ಕರಾವಳಿ

ಬೆಳಕು ಮೀನುಗಾರಿಕೆಗೆ ನಿಷೇಧ; ಆದೇಶ ಉಲ್ಲಂಘಿಸಿದ್ರೆ ಲೈಸೆನ್ಸ್ ರದ್ಧು!

Pinterest LinkedIn Tumblr

ಉಡುಪಿ: ಬೆಳಕು ಮೀನುಗಾರಿಕೆಗೆ ಸಂಬಂಧಿಸಿದಂತೆ, ಫೆಬ್ರವರಿ 6 ರ ರಾಜ್ಯ ಉಚ್ಛ ನ್ಯಾಯಾಲಯದಲ್ಲಿನ ಮಧ್ಯಂತರ ಆದೇಶದಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಇವರ ಆದೇಶದಂತೆ ಬೆಳಕು ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

(ಸಾಂದರ್ಭಿಕ ಚಿತ್ರ)

ಅದರಂತೆ ಜಿಲ್ಲೆಯ ಎಲ್ಲಾ ಮೀನುಗಾರರು ಬೆಳಕು ಮೀನುಗಾರಿಕೆಗಾಗಿ ದೋಣಿಗಳಲ್ಲಿ ಅಳವಡಿಸಿರುವ ಜನರೇಟರ್ಗಳನ್ನು ತಕ್ಷಣದಿಂದಲೇ ತೆರವುಗೊಳಿಸತಕ್ಕದ್ದು ಮತ್ತು ಯಾವುದೇ ಕಾರಣಕ್ಕೂ ಬೆಳಕು ಮೀನುಗಾರಿಕೆಯನ್ನು ನಡೆಸತಕ್ಕದ್ದಲ್ಲ. ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆಗೆ ತೆರಳುವುದು ಕಂಡು ಬಂದಲ್ಲಿ ಅಂತಹ ಮೀನುಗಾರಿಕಾ ದೋಣಿಗಳ ಲೈಸನ್ಸ್ ರದ್ದುಗೊಳಿಸಲಾಗುವುದು ಅಲ್ಲದೆ ಸದರಿ ದೋಣಿಗೆ ಡೀಸಿಲ್ ಸರಬರಾಜನ್ನು ತಡೆಹಿಡಿಯಲಾಗುವುದು.

ಆದುದರಿಂದ ಜಿಲ್ಲೆಯ ಎಲ್ಲಾ ಮೀನುಗಾರರು ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಗೌರವಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಉಪನಿರ್ದೇಶಕ ಪಾಶ್ರ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.