ಕರಾವಳಿ

21 ಪ್ರಶಸ್ತಿ ಬಾಚಿಕೊಂಡ ಸಾಹಸಮಯ ಮಕ್ಕಳ ಚಿತ್ರ `ಗಂಧದ ಕುಡಿ’ ಬಿಡುಗಡೆ

Pinterest LinkedIn Tumblr

ಮಂಗಳೂರು : ಇನ್ವೆಂಜರ್ ಟೆಕ್ನಾಲಜೀಸ್ ಬ್ಯಾನರಿನಲ್ಲಿ ಕೆ. ಸತ್ಯೇಂದ್ರ ಪೈ ಮತ್ತು ಕೆ. ಕೃಷ್ಣ ಮೋಹನ್ ಪೈ ನಿರ್ಮಾಣದಲ್ಲಿ ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನದಲ್ಲಿ ತಯಾರಾದ `ಗಂಧದ ಕುಡಿ’ ಮಕ್ಕಳ ಚಲನ ಚಿತ್ರದ ಬಿಡುಗಡೆ ಸಮಾರಂಭವು ಶುಕ್ರವಾರ ಭಾರತ್ ಮಾಲ್‌ನಲ್ಲಿರುವ ಬಿಗ್‌ಸಿನಿಮಾಸ್ ಚಿತ್ರಮಂದಿರದಲ್ಲಿ ನೆರವೇರಿತು.

ಸಮರಂಭವನ್ನು ಚಿತ್ರ ನಿರ್ದೇಶಕ ದಿ. ಸಂತೋಷ್ ಶೆಟ್ಟಿಯವರ ತಾಯಿ ಲೀಲಾ ಶಂಕರ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಸಿನಿಮಾಕ್ಕೆ ಶುಭ ಹಾರೈಸಿದರು.

`ಗಂಧದ ಕುಡಿ’ ಚಲನ ಚಿತ್ರದ ನಿರ್ಮಾಪಕ ಕೆ. ಸತ್ಯೇಂದ್ರ ಪೈ ಅವರು ಮಾತನಾಡಿ, ಈ ಸಿನಿಮಾದಲ್ಲಿ ಪಶ್ಚಿಮ ಘಟ್ಟಗಳ ನಾಶದಿಂದ ಉಂಟಾಗುವ ಜಾಗತಿಕ ದುಷ್ಪರಿಣಾಮವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಕಲಾತ್ಮಕ ಕಥಾ ವಸ್ತುವಿಗೆ ಕಮರ್ಷಿಯಲ್ ಟಚ್ ನೀಡಲಾಗಿದೆ. ಮಲೆನಾಡಿನ ರಮಣೀಯ ತಾಣಗಳು ಮನೋಜ್ಞವಾಗಿ ಮೂಡಿ ಬಂದಿದೆ. ‘ನಾಡೆಂದರೆ ಕನ್ನಡ ನಾಡು’ ಹಾಡು ವಿಜಯ ಪ್ರಕಾಶ್ ಧ್ವನಿಯಲ್ಲಿ ಹಿಟ್ ಆಗಿದೆ. ಈ ಸಿನಿಮಾದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವೂ ಇದೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕೆಂದು ಕೆ. ಸತ್ಯೇಂದ್ರ ಪೈ ವಿನಂತಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಡ್‌ಲ್ಯಾಬ್ಸ್‌ನ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ, ಚಲನ ಚಿತ್ರ ನಿರ್ಮಾಪಕ ಕೆ ಕೃಷ್ಣ ಮೋಹನ್ ಪೈ, ಸುಧಾಕರ ಕುದ್ರೋಳಿ, ಮಧು ಸುರತ್ಕಲ್, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರಸಾದ್ ಕೆ. ಶೆಟ್ಟಿ, ನರಸಿಂಹ ಮಲ್ಯ, ಅರವಿಂದ ಶೆಟ್ಟಿ ರಜಾಕ್ ಪುತ್ತೂರು, ರವಿರಾಜ ಗಾಣಿಗ, ಚೇತನ್, ಪ್ರೀತಾ ಮಿನೆಜಸ್, ಯೋಗೀಶ್ , ವಾಸುದೇವ ಕಲ್ಲುರಾಯ, ಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು. ಆರ್. ಜೆ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.

ಗಂಧದ ಕುಡಿ ಸಿನಿಮಾ ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಪಿವಿ‌ಆರ್, ಸಿನಿಪೊಲೀಸ್, ಉಡುಪಿಯಲ್ಲಿ ಆಶೀರ್ವಾದ್, ಮಣಿಪಾಲದಲ್ಲಿ ಬಿಗ್ ಸಿನಿಮಾಸ್, ಕಾಸರಗೋಡಿನಲ್ಲಿ ಶ್ರೀಕೃಷ್ಣ, ಕಾರ್ಕಳದಲ್ಲಿ ಪ್ಲಾನೆಟ್, ಮೂಡುಬಿದ್ರೆ ಯಲ್ಲಿ ಅಮರಶ್ರೀ, ಕುಂದಾಪುರದಲ್ಲಿ ವಿನಾಯಕ, ಬೈಂದೂರಿನಲ್ಲಿ ಶಂಕರ್, ಹಾಗೂ ರಾಜ್ಯಾದ್ಯಂತ ಸಿನಿಮಾ ತೆರೆಕಂಡಿದೆ.

ಸಿನಿಮಾಕ್ಕೆ 21 ಪ್ರಶಸ್ತಿ :

ಭಾರತ ಮಾತ್ರವಲ್ಲದೆ ಅಮೆರಿಕಾದ ಸ್ಯಾನ್ ಡಿಯಾಗೋ, ಮೆಕ್ಸಿಕೊ, ಚಿಲಿ ಸೇರಿದಂತೆ 21vಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡ ಈ ಚಿತ್ರ ವಿಶ್ವ ಮಟ್ಟದ ಚಿತ್ರರಂಗದ ತಂತ್ರಜ್ಞರಿಂದ ಪ್ರಶಂಸೆಯನ್ನು ಗಳಿಸಿ ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ

ತಾರಾಗಣದಲ್ಲಿ ನಿಧಿ ಸಂಜೀವ ಶೆಟ್ಟಿ , ಕೀಷಾ, ಆಶ್ಲಿನ್, ಪ್ರಣತಿ, ವಿಘ್ನೇಶ್, ಶ್ರೀಶಾ, ಶ್ರೇಯಸ್, ಅಲ್ಲದೇ ಕನ್ನಡದ ಹೆಸರಾಂತ ಹಿರಿಯ ನಟ ರಮೇಶ್ ಭಟ್, ಶಿವಧ್ವಜ್ ಜ್ಯೋತಿ ರೈ, ಅರವಿಂದ ಶೆಟ್ಟಿ ಕೊಜಕೊಳ್ಳಿ, ತಮ್ಮಣ್ಣ ಶೆಟ್ಟಿ, ದೀಪಕ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಜಿಪಿ ಭಟ್ ಅಭಿನಯಿಸಿದ್ದಾರೆ. ಸಚಿನ್ ಶೆಟ್ಟಿ ಮತ್ತು ಲಕ್ಷ್ಮೀಷ್ ಶೆಟ್ಟಿ ಛಾಯಾಗ್ರಹಣ ರವಿ ರಾಜ್ ಗಾಣಿಗ ಸಂಕಲನ, ಪ್ರದೀಪ್ ರಾಯ್ ಕಲಾ ನಿರ್ದೇಶನ, ಪ್ರೀತಾ ಮಿನೇಜಸ್ ಸಹ ನಿರ್ದೇಶಕರಾಗಿ ದುಡಿದಿದ್ದಾರೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ರಝಾಕ್ ಪುತ್ತೂರು ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇ ಶನ ಮಾಡಿದ್ದಾರೆ. ದಕ್ಷಿಣ ಭಾರತದ ಹೆಸ ರಾಂತ ಗಾಯಕ ವಿಜಯಪ್ರಕಾಶ್, ಶ್ರೇಯಾ ಜೈದೀಪ್, ಪ್ರಕಾಶ್ ಮಹದೇವ್, ರವಿ ಮಿಶ್ರಾ , ಸಾತ್ವಿ ಜೈನ್, ಲತೇಶ್ ಪೂಜಾರಿ ಮುಂತಾ ದವರು ಹಾಡಿದ್ದಾರೆ.

Comments are closed.