ಕರಾವಳಿ

ಸ್ತ್ರೀಶಕ್ತಿ ಗೊಂಚಲು ಸದಸ್ಯರಿಗೆ ಬಲವರ್ಧನೆ ಹಾಗೂ ಕೌಶಲ್ಯವರ್ಧಕ ತರಬೇತಿ

Pinterest LinkedIn Tumblr

ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ತ್ರೀಶಕ್ತಿ ಬ್ಲಾಕ್‍ಸೊಸೈಟಿ ಮಂಗಳೂರು ಗ್ರಾಮಾಂತರ ವತಿಯಿಂದ ಗುರುಪುರ ಹೋಬಳಿ ಮಟ್ಟದ ಸ್ತ್ರೀಶಕ್ತಿ ಗೊಂಚಲು ಸದಸ್ಯರಿಗೆ ಗುಂಪು ಬಲವರ್ಧನೆ ಹಾಗೂ ಕೌಶಲ್ಯವರ್ಧಕ ವಿಷಯದ ಬಗ್ಗೆ ಮೂರು ದಿನದ ತರಬೇತಿ ಕಾರ್ಯಕ್ರಮ ಸ್ತ್ರೀಶಕ್ತಿ ಭವನ ಎಡಪದವು ಇಲ್ಲಿ ಉದ್ಘಾಟನೆಗೊಂಡಿತು.

ಜಿಲ್ಲಾ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನಗೌಡ ಇವರು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡುತ್ತಾ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರ್ಕಾರ ಸಾಕಷ್ಟು ಯೋಜನೆಯನ್ನು ತರುತ್ತಿದೆ. ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಸ್ವಉದ್ಯೋಗ ಮಾಡಿ ಆರ್ಥಿಕವಾಗಿ ಸದೃಢರಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಮಂಗಳೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ರಘು ಇವರು ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿರುತ್ತದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಭಿ ಬದುಕಲು ಸ್ತ್ರೀಶಕ್ತಿ ಸಂಘ ಹಾಗೂ ಇಂತಹ ತರಬೇತಿ ಸಹಕಾರಿಯಾಗಿದೆ ಎಂದರು. ಹಾಗೂ ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿಯವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಗ್ರಾಮಾಂತರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ.ಕೆ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತನಾಡಿ ನಮ್ಮ ತಾಲೂಕಿನಲ್ಲಿ ಸ್ತ್ರೀಶಕ್ತಿ ಸಂಘಗಳು ತೊಡಗಿಕೊಂಡ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಡಪದವು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೋಗಮಲ್ಲಣ್ಣ, ಹಿರಿಯ ಮೇಲ್ವಿಚಾರಕಿ ಉಷಾ.ಡಿ. ಲೆಕ್ಕ ಸಹಾಯಕ ಇಸ್ಮಾಯಿಲ್, ಸಂಪನ್ಮೂಲ ವ್ಯಕ್ತಿಗಳಾಗಿ ಹರಿಣಿ ರಾವ್, ಪಂಚಾಯತ್ ಸದಸ್ಯರಾದ ಗೀತಾ ನಾಯ್ಕ, ಮೇಲ್ವಿಚಾರಕಿ ಚಂದ್ರಾವತಿ, ಶಾಲಿನಿ ಉಪಸ್ಥಿತರಿದ್ದರು.

Comments are closed.