ಕರಾವಳಿ

ಜೀವನದಲ್ಲಿ ಅಗುವ ಸಣ್ಣ ಪುಟ್ಟ ತಪ್ಪುಗಳು ಮುಂದೆ ದೊಡ್ದ ಆರೋಗ್ಯ ಸಮಸ್ಯೆಗೆ ದಾರಿ

Pinterest LinkedIn Tumblr

ಹೌದು ನಾವು ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿರುತ್ತೇವೆ, ಆದರೆ ನಾವು ಅವುಗಳ ಬಗ್ಗೆ ಅಷ್ಟಾಗಿ ಗಮನಹರಿಸುವುದಿಲ್ಲ ಮತ್ತು ಅದರ ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ ಆದರೆ ಅವುಗಳು ಈ ರೀತಿ ದೊಡ್ಡ ಸಮಸ್ಯೆಗಳಿಗೂ ಕಾರಣವಾಗಬಹುದು.

ತುಂಬಾ ಹೊತ್ತು ಟಿವಿ ನೋಡುವುದು :
ದಿನದಲ್ಲಿ ತುಂಬಾ ಹೊತ್ತಿನವರೆಗೆ ಕುಳಿತು ಟಿವಿ ನೋಡುವುದರಿಂದ ಸಮಸ್ಯೆ ಉಂಟುಮಾಡವುತ್ತದೆ, ಅದು ಹೇಗಂದರೆ ದೇಹ ಕಡಿಮೆ ಚಲನವಲನ ಹೊಂದುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಹೆಚ್ಚು ಉಪ್ಪು ಬಳಕೆ :
ಇದರಿಂದ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಕಿಡ್ನಿ ಡ್ಯಾಮೇಜ್‌ ಮತ್ತು ಹಾರ್ಟ್‌ ಅಟ್ಯಾಕ್‌ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ತಡ ರಾತ್ರಿಯವರೆಗೂ ಎದ್ದಿರುವುದು :
ಇದರಿಂದ ಡಿಪ್ರೆಶನ್‌, ಒತ್ತಡ, ಬೊಜ್ಜು, ಅಜೀರ್ಣದಂತಹ ಹಲವಾರು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆಯಂತೆ.

ಹೆಚ್ಚು ತಿನ್ನುವುದು :
ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ, ಅಲ್ಲದೇ ಕೊಲೆಸ್ಟ್ರಾಲ್‌ ಲೆವೆಲ್‌ ಹೆಚ್ಚಾಗುತ್ತದೆ. ಇದರಿಂದ ಹೈ ಬಿಪಿ ಮತ್ತು ಹೃದಯ ಸಮಸ್ಯೆ ಉಂಟಾಗುತ್ತದೆ.

ಕಡಿಮೆ ನೀರು ಸೇವನೆ :
ದಿನದಲ್ಲಿ ಸಾಮಾನ್ಯವಾಗಿ ೪ ಲೀಟರ್ ನೀರು ಸೇವನೆ ಮಾಡಬೇಕು. ಇದರಿಂದ ದೇಹದಲ್ಲಿನ ಟಾಕ್ಸಿನ್‌ ಹೊರಬರುತ್ತದೆ. ಕಡಿಮೆ ನೀರು ಕುಡಿದರೆ ಕಿಡ್ನಿ ಇನ್‌ಫೆಕ್ಷನ್‌, ಕಿಡ್ನಿಯಲ್ಲಿ ಕಲ್ಲು ಮೊದಲಾದ ಸಮಸ್ಯೆಗಳು ಕಾಡುತ್ತದೆ.

ಹೆಚ್ಚು ಮದ್ಯಪಾನ ಮಾಡಿದರೆ :
ಹೆಚ್ಚು ಮದ್ಯಪಾನ ಮಾಡುವುದರಿಂದ ಅಧಿಕ ರಕ್ತದ ಒತ್ತಡ, ಲಿವರ್ ಡ್ಯಾಮೇಜ್ ಮತ್ತು ಹಾರ್ಟ್‌ ಫೇಲ್ಯುರ್‌ ಮೊದಲಾದ ಸಮಸ್ಯೆ ಕಾಡುತ್ತದೆ. ಇದರಲ್ಲಿರುವ ಕ್ಯಾಲರಿಯಿಂದ ತೂಕ ಹೆಚ್ಚಾಗುತ್ತದೆ. ಈ ಮೂಲಕ ಹೃದಯ ರೋಗ ಕಾಣಿಸಿಕೊಳ್ಳುತ್ತದೆ.

ಹೆಚ್ಚು ಮಾತ್ರೆಗಳ ಸೇವನೆ :
ಎಲ್ಲಾ ಸಣ್ಣ – ಪುಟ್ಟ ಸಮಸ್ಯೆಗಳಿಗೆ ಆ್ಯಂಟಿಬಯೋಟಿಕ್ ಅಥವಾ ಪೇನ್‌ಕಿಲ್ಲರ್ಸ್‌ ಸೇವನೆ ಮಾಡಿದರೆ ಕಿಡ್ನಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Comments are closed.