ಕರಾವಳಿ

ಈ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಮಧು ಮೇಹಿಗಳಿಗೆ ಉತ್ತಮ

Pinterest LinkedIn Tumblr

ಉತ್ತಮ ಆರೋಗ್ಯವನ್ನು ಕಾಪಾಡುವುದರಲ್ಲಿ ಹಣ್ಣಿನ ಪ್ರಾಮುಖ್ಯತೆ ಇದೆ. ಕಿತ್ತಳೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ನುಗಳು ಹಾಗೂ ಖನಿಜಗಳಿವೆ. ಇವೆಲ್ಲವೂ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ನೀಡುತ್ತವೆ. ಅಲ್ಲದೇ ಹಣ್ಣುಗಳಲ್ಲಿರುವ ಕರಗುವ ಹಾಗೂ ಕರಗದ ನಾರು ಮಲಬದ್ಧತೆಯಿಂದ ರಕ್ಷಿಸುತ್ತದೆ.

ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮಧು ಮೇಹಿಗಳಿಗೂ ಸೂಕ್ತವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಉತ್ತಮ ಆರೋಗ್ಯಕ್ಕೆ ಹಣ್ಣುಗಳು ಸಿಹಿಯಾದ, ನೈಸರ್ಗಿಕ ಆಯ್ಕೆಯಾಗಿದೆ.

ಈ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನವರು ಹುಳಿಯಾಗಿರುವ ಹಣ್ಣುಗಳನ್ನು ತಿನ್ನಲು ಕೊಂಚ ಹಿಂದೇಟು ಹಾಕುವುದುಂಟು ಹುಳಿರುಚಿಯಿಂದ ಹಲ್ಲುಗಳಿಗೆ ಕೊಂಚ ಚುರುಕು ತಾಕುವುದೇ ಇದಕ್ಕೆ ಪ್ರಮುಖ ಕಾರಣ.

ಆದರೆ ಸಿಹಿಲಿಂಬೆ, ಕಿತ್ತಳೆ, ಚಕ್ಕೋತ ಮೊದಲಾದ ಲಿಂಬೆಜಾತಿಯ ಹಣ್ಣುಗಳನ್ನು ತಿನ್ನುವ ಮೂಲಕ ದೇಹದರೋಗ ನಿರೋಧಕ ಶಕ್ತಿಉತ್ತಮಗೊಂಡು ಚಳಿಗಾಲದಲ್ಲಿ ಸಾಮಾನ್ಯವಾದ ಶೀತ, ಕಫ ಕೆಮ್ಮುಗಳಿಂದ ರಕ್ಷಿಸುತ್ತದೆ.

ಈ ಹಣ್ಣುಗಳಲ್ಲಿರುವ ವಿಟಮಿನ್ ಸಿ ಇರುವ ಕಾರಣ ಚಳಿಗಾಲದಲ್ಲಿ ಯಾವುದೇ ರೋಗಗಳು ಕಾಯಿಲೆ ಬರದಂತೆ ತಡೆಯುವ ಶಕ್ತಿಯನ್ನು ಈ ಹಣ್ಣು ಹೊಂದಿದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಅಧಿಕ ಇರುವ ಕಾರಣ ಇದರ ಸೇವನೆ ಉತ್ತಮ. ಈ ಹಣ್ಣಿನ ಸೇವನೆ ಮಾಡುವುದರಿಂದ ಮಲಬದ್ಧತೆ, ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು, ಮುಂತಾದ ಹಲವು ರೋಗಗಳು ಬರದಂತೆ ನಿಯಂತ್ರಿಸುತ್ತದೆ.

Comments are closed.