ಕರಾವಳಿ

ಸ್ಪರ್ಶ- 2019 ಪೋಸ್ಟರ್ ಅನಾವರಣಗೊಳಿಸಿದ ಮೇಲ್ಮನೆ ವಿಪಕ್ಷ ನಾಯಕ ಕೋಟ

Pinterest LinkedIn Tumblr

ಉಡುಪಿ: ಬಾಳೆಬೆಟ್ಟು ಫ್ರೇಂಡ್ಸ್ (ರಿ) ಬಾಳೆಬೆಟ್ಟು, ಭಗತ್ ಸಿಂಗ್ ಯುವ ವೇದಿಕೆ (ರಿ.) ಕೋಟ ಇವರು ಜಂಟಿಯಾಗಿ 2019 ರ ಜನವರಿ 5ನೇ ತಾರೀಕು ಆಯೋಜಿಸಿದ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯ ಪೋಸ್ಟರ್ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು.

ಆ ಸಂದರ್ಭದಲ್ಲಿ ಬಾಳೆಬೆಟ್ಟು ಫ್ರೇಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ಬಾಳೆಬೆಟ್ಟು, ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಭಗತ್ ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ ಮತ್ತು ಕಾರ್ಯದರ್ಶಿ ಶಮಂತ್ ಕೋಟ ಹಾಗೂ ಉಭಯ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Comments are closed.