ಕರಾವಳಿ

ಜಿಲ್ಲಾ ಸಾಹಿತ್ಯ ಸಮ್ಮೇಳನ : ಅಂತಿಮ ದಿನ ಬಹಿರಂಗ‌ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು

Pinterest LinkedIn Tumblr

ಮಂಗಳೂರು : ಮಂಗಳೂರು ಪುರಭವನದಲ್ಲಿ ಮೂರು ದಿನಗಳ ಕಾಲಜರಗಿದ 23ನೇ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ದಿನದಂದು ಬಹಿರಂಗ‌ಅಧಿವೇಶನ ಜರಗಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ‌ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಡಾ. ಎಂ. ಪಿ. ಶ್ರೀನಾಥ್ ಉಜಿರೆ, ಗೌರವಕೋಶಧ್ಯಕ್ಷೆ ಪೂರ್ಣಿಮಾರಾವ್ ಪೇಜಾವರ, ಪುತ್ತೂರು ತಾಲೂಕು ಘಟಕಾಧ್ಯಕ್ಷ  ಬಿ. ಐತ್ತಪ್ಪ ನಾಯ್ಕ, ಸುಳ್ಯ ತಾಲೂಕು ಘಟಾಧ್ಯಕ್ಷ ಡಾ| ಹರಪ್ರಸಾದ್‌ ತುದಿಯಡ್ಕ, ಬಂಟ್ವಾಳ ಘಟಕಾಧ್ಯಕ್ಷ  ಕೆ. ಮೋಹನ್‌ರಾವ್,  ಮಂಗಳೂರು ತಾಲೂಕು ಘಟಕಾಧ್ಯಕ್ಷೆ  ವಿಜಯಲಕ್ಷ್ಮೀ ಬಿ. ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಲೀಲಾ ದಾಮೋದರ, ಪ್ರಭಾಕರ ಸೂಟರ್ ಪೇಟೆ, ಜಾನ್‌ಚಂದ್ರನ್ ಪಾಲ್ಗೊಂಡಿದ್ದು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಕೆ. ಮೋಹನರಾವ್ ವಾಚಿಸಿದರು.

ಬಹಿರಂಗ‌ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು :

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗುತ್ತಿರುವ 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು ಹೀಗಿವೆ.

1. ರಾಜ್ಯ ಸರಕಾರವು ಒಂದು ಸಾವಿರ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯಲು ತೀರ್ಮಾನ ಕೈಗೊಂಡಿರುವುದನ್ನು ತೀವ್ರವಾಗಿ ಖಂಡಿಸುತ್ತದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡವೇ ಮಾಧ್ಯಮವಾಗಿರಬೇಕು. ಇಂಗ್ಲಿಷನ್ನು ಒಂದು ಭಾಷೆಯಾಗಿ ಇರಿಸಿಕೊಂಡು ರಾಜ್ಯಾದ್ಯಂತ ಏಕರೂಪ ಶಿಕ್ಷಣವನ್ನು ಜಾರಿಗೆ ತರಬೇಕು.
2. ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ವೈದ್ಯಕೀಯಕ್ಕೆ ಸಂಬಂಧಿಸಿದ ವಿಷಯಗಳ ಬೋಧನೆಯನ್ನು ಪಠ್ಯದಲ್ಲಿ ಅಳವಡಿಸಬೇಕು.
3. ಸ್ಪಾರ್ಟ್ ಸಿಟಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ನಾಡಿನ ಪಾರಂಪರಿಕ ಕಟ್ಟಡ ಮತ್ತು ಪರಿಸರ ಸಂರಕ್ಷಣೆಯನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು. 4. ಯಕ್ಷಗಾನವನ್ನು ರಾಜ್ಯದ ಪ್ರಾತಿನಿಧಿಕ ಸಾಂಸ್ಕೃೃತಿಕ ಕಲೆ ಎಂದು ಪರಿಗಣಿಸಬೇಕು
5. ರಾಜ್ಯದ ಸರಕಾರಿ ಮತ್ತು ಅನುದಾನಿತ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಶೀಘ್ರ ಭರ್ತಿಗೊಳಿಸಲು ತುರ್ತು ಕ್ರಮವನ್ನು ಕೈಗೊಳ್ಳಬೇಕು.
6. ಶತಮಾನ ಕಂಡ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾರ್ಪಡಿಸುವುದಕ್ಕೆ ಈ ಹಿಂದೆ ಘೋಷಿಸಿರುವಂತೆ ತಕ್ಷಣ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸಮ್ಮೇಳನವು ಕರ್ನಾಟಕ ಘನ ಸರಕಾರವನ್ನು ಒತ್ತಾಯಿಸುತ್ತದೆ.
7. ತುಳು ಭಾಷೆಗೆ ‘ಅಧಿಕೃತ ಭಾಷೆ’ ಎಂಬ ಮಾನ್ಯೆಯನ್ನು ಸರಕಾರವು ನೀಡಬೇಕು.
8. ಈ ಹಿಂದಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಈ ತನಕ ಜಾರಿಯಾಗದ ಎಲ್ಲಾ ನಿರ್ಣಯಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು.

Comments are closed.