ಕರಾವಳಿ

ಮದ್ಯಪಾನದಿಂದ ಹ್ಯಾಂಗ್​​ಓವರ್​​​ ಆಗದೆ ಇರಲು ಇಲ್ಲಿವೆ ಕೆಲವು ಟಿಪ್ಸ್​​​ಗಳು.

Pinterest LinkedIn Tumblr

ಇಷ್ಟಕ್ಕೂ ಹಿರಿಯರು ಹೇಳಿರುವ ಗಾದೆ ಮಾತುಗಳು ಎಲ್ಲರ ಜೀವನದಲ್ಲಿ ನಡೆದು ಹೋಗಿರುತ್ತದೆ. ಅದೇರೀತಿ ಅತಿಯಾದರೆ ಅಮೃತವೂ ವಿಷ ಎಂಬ ಮಾತು ನಿಮಗೆಲ್ಲ ಗೊತ್ತೇ ಇದೆ. ಆದರೆ ಅದು ಅಮೃತಕ್ಕೆ ಮಾತ್ರ ಅನ್ವಯಿಸುತ್ತೆನೋ ಅಂತ ನೀವು ಅದರ ಬಗ್ಗೆ ಗಮನ ಕೊಡದೆ ಫ್ರೆಂಡ್ಸು, ಪಾರ್ಟಿ ಸಮಯದಲ್ಲಿ ಸ್ವಲ್ಪ ಸ್ವಲ್ಪ ಅಂತ ಮದ್ಯಪಾನ ಮಾಡಿ ಗಂಟಲಿನವರೆಗೆ ಬಂದಿದ್ದೇ ಗೊತ್ತಾಗಲ್ಲ. ನಂತರ ನಿಮ್ಮ ಮೈ ಮೇಲೆ ಅರಿವಿಲ್ಲದೆ ಮನೆ ಸೇರಿ ಸೂರ್ಯ ನೆತ್ತಿಗೆ ಬಂದರೂ ಏಳಲಾಗದ ಆಲಸ್ಯ ನಿಮ್ಮ ಮೈ ಸೇರಿರುತ್ತದೆ. ಇಷ್ಟೇ ಆದರೆ ಸರಿ ಇನ್ನು ಕೆಲವೊಬ್ಬ ಪುಣ್ಯಾತ್ಮರು ಗಂಟಲಿನವರೆಗೆ ಬಂದರೂ ಬಿಡದೆ ಕುಡಿದು, ನಂತರ ಎಲ್ಲ ಹೊರಗೆ ಹಾಕಿ ಎಲ್ಲೋ ಮಲಗಿ ಬೆಳಗ್ಗೆ ಎದ್ದು ಮನೆ ಕಡೆ ಓಡುವ ಆಸಾಮಿಗಳೂ ಇದ್ದಾರೆ. ಮದ್ಯ ಸೇವಿಸುವಾಗಲೂ ಮಿತವಾಗಿ ಸೇವಿಸಿ,

1. ಹಣ್ಣಿನ ರಸ ಕುಡಿಯಿರಿ: ಇದು ಫ್ರಕ್ಟೋಸ್ ಎಂಬ ಅಂಶವನ್ನು ಹೊಂದಿರುವುದರಿಂದ ದೇಹದಲ್ಲಿರುವ ಮದ್ಯವನ್ನು ವೇಗವಾಗಿ ಕಡಿಮೆಯಾಗುವಂತೆ ಮಾಡುತ್ತದೆ.

2. ಸಾಕಷ್ಟು ನೀರು ಕುಡಿಯಿರಿ: ನೀವು ರಾತ್ರಿ ಮಲಗುವ ಮುಂಚೆ ಹಾಗೂ ಬೆಳಗ್ಗೆ ಎದ್ದ ನಂತರ ಬಹಳಷ್ಟು ನೀರು ಕುಡಿಯಿರಿ. ಇದು ನಿರ್ಜಲೀಕರಣದಿಂದ ಉಂಟಾಗುವ ಅಸ್ವಸ್ಥತೆಯನ್ನು ನಿವಾರಿಸುತ್ತದೆ.

3. ಬಿ-ಕಾಂಪ್ಲೆಕ್ಸ್​​ ತೆಗೆದುಕೊಳ್ಳಿ: ಮದ್ಯಪಾನ ಮಾಡಿದ ನಂತರ ದೇಹವು ಒತ್ತಡದಲ್ಲಿ ಹೆಚ್ಚು ಜೀವಸತ್ವಗಳನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ, ನಿಮ್ಮ ದೇಹವನ್ನು ಬಿ-ಕಾಂಪ್ಲೆಕ್ಸ್​​​​ನೊಂದಿಗೆ ಪುನಃ ತುಂಬಿರಿ.

4. ಎದ್ದ ನಂತರ ಏನಾದರೂ ತಿನ್ನಿರಿ: ಮದ್ಯಪಾನ ಮಾಡಿದ ನಂತರ ಮಲಗಿ ಎದ್ದಾಗ ಉಪ್ಪಿನಂಶವಿರುವ ಚಿಪ್ಸ್​​​ಗಳು ಅಥವಾ ಬಿಸ್ಕತ್ತುಗಳನ್ನು ತಿನ್ನಿರಿ.

5. ಸೋಡಾ ತೆಗೆದುಕೊಳ್ಳಿ: ಸೋಡಾ ಮತ್ತು ಕೊಲಾಗಳಂತಹ ಕಾರ್ಬೋನೇಟೆಡ್ ಪಾನೀಯಗಳು ವಾಕರಿಕೆ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

Comments are closed.