ಕರಾವಳಿ

ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಇದರ ಸೇವನೆ ಉಪಯೋಗಕಾರಿ

Pinterest LinkedIn Tumblr

ಕಾಮಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿ ಅರೆದು ಶೋಧಿಸಿ ಸ್ವಲ್ಪಜೇನು ಕೂಡಿಸಿ ಸೇವಿಸುವುದು. ಒಂದು ವೇಳೆಗೆ ಅರ್ಧ ಟೀ ಚಮಚ ರಸ ಸಾಕಾಗುವುದು.

ಕಾಮಕಸ್ತೂರಿ ಬೀಜಗಳು ಗ್ರಂಧಿಗೆ ಅಂಗಡಿಗಳಲ್ಲಿ ನಮಗೆ ದೊರೆಯುತ್ತದೆ. ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ಶರೀರಕ್ಕೆ ತಂಪು ನೀಡುತ್ತವೆ. ಆದ್ದರಿಂದ ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಉಪಯೋಗಕಾರಿಯಾಗಿದೆ.

ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿಸರ ದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಕಲ್ಲುಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ರಕ್ತಭೇದಿಗೆ ಉಪಯೋಗಕಾರಿ. ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನು ತುಪ್ಪದಲ್ಲಿ ಬೆರೆಸಿನೆಕ್ಕಿದರೆ ಗಂಟಲು ಬೇನೆ ಗುಣಮುಖವಾಗುತ್ತದೆ.

ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿನೆಕ್ಕುವುದು. ಕಾಮಕಸ್ತೂರಿ ಎಲೆಗಳ ಕಷಾಯಮಾಡಿ 1/4 ಒಳಲೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದು. ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಹಾಕಿ ಅದಕ್ಕೆ ಒಂದು ಚಮಚ ಸಕ್ಕರೆ, ಸ್ವಲ್ಪಮಂಜುಗಡ್ಡೆ ಪುಡಿಬೆರೆಸಿ, ಅದಕ್ಕೆ ಸ್ವಲ್ಪ ಕೇಸರಿ ಬಣ್ಣ ಸೇರಿಸಿ ಶರಬತ್ತು ತಯಾರಿಸುತ್ತಾರೆ. ಇದರಿಂದ ಬಾಯರಿಕೆ ನಿವಾರಣೆ ಯಾಗುತ್ತದೆ. ಅಲ್ಲದೆ ಇದು ಶರೀರಕ್ಕೆ ತಂಪುನೀಡುತ್ತವೆ.

Comments are closed.