ಕರಾವಳಿ

ಮಹಾತ್ಮ ಗಾಂಧೀಜಿ ಮಂಗಳೂರು ಭೇಟಿಯ ವಿಶೇಷ ಅಂಚೆ ಲಕೋಟೆ ಬಿಡುಗಡೆ

Pinterest LinkedIn Tumblr

ಮಂಗಳೂರು : ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ವತಿಯಿಂದ ಕರ್ನಾಟಕ ಅಂಚೆ ವತ್ತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನೋತ್ಸವದ ಆಚರಣೆಯ ಸ್ಮರಣಾರ್ಥ ಮಹಾತ್ಮ ಗಾಂಧೀಜಿ ಮಂಗಳೂರು ಭೇಟಿಯ ವಿಶೇಷ ಅಂಚೆ ಲಕೋಟೆಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಿತು.

ನಗರದ ಹೊಯಿಗೆ ಬಜಾರ್‌ನ ಜ್ಞಾನೋದಯ ಸಮಾಜ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕರ್ನಾಟಕ ಪ್ರಾಂತ್ಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಗಾಂಧೀಜಿ ಅವರ ಬದುಕು ಸರಳತೆಯಿಂದ ಕೂಡಿದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಗಾಂಧೀಜಿ ಅವರ ಬದುಕಿನ ಸೂತ್ರಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಧಾರ್ಮಿಕ ಕೇಂದ್ರಗಳ ರಕ್ಷಣೆಯ ಮಾದರಿಯಲ್ಲಿ ಗಾಂಧೀಜಿ ಬಂದ ಸ್ಥಳಗಳ ರಕ್ಷಣೆಯಾಗಬೇಕು ಎಂದರು.

1857ರಲ್ಲಿ ಅಸಹಕಾರ ಚುಳವಳಿಯ ಸಮಯದಲ್ಲಿ ಎಲ್ಲರನ್ನು ಒಟ್ಟುಗೂಡಿಸುವ ಜತೆಗೆ ಏಕತೆ ಹುಟ್ಟು ಹಾಕುವ ಕೆಲಸವನ್ನು ಗಾಂಧೀಜಿ ಮಾಡಿದ್ದರು. ಅದೊಂದು ದೊಡ್ಡ ಕೆಲಸವಾಗಿದೆ. ಈಗ ಯಾವುದೇ ರಾಜ್ಯದಲ್ಲಾದರೂ ಒಂದು ವಿಚಾರದಲ್ಲಿ ಏಕತೆ ತರಲು ಸಾಧ್ಯವಾಗುತ್ತಿಲ್ಲ. ಆದರೆ ಗಾಂಧೀಜಿ ಇಡೀ ದೇಶದಲ್ಲಿ ಸ್ವಾತಂತ್ರ್ಯ ಎನ್ನುವ ಕಲ್ಪನೆಯಡಿ ಏಕತೆ ತರುವಲ್ಲಿ ಯಶಸ್ವಿಯಾಗಿದ್ದರು. ಗಾಂಧೀಜಿಯಿಂದ ಇಂದಿನ ರಾಜಕೀಯ ಮುಖಂಡರು ಕಲಿಯಬೇಕಾದ ವಿಚಾರ ಬಹಷ್ಟಿದೆ ಎಂದು ಜಿಲ್ಲಾಧಿಕಾರಿ ನುಡಿದರು.

ಈ ಸಂದರ್ಭ ಜಿ.ಜಿ. ಲಕ್ಷ್ಮಣ ಪ್ರಭು ಹಾಗೂ ಜ್ಞಾನೋದಯ ಸಮಾಜ ಮಂದಿರದ ಅಧ್ಯಕ್ಷ ಪ್ರೇಮ್‌ಚಂದ್ ತಿಂಗಳಾಯ ಗಾಂಧೀಜಿ ಹಾಗೂ ಅರು ಭೇಟಿಯ ಬಗ್ಗೆ ಮಾತನಾಡಿದರು.

ಮಂಗಳೂರು ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಶ್ರಿಹರ್ಷ ಎನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಈಸ್ಟ್ ಸಬ್ ಡಿವಿಜನ್‌ನ ಎಎಸ್‌ಪಿ ಮೆಕ್ಸಿ ಜಿ ಪಿಂಟೋ ವಂದಿಸಿದರು. ಅಂಚೆ ಇಲಾಖೆಯ ಎಎಸ್‌ಪಿ ಜೋಸ್ೆ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

ಹೊಯಿಗೆ ಬಜಾರ್‌ ಜ್ಞಾನೋದಯ ಸಮಾಜ ಮಂದಿರಕ್ಕೆ ಗಾಂಧೀಜಿ ಭೇಟಿ

ಮಂಗಳೂರು ಹೊಯಿಗೆ ಬಜಾರ್‌ನಲ್ಲಿರುವ ಜ್ಞಾನೋದಯ ಸಮಾಜ ಮಂದಿರಕ್ಕೆ 1934ರ ಫೆ.24ರಂದು ಗಾಂಧೀಜಿ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮೊಗವೀರ ಸಮಾಜದ ಬಂಧುಗಳು ಗಾಂಧೀಜಿಗೆ ಮನವಿ ಪತ್ರವನ್ನು ಕೂಡ ನೀಡಿದ್ದರು.

ಜ್ಞಾನೋದಯ ಸಮಾಜ ಮಂದಿರವನ್ನು 1910ರ ಫೆ.22ರಂದು ಸ್ವಾತಂತ್ರ್ಯಹೋರಾಟಗಾರ ಮೋನಪ್ಪ ತಿಂಗಳಾಯ ನಿರ್ಮಾಣ ಮಾಡಿದ್ದರು. ವಿಶೇಷ ಅಂಚೆ ಲಕೋಟೆಯಲ್ಲಿ ಜ್ಞಾನೋದಯ ಸಮಾಜ ಮಂದಿರ, ಮೊಗವೀರ ಬಂಧುಗಳು ಗಾಂಧೀಜಿಗೆ ನೀಡಿದ ಪತ್ರ, ಮಂಗಳೂರು ಬೇಟಿಯ ವಿಚಾರಗಳನ್ನು ಚಿತ್ರಿಸಲಾಗಿದೆ.

Comments are closed.