶ್ರೀ ವಿದ್ಯಾರಣ್ಯ ಕಲಾ ವೃಂದ ಉಳ್ಳಾಲ ಇವರ‌ಆಶ್ರಯದಲ್ಲಿ ಕಲಾ ಕಾರ್ಯಕ್ರಮ ನಡೆಯುವುದು. ಸೋಮವಾರತಾ. 07ರಂದು ಸಂಜೆವಿಶೇಷ ಪೂಜೆ ‘ಶ್ರೀ ಚಂಡಿಕಾ‌ಅಷ್ಟೋತ್ತರ ಶತಪುಷ್ಪಾಂಜಲಿಕುಂಕುಮಾರ್ಚನೆ’ ಹಮ್ಮಿಕೊಂಡಿದ್ದು ನವ ವಧು-ವರರಿಂದ ನವಜ್ಯೋತಿ ಬೆಳಗಿಸಲಾಗುವುದು. ಪೂಜೆಯ ಬಳಿಕ ‘ಸಾರ್ವಜನಿಕ‌ಅನ್ನ ಸಂತರ್ಪಣೆ’ ನಡೆಯಲಿರುವುದು. ರಾತ್ರಿ ವಿಕ್ರಮ ಮಿತ್ರ ವೃಂದ ಉಳ್ಳಾಲ ಇವರಿಂದ ಕಲಾ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

ತಾ. ೮, ಮಂಗಳವಾರ ಬೆಳಿಗ್ಗೆ ಎಳೆಯ ಮಕ್ಕಳಿಗಾಗಿ ವಿದ್ಯಾರಂಭ ಪೂಜೆ’ ಜರಗಲಿದೆ. ಸಂಜೆ ಮಂಗಳಾರತಿಯ ಬಳಿಕ ಶಾರದಾ ಮಾತೆಯ ವಿಶೇಷ ಅಲಂಕೃತ ವಿಸರ್ಜನಾ ಮೆರವಣಿಗೆ ಹೊರಡುವುದು. ವಿವಿಧ ಸಂಘ ಸಂಸ್ಥೆಗಳ ಆಕರ್ಷಕಟ್ಯಾಬ್ಲೋ, ಹುಲಿವೇಷ ಇತ್ಯಾದಿಗಳಿಂದೊಡಗೂಡಿದ, ವೈಭವದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಉಳ್ಳಾಲದ ಸಮುದ್ರಕಿನಾರೆಯಲ್ಲಿ ಸಮಾರೋಪ ಸಮಾರಂಭಜರಗುವುದು. ಮಂಡ್ಯದ ವಿವೇಕ ಶಿಕ್ಷಣವಾಹಿನಿಯ ಸ್ಥಾಪಕ ನಿತ್ಯಾನಂದ ವಿವೇಕ ವಂಶಿ. ಸಮಾರೋಪ ಭಾಷಣ ಮಾಡಲಿರುವರು.

ಪ್ರತಿದಿನ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ದುರ್ಗಾ‌ಅಷ್ಟೋತ್ತರ ನಮಸ್ಕಾರ, ಲಲಿತಾ ಸಹಸ್ರನಾಮ ಪಠನ, ಪಾರಾಯಣೆ, ಅರ್ಚನೆ, ಪೂಜೆ ನಡೆಯಲಿದ್ದು, ಸೆಪ್ಟೆಂಬರ್ 29ನೇ ಭಾನುವಾರ, ಉಳ್ಳಾಲ ಭಾರತ ಪ್ರೌಢಶಾಲಾಕ್ರೀಡಾಂಗಣದಲ್ಲಿ ವಿವಿಧ‌ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು‌ ಉತ್ಸವ ಸಮಿತಿಯ ಗೌರವಾಧ್ಯಕ್ಷ ಯು.ಎಸ್. ಪ್ರಕಾಶ್, ಅಧ್ಯಕ್ಷ  ಶ್ರೀಕರ ಕಿಣಿ, ಗೌರವ‌ ಉಪಾಧ್ಯಕ್ಷ‌ ಉದಯ ಶಂಕರರಾವ್, ಕಾರ್ಯಾಧ್ಯಕ್ಷ  ವಿಜಯ ಉಳ್ಳಾಲ್ ಹಾಗೂ ಪ್ರಧಾನ ಕಾರ್ಯದರ್ಶಿ ಭರತ್‌ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುವರು.

Comments are closed.