ಕರಾವಳಿ

ಚಳಿಗಾಲದಲ್ಲಿ ಆರೋಗ್ಯ ಮಾತ್ರವಲ್ಲದೆ ಸೌಂದರ್ಯ ವೃದ್ಧಿಸುವ ಎಕೈಕ ಹುಡಿ

Pinterest LinkedIn Tumblr

ಚಳಿಗಾಲದಲ್ಲಿ ತಾಜಾ ಹಾಗೂ ದೇಹವನ್ನು ಬೆಚ್ಚಗಿಡಲು ಕಾಫಿ ಬೆಸ್ಟ್. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಅನೇಕ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಾಫಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ದಕವೂ ಹೌದು. ಕಾಫಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

 

ಕಾಫಿಯನ್ನು ಜೇನು ತುಪ್ಪದ ಜೊತೆ ಬೆರೆಸಿ ಸ್ಕ್ರಬ್ ರೂಪದಲ್ಲಿ ಬಳಸಬಹುದು. ಇದು ಡೆಡ್ ಸ್ಕಿನ್ ಸಮಸ್ಯೆಯನ್ನು ದೂರ ಮಾಡುತ್ತದೆ. ಜೊತೆಗೆ ಚರ್ಮ ಶುಷ್ಕವಾಗುವುದನ್ನು ತಪ್ಪಿಸಿ ತ್ವಚೆ ತೇವಾಂಶದಿಂದ ಕೂಡಿರಲು ನೆರವಾಗುತ್ತದೆ.

ಶುಷ್ಕ ಹಾಗೂ ಕೂದಲು ಉದುರುವ ಸಮಸ್ಯೆಯಿರುವವರು ಕಾಫಿಯನ್ನು ಬಳಸಬಹುದು. ಕಾಫಿಯನ್ನು ಕೂದಲಿಗೆ ಹಚ್ಚುವುದ್ರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮೆಹಂದಿ ಜೊತೆ ಕಾಫಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದ್ರೆ ಕೂದಲು ಕಪ್ಪಗಾಗಿ ಉದುರುವುದು ನಿಲ್ಲುತ್ತದೆ.

ಕಾಫಿ ಪುಡಿಗೆ ಟಿ-ಟ್ರೀ ಆಯಿಲ್ ಮಿಕ್ಸ್ ಮಾಡಿ ಮಸಾಜ್ ಮಾಡಬೇಕು. ಇದು ಮುಖದ ಹೊಳಪನ್ನು ಹೆಚ್ಚಿಸುವ ಜೊತೆಗೆ ಮುಖದ ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ.

ಕಾಫಿಯಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿರುತ್ತದೆ. ಕಾಫಿ ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಸುತ್ತಮುತ್ತ ಕಾಣಿಸಿಕೊಳ್ಳುವ ಕಪ್ಪು ಕಲೆಯನ್ನು ಕಾಫಿ ಕಡಿಮೆ ಮಾಡುತ್ತದೆ

Comments are closed.