ಕರಾವಳಿ

ನಾವು ಎಲ್ಲಾದರೂ ಹೋಗುತ್ತಿರುವ ಸಂದರ್ಭದಲ್ಲಿ ಬೆಕ್ಕು ಅಡ್ಡ ಬಂದರೆ ಅಪಶಕುನವೇ..?ತಿಳಿಯಿರಿ…

Pinterest LinkedIn Tumblr

ಕೆಲವೊಂದು ಬಾರಿ ನಮ್ಮ ಹಿರಿಯರು ಬೆಕ್ಕು ಏನಾದರೂ ನಿಮ್ಮ ಎದುರುಗಡೆ ಅಥವಾ ನೀವೇನಾದರೂ ಶುಭ ಕಾರ್ಯಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಬೆಕ್ಕು ಅಡ್ಡಬಂದರೆ ಅಪಶಕುನ ಎಂದು ಭಾವಿಸುತ್ತೇವೆ. ಹಾಗೆ ಹೀಗೆ ಬಂದಂತಹ ಬೆಕ್ಕನ್ನ ನೋಡಿ ನಾವು ತುಂಬಾ ಭಯ ಪಡುತ್ತೇವೆ. ಹೀಗೆ ನಾವು ಎಲ್ಲಾದರೂ ಹೋಗುತ್ತಿರುವ ಸಂದರ್ಭದಲ್ಲಿ ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ನಾವು ಭಯಪಡುತ್ತೇವೆ ಎನ್ನುವುದಕ್ಕೆ ಕೆಲವು ಕಾರಣಗಳಿವೆ ವೈಜ್ಞಾನಿಕವಾಗಿ ಹೇಳಬಹುದು ಹಾಗೂ ಅಧ್ಯಾತ್ಮಿಕವೂ ಕೂಡ ನಾವು ಇಲ್ಲಿ ವಿಚಾರವನ್ನು ಮಾಡೋಣ ಬನ್ನಿ.

ಅಷ್ಟಕ್ಕೂ ಈ ಪದ್ಧತಿ ಶುರುವಾಗಿದ್ದರೂ ಹೇಗೆ, ಹಾಗೆಯೇ ಬೆಕ್ಕನ್ನು ನಾವು ನೋಡಿದಾಗ ಯಾಕೆ ಕೆಲ ಹೊತ್ತು ನಿಂತು ಹೋಗ ಬೇಕು ಎನ್ನುವುದಕ್ಕೆ ಇಲ್ಲಿದೆ ಕೆಲವೊಂದು ವೈಜ್ಞಾನಿಕವಾದ ವಿಚಾರ. ಈ ಬೆಕ್ಕು ನಾವು ಹೋಗುವಾಗ ಅಡ್ಡ ಬಂದರೆ ಕೆಲವೊಂದು ನಿಂತು ಹೋಗ ಬೇಕು ಹಾಗೂ ಅದನ್ನು ಅಪಶಕುನ ಎನ್ನುವ ಸಂಪ್ರದಾಯ ಬಂದಿತ್ತು ಒಂದು ಕಥೆಯಿಂದ. ಅದು ಏನು ಅಂತಿರ. ಒಂದಾನೊಂದು ಕಾಲದಲ್ಲಿ ಒಂದು ಊರು ಆ ಊರಿನಲ್ಲಿ ಯಾವುದೇ ತರಹದ ಕಾರುಗಳು ಬೈಕುಗಳು ಆ ಕಾಲದಲ್ಲಿ ಇರಲಿಲ್ಲ . ಕೇವಲ ಕುದುರೆಗಾಡಿ ಹಾಗೂ ಎತ್ತಿನ ಗಾಡಿಯಲ್ಲಿ ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುತ್ತಿದ್ದರು.

ಹೀಗೆ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಹಲವಾರು ಬೆಕ್ಕುಗಳು ಅವರ ಪ್ರಯಾಣಕ್ಕೆ ಅಡ್ಡಿ ಮಾಡುತ್ತಿದ್ದವು ಅಂದರೆ ರಾತ್ರಿ ಹೊತ್ತು ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಬೆಕ್ಕುಗಳು ಅಡ್ಡ ಬರುತ್ತಿದ್ದವು. ಹೀಗೆ ಅಡ್ಡ ಬಂದಂತಹ ಬೆಕ್ಕುಗಳನ್ನು ನೋಡಿ ಕುದುರೆಗಳು ಬೆಚ್ಚಿ ಬೆರಗಾಗಿ ಆಕಡೆ ಈಕಡೆ ತಮ್ಮ ಗಾಡಿಯನ್ನು ಅಲ್ಲಾಡುತ್ತಿದ್ದವು ಇದರಿಂದ ಜನರು ಕೆಳಗೆ ಬಿದ್ದು ಪೆಟ್ಟು ಆಗುವಂತಹ ಕೆಲವೊಂದು ಸಂಗತಿಗಳು ಕೂಡ ಆಗುತ್ತಿದ್ದವು. ಇದಕ್ಕೆ ಕಾರಣ ಬೇಕ್ಕುಗಳಲ್ಲಿ ಇರುವಂತಹ ಒಂದು ವಿಶೇಷವಾದ ಒಂದು ಸಂಗತಿ ಅದು ಏನು ಅಂತ. ಅದು ಏನು ಅಲ್ಲ ಬೆಕ್ಕಿನ ಕಣ್ಣು. ತುಂಬಾ ಪ್ರಕಾಶಮಾನವಾಗಿ ಅದರಲ್ಲೂ ರಾತ್ರಿ ಹೊತ್ತಿನಲ್ಲಿ ತುಂಬಾ ಪ್ರಕಾಶಮಾನವಾಗಿ ಹೊಳೆಯುವ ಅಂತಹ ಬೆಕ್ಕಿನ ಕಣ್ಣನ್ನು ನೋಡಿಯೇ ಎತ್ತಿನ ಗಾಡಿಗಳು ಹಾಗೂ ಕುದುರೆ ಗಾಡಿಗಳಲ್ಲಿ ಇರುವಂತಹ ಕುದುರೆಗಳು ಬೆಚ್ಚಿ ಬೆರಗಾಗುತ್ತಾನೆ ಓಡುತ್ತಿದ್ದವು.

ಈ ಕಾರಣಕ್ಕೋಸ್ಕರ ಅಲ್ಲಿನ ಜನರು ಯಾವುದಾದರೂ ಬೆಕ್ಕನ್ನು ಬಂದಾಗ ಕುದುರೆಗಳು ಅದನ್ನು ನೋಡಿ ಹೆದರಿ ಸ್ವಲ್ಪ ಹೊತ್ತು ಸಮಾಧಾನ ಮಾಡಿಕೊಂಡು ಆದಮೇಲೆ ಗಾಡಿ ನಡೆಸಿಕೊಂಡು ಹೋಗಬೇಕು ಎನ್ನುವಂತಹ ಸಂಪ್ರದಾಯ ಹುಟ್ಟಿಕೊಳ್ಳುತ್ತದೆ. ಆದರೆ ಈ ಸಂಪ್ರದಾಯ ಬರಬರುತ್ತಾ ಅಪಶಕುನ ಎನ್ನುವಂತಹ ದಾರಿಗೆ ಇಳಿಯುತ್ತದೆ. ಬೆಕ್ಕು ಕೂಡ ಒಂದು ಸಾಮಾನ್ಯವಾದ ಪ್ರಾಣಿ ಅದರಿಂದ ಯಾರಿಗೂ ಕೂಡ ಯಾವುದೇ ತರ ಆದ ಅನಾಹುತ ಕೂಡ ಆಗುವುದಿಲ್ಲ. ಕೇವಲ ಅದರ ಕಂಡು ಪ್ರಕಾಶಮಾನವಾಗಿ ಇರುವುದರಿಂದ ಕುದುರೆಗಳು ಹಾಗೂ ದೊಡ್ಡ ದೊಡ್ಡ ಪ್ರಾಣಿಗಳು ಹೆದರುತ್ತವೆ ಇದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹಾಗೂ ಸ್ವಲ್ಪ ಹೊತ್ತು ನಿಂತು ನಂತರ ಪ್ರಯಾಣವನ್ನು ಮಾಡಿಕೊಳ್ಳುವುದಕ್ಕಾಗಿ ಶುರು ವಾದಂತಹ ಸಂಪ್ರದಾಯ ಇದು.

ಬೆಕ್ಕಿನ ಕಣ್ಣುಗಳಲ್ಲಿ ಇರುವಂತಹ ವಿಶೇಷವಾದ ರೇಟಿನ ಪರದೆಗಳು ಬೆಕ್ಕಿನ ಕಣ್ಣನ್ನು ಪ್ರಕಾಶಮಾನವಾಗಿ ಹೊಳೆಯಲು ಸಹಾಯ ಮಾಡುತ್ತವೆ ಈ ರೀತಿಯಾಗಿ ನಾಯಿಗಳು ಕೂಡ ಇರುತ್ತದೆ ಹಾಗೂ ಕರಡಿಗಳನ್ನು ಕೂಡ ಇರುತ್ತವೆ ಆದರೆ ಅವುಗಳಿಗೆ ಹೋಲಿಸಿದರೆ ಬೆಕ್ಕುಗಳಿಗೆ ಹೆಚ್ಚಾಗಿರುತ್ತದೆ. ಇನ್ನೊಂದು ಕಾರಣ ಏನಪ್ಪ ಅಂದರೆ ಬೆಕ್ಕುಗಳು ಹೆಚ್ಚಾಗಿದ್ದರೆ ಅವುಗಳ ಕೂದಲುಗಳು ನಿಮ್ಮ ಆಹಾರದಲ್ಲಿ ಸೇರಿಕೊಂಡು ನಿಮ್ಮ ಹೊಟ್ಟೆಗೆ ಹೋಗಿ ನಿಮಗೆ ಆಹಾರವನ್ನು ಸೇರಲು ಇರೋದೇ ಹಾಗೆ ಮಾಡುತ್ತವೆ ಎನ್ನುವ ಅವೈಜ್ಞಾನಿಕವಾದ ಕಾರಣಗಳಿಂದಲೂ ಕೂಡ ಬೆಕ್ಕನ್ನು ಅತಿ ಹೆಚ್ಚಾಗಿ ನಾವು ಇಷ್ಟ ಪಡುವುದಿಲ್ಲ.

ಆದರೆ ನೀವೇನಾದರೂ ಬೆಕ್ಕನ್ನು ಸಾಕುತ್ತಿದ್ದಾರೆ ಅದಕ್ಕೆ ದಿನನಿತ್ಯ ಸ್ನಾನವನ್ನು ಮಾಡಿಸಿ ಸುಚಿಯಾಗಿ ಇಟ್ಟುಕೊಂಡರೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿರುವ ಜನಕ್ಕೆ ಖಾಯಿಲೆ ಬರುವುದಿಲ್ಲ . ಈ ಚಿಕ್ಕ ಪ್ರಾಣಿಯನ್ನು ನಾವು ಈ ರೀತಿಯಾಗಿ ದ್ವೇಷ ಮಾಡುವುದನ್ನು ಬಿಟ್ಟು ಇದರ ಬಗ್ಗೆ ಮೂಢನಂಬಿಕೆಯನ್ನು ಬೆಳೆಸುವುದನ್ನು ಬಿಟ್ಟು ವೈಜ್ಞಾನಿಕವಾಗಿ ಚಿಂತನೆಯನ್ನು ಮಾಡಿ ಜೀವನವನ್ನು ಚೆನ್ನಾಗಿ ನೋಡಿಕೊಂಡರೆ. ನಮ್ಮ ಜೀವನದಲ್ಲಿ ಯಶಸ್ಸು ಅನ್ನುವುದು ದೊರಕುತ್ತದೆ.

Comments are closed.