ಕರಾವಳಿ

ಆರ್.ಎನ್. ನಾಯಕ್ ಕೊಲೆ ಪ್ರಕರಣ; 9ನೇ ಅರೋಪಿ ಬನ್ನಂಜೆ ರಾಜಾ ವಿಚಾರಣೆ ಇಂದಿನಿಂದ

Pinterest LinkedIn Tumblr

ಉಡುಪಿ: ಅಂಕೋಲದ ಉದ್ಯಮಿ ಆರ್.ಎನ್ ನಾಯಕ್ ಎನ್ನುವವರನ್ನ ನಡುರಸ್ತೆಯಲ್ಲಿ ಗುಂಡು ಹಾರಿಸಿದ ಹತ್ಯೆ ಮಾಡಿದ ಪ್ರಕರಣದ ವಿಚಾರಣೆ ಇಂದು ಮತ್ತು ನಾಳೆ ಬೆಳಾಗಾವಿ ವಿಶೇಷ ನ್ಯಾಯಲಯದಲ್ಲಿ ನಡೆಯಲಿದೆ.

2013 ರ ಡಿಸೆಂಬರ್ 21ರಂದು ಬನ್ನಂಜೆ ರಾಜಾ ಸಹಚರರು ಗುಂಡು ಹಾರಿಸಿ ಕೊಲೆ ಮಾಡಿದ್ದರು. ಈ ಸಂದರ್ಭದಲ್ಲಿ ಆರ್.ಎನ್ ನಾಯಕ್ ಅಂಗರಕ್ಷಕ, ಗುಂಡು ಹಾರಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು .ಹೀಗಾಗಿ ಕೊಲೆ ಮಾಡಿದ ಗ್ಯಾಂಗನ್ನು ಗುರುತು ಹಚ್ಚಲು ಪೋಲಿಸರಿಗೆ ಸಹಕಾರಿಯಾಗಿತ್ತು.

ಅಷ್ಟೆ ಅಲ್ಲದೇ ಪ್ರಕರಣಕ್ಕೆ ಸಂಭಂಧಿಸಿ ಬನ್ನಂಜೆ ರಾಜಾ ವಿದೇಶದಿಂದ ಮಾಧ್ಯಮಗಳಿಗೆ ಕರೆ ಮಾಡಿ ಕೊಲೆಯನ್ನ ತಾನೇ ಮಾಡಿಸಿರುವುದಾಗಿ ಹೇಳಿಕೆ ನೀಡಿದ ಧ್ವನಿ ಮುದ್ರಣ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.

ಪ್ರಕರಣಕ್ಕೆ ಸಂಭಂಧಿಸಿ ಬನ್ನಂಜೆ ರಾಜಾ 9ನೇ ಅರೋಪಿಯಾಗಿದ್ದಾನೆ.ಬನ್ನಂಜೆ ರಾಜಾನ ವಿರುದ್ದ ಉಡುಪಿ ಸೇರಿದಂತೆ 16 ಪ್ರಕರಣ ದಾಖಲಾಗಿದ್ದು ,ಕೋಕಾ ಕಾಯ್ದೆಯಡಿಯಲ್ಲಿ ಬಂಧಿಯಾಗಿದ್ದಾನೆ.

ಇಂದಿನಿಂದ ಬೆಳಗಾವಿ ವಿಶೇಷ ನ್ಯಾಯಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ಪ್ರರಾಂಭವಾಗಲಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು, ಮಾಧ್ಯಮ, ಪೊಲೀಸ್ ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು‌ ಸಾಕ್ಷಿದಾರರು ನ್ಯಾಯಲಯದಲ್ಲಿ ಹೇಳಿಕೆ ನೀಡಲಿದ್ದಾರೆ.ಬನ್ನಂಜೆ ರಾಜಾ ಪರ ಉಡುಪಿಯ ಹೆಸರಾಂತ ವಕೀಲರಾಗಿರುವ ಶಾಂತರಾಮ್ ಶೆಟ್ಟಿ ವಾದ ಮಂಡಿಸಲಿದ್ದಾರೆ.

Comments are closed.