ಕರಾವಳಿ

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಲೇಖನಗಳ ಸಂಕಲನ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು, ನವೆಂಬರ್.16: ಸರ್ವಶ್ರೇಷ್ಠ ಮಹಾಪುರುಷರ ಆಶಯಗಳು ದೇವರನ್ನು ಸೇರುವುದಾಗಿದೆ. ಆರೋಗ್ಯಯುತ ಸಮಾಜ ಚಿಂತನ- ಮಂಥನ ಮಾಡುವ ಮೂಲಕ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬಹುದಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್‌ಕುಮಾರ್ ಕಲ್ಕೂರ ಹೇಳಿದರು.

ನಗರದ ಓಷಿಯಾನ್ ಪರ್ಲ್ ಹೊಟೇಲ್‌ನಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಚಿಂತಕರ ಅಭಿಪ್ರಾಯಗಳ ಸಂಗ್ರಹ ಪುಸ್ತಕವನ್ನು ಜಾನಪದ ವಿದ್ವಾಂಸ ಪ್ರೊ.ಎ.ವಿ.ನಾವಡ ಅವರ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಇಂದಿನ ದಿನಗಳಲ್ಲಿ ಮಾನವರಲ್ಲಿ ಸಂಕುಚಿತ ಮನೋಭಾವ ಹೆಚ್ಚುತ್ತಿದೆ. ಪ್ರವಾದಿ ಮುಹಮ್ಮದ್‌ರ ಚಿಂತನೆಗಳು, ಅವರ ಆಶಯಗಳನ್ನು ಪಾಲಿಸುವ ಅಗತ್ಯವಿದೆ. ಪುಸ್ತಕದ ವಿನ್ಯಾಸ, ನಿರೂಪಣೆ, ಭಾಷೆಯ ಬಳಕೆ ಅತ್ಯುತ್ತಮವಾಗಿದೆ. ಪುಸ್ತಕದಲ್ಲಿ ಯಾವುದೇ ವಿಷಯವನ್ನು ನೇರವಾಗಿ ತಿಳಿಸಲಾಗಿದೆ. ಎಲ್ಲ ಧರ್ಮದವರಿಗೂ ಈ ಪುಸ್ತಕಗಳು ತಲುಪಬೇಕು ಎಂದು ಈ ವೇಳೆ ಪ್ರೊ.ಎ.ವಿ.ನಾವಡ ಹೇಳಿದರು.

Comments are closed.