ಕರಾವಳಿ

ಬಂಗ್ರಕೂಳೂರ್‌ನಲ್ಲಿ ‘ಸಿರಿ ಸತ್ಯನಾರಾಯಿಣ ವೃತೊ ಮೈಮೆ’ ತುಳು ತಾಳಮದ್ದಳೆ

Pinterest LinkedIn Tumblr

ಮಂಗಳೂರು: ಬಂಗ್ರಕೂಳೂರು ಕೋರ್ದಬ್ಬು ದೇವಸ್ಥಾನದಲ್ಲಿ ಇತ್ತೀಚಿಗೆ ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಲುವಾಗಿ ಜಿಲ್ಲೆಯ ಪ್ರಬುದ್ಧ ಕಲಾವಿದರಿಂದ ‘ಸಿರಿ ಸತ್ಯನಾರಾಯಿಣ ವೃತೊ ಮೈಮೆ’ ತುಳು ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು.

ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೊ ಸಂಪಾಜೆ, ಸರಪಾಡಿ ಅಶೋಕ ಶೆಟ್ಟಿ, ಜಯಪ್ರಕಾಶ ಶೆಟ್ಟಿ ಪೆರ್ಮುದೆ,ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಸೀತಾರಾಮ ಕುಮಾರ್ ಕಟೀಲು, ರವಿ ಅಲೆವೂರಾಯ, ಎಂ.ಎಂ.ಸಿ.ರೈ, ವಿನಯಾಚಾರ್ ಹೊಸಬೆಟ್ಟು, ಗಣೇಶ ‌ಕಾವ ತಲ್ಲಂಗಡಿ, ಸುರೇಶ್ ಕೊಲೆಕಾಡಿ ಅರ್ಥಧಾರಿಗಳಾಗಿದ್ದರು.

ಹರೀಶ್ ಶೆಟ್ಟಿ ಸೂಡ ಮತ್ತು ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಗೆ ರವಿರಾಜ್ ಜೈನ್ , ಅಕ್ಷಯ ರಾವ್ ವಿಟ್ಲ ಮತ್ತು ಚೇತನ್ ಸಚ್ಚರಿಪೇಟೆ ಅವರು ಹಿಮ್ಮೇಳದಲ್ಲಿ ಸಹಕರಿಸಿದ್ದರು.

ಕೋರ್ದಬ್ಬು ದೈವಸ್ಥಾನ ಸೇವಾ ಟ್ರಸ್ಟ್ ಆಡಳ್ತೆ ನಿರ್ದೇಶಕ ಅಜಿತ್ ಕುಮಾರ್ ರೈ ಮಾಲಾಡಿ ಸ್ವಾಗತಿಸಿ,ಸೇವಾಸಮಿತಿ ಅಧ್ಯಕ್ಷ ಅಶೋಕ ಮಾಡ ಕುದ್ರಾಡಿಗುತ್ತು ವಂದಿಸಿದರು. ಸಂಯೋಜಕ ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ ನಿರೂಪಿಸಿದರು.

Comments are closed.