ಕರಾವಳಿ

ಬ್ಯಾರೀಸ್ ವೆಲ್‍ಫೇರ್ ಫೋರಂ ಅಶ್ರಯದಲ್ಲಿ ಸಾಮೂಹಿಕ ವಿವಾಹ ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 14 ಜೋಡಿಗಳು

Pinterest LinkedIn Tumblr

ಮಂಗಳೂರು, ಫೆಬ್ರವರಿ.17: ಬ್ಯಾರಿ ಸಮುದಾಯದ ಅನಾಥ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕುಟುಂಬದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್‍ಫೇರ್ ಫೋರಂ (ಬಿಡಬ್ಲ್ಯುಎಫ್) ಹಮ್ಮಿಕೊಂಡಿರುವ ತನ್ನ 7ನೇ ಸಾಮೂಹಿಕ ವಿವಾಹ ಕಾರ್ಯಕ್ರಮ ಶನಿವಾರ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ‌ ಜರುಗಿತು.

ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ರವರ ನೇತ್ರತ್ವದಲ್ಲಿ ನಡೆದ ಈ ಸಾಮೂಹಿಕ ವಿವಾಹದಲ್ಲಿ 14 ಜೋಡಿಗಳು ದಾಂಪತ್ಯ ಜೀವನ ಪ್ರವೇಶ ಮಾಡಿದರು.

ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್‌ ನ‌ ನೇತೃತ್ವ ವಹಿಸಿದ್ದರು.‌ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಮಾರಂಭ ಉದ್ಘಾಟಿಸಿದರು. ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಪ್ರಾಸ್ತಾವಿಕ‌ ಭಾಷಣ ಮಾಡಿದರು.

ಸಮಾರಂಭದಲ್ಲಿ ಜೀವಮಾನ ಸಮುದಾಯ ಸೇವೆಗಾಗಿ ತುಂಬೆ ಬಿ.ಎ. ಗ್ರೂಪ್‍ನ ಸ್ಥಾಪಕಾಧ್ಯಕ್ಷ ಡಾ. ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ಮತ್ತು ಇತ್ತೀಚೆಗೆ ಕೊಲಂಬಿಯಾ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಕತರ್ ನ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲಾ ಮೋನು, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರೀಸ್‍ನ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಎಸ್.ಎಂ.ರಶೀದ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್‍ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೆ.ಮುಹಮ್ಮದ್, ಭಾರತ್ ಇನ್ಪ್ರಾಸ್ಟ್ರಕ್ಚರ್ಸ್‍ನ ಆಡಳಿತ ನಿರ್ದೇಶಕ ಮುಸ್ತಫ ಎಸ್.ಎಂ., ಹಾಸನದ ಜನಪ್ರಿಯ ಆಸ್ಪತ್ರೆಯ ಸ್ಥಾಪಕಾಧ್ಯಕ್ಷ ಡಾ ಅಬ್ದುಲ್ ಬಶೀರ್ ವಿ.ಕೆ., ಹಾಜಿ ಅಬ್ದುಲ್ಲ ಮೆಮೋರಿಯಲ್ ಟ್ರಸ್ಟ್ ನ ಸದಸ್ಯ ಸೈಯದ್ ಸಿರಾಜ್ ಅಹ್ಮದ್, ನೂರುಲ್‍ ಹುದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ಏಸ್ ಫೌಂಡೇಶನ್‍ನ ಅಧ್ಯಕ್ಷ ಸಾದುದ್ದೀನ್ ಎಂ. ಸಾಲಿಹ್, ಜೆಡಿಎಸ್ ಮುಖಂಡ ಎ.ಎ.ಹೈದರ್ ಪರ್ತಿಪ್ಪಾಡಿ, ತೆಕ್ಕಿಲ್ ರೂರಲ್ ಡೆವಲಪ್‍ಮೆಂಟ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್, ಹಿದಾಯ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಖಾಸಿಂ ಅಹ್ಮದ್ ಎಚ್.ಕೆ., ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರೀಸ್‍ನ ಯುಎಇ ಘಟಕದ ಅಧ್ಯಕ್ಷ ಎಸ್.ಎಂ.ಬಶೀರ್, ಅಲ್‍ ವಫಾ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಮುಹಮ್ಮದ್ ಹನೀಫ್ ಜಿ, ಬ್ಯಾರೀಸ್ ವೆಲ್ಫೇರ್ ಫೋರಂನ ಪದಾಧಿಕಾರಿಗಳಾದ ಮುಹಮ್ಮದ್ ರಫೀಕ್ ಕೃಷ್ಣಾಪುರ, ಇಮ್ರಾನ್ ಅಹ್ಮದ್ ಕುದ್ರೋಳಿ, ಬಶೀರ್ ಬಜ್ಪೆ, ಹನೀಫ್ ಉಳ್ಳಾಲ್, ಮುಹಮ್ಮದ್ ಸಿದ್ದೀಕ್ ಕಾಪು, ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹ ಸಂಘಟನಾ ಸಮಿತಿಯ ಸಂಚಾಲಕ‌ ಉಮರ್ ಯು.ಎಚ್.‌‌ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಲಕ್ಕಿಸ್ಟಾರ್ ನಾಸರ್, ಹುಸೈನ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

Comments are closed.