ಕರಾವಳಿ

ಹೆಚ್ಚುತ್ತಿರುವ ಗಾಂಜಾ ಮಾರಾಟ/ಸೇವನೆ ಪ್ರಕರಣ : ಕದ್ರಿಯಲ್ಲಿ 1ಲಕ್ಷ 35ಸಾವಿರ ಮೌಲ್ಯದ ಸೊತ್ತು ಸಹಿತಾ ನಾಲ್ವರ ಸೆರೆ

Pinterest LinkedIn Tumblr

ಮಂಗಳೂರು : ನಗರದಲ್ಲಿ ಗಾಂಜಾ ಸೇವನೆ ಹಾಗೂ ಮಾರಾಟ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ ನಗರದ ಕದ್ರಿ ಸಾರ್ವಜನಿಕ ಮೈದಾನದ ಬಳಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿಯನ್ನು ಇಕೊನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೊಡಿಯಾಲ್ ಬೈಲ್ ನ ಶರಾಜ್, ಕದ್ರಿಯ ಚಿರಾಗ್, ಕಾರ್ ಸ್ಟ್ರೀಟ್ ನ ನಿವಾಸಿಗಳಾದ ಅನಂತ್ ಹಾಗೂ ಪವನ್ ಎಂದು ಗುರುತಿಸಲಾಗಿದೆ.

ನಗರದಲ್ಲಿ ಇಕೊನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣಾ ಪಿ.ಐ ಮತ್ತು ಸಿಬ್ಬಂದಿಗಳು ಮಾದಕ ದ್ರವ್ಯ ಸಾಗಾಟ/ಮಾರಾಟ/ ಸೇವನೆ ಮಾಡುವವರ ಪತ್ತೆಯ ಬಗ್ಗೆ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ದಿನಾಂಕ 25-01-2019 ರಂದು ಮಂಗಳೂರು ನಗರದ ಕದ್ರಿ ಸಾರ್ವಜನಿಕ ಮೈದಾನದ ಬಳಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ವೇಳೆ ಈ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ರಿ ಆರೋಪಿತರಿಂದ ರೂ. 14,900/- ಮೌಲ್ಯದ ಸುಮಾರು 500 ಗ್ರಾಂ ತೂಕದ ಗಾಂಜಾ, ಹಾಗೂ ರೂ. 58,000/- ಮೌಲ್ಯದ 4 ಮೊಬೈಲ್ ಪೋನನ್ನು ಹಾಗೂ ಸುಮಾರು 10000/- ರೂ ಮೌಲ್ಯದ ಅಮಲಿನ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನ ಹಾಗೂ ನಗದು 3800 ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿದ್ದು, ವಶಪಡಿಸಿದ ಎಲ್ಲಾ ಸೊತ್ತುಗಳ ಮೌಲ್ಯ ರೂಪಾಯಿ 1,35,700/- ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೇ ಗಾಂಜಾ ಸೇವನೆ ಮಾಡಿದಂತಹ 1) ರೋಹನ್ ಕುಶಲನಗರ, 2) ಸದಾಶಿವ ಕಾಮತ್, ಕಾಂಜಂಗಾಡ್, 3) ಭದ್ರೇಶ್ , ಬಿಜೈ ಕಾಪಿಕಾಡು, 4) ಸುನಿಲ್ ಭಟ್, ಕೊಟ್ಟಾರ ರವರುಗಳನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಕಾರ್ಯಾಚರಣೆಯಲ್ಲಿ ಮೇಲಾಧಿಕಾರಿಗಳ ನಿರ್ಧೇಶನದಂತೆ ನಾರ್ಕೋಟಿಕ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

Comments are closed.