ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಬಂಟ್ವಾಳ್ ಆಯ್ಕೆಯಾಗಿದ್ದಾರೆ.
ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಮಂಗಳವಾರ ನಡೆದ ಯೂನಿಯನ್ ನ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಪಾಧ್ಯಕ್ಷರುಗಳಾಗಿ ತಾರಾನಾಥ ಗಟ್ಟಿ ಕಾಪಿಕಾಡು, ಲಕ್ಷ್ಮಣ ಕುಂದರ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಎಸ್.ಪೆರ್ಲ, ಕೋಶಾಧಿಕಾರಿಯಾಗಿ ಜ್ಯೋತಿಪ್ರಕಾಶ್ ಪುಣಚ, ಜತೆ ಕಾರ್ಯದರ್ಶಿಗಳಾಗಿ ಎ.ಗೋಪಾಲ ಅಂಚನ್, ಈಶ್ವರ್ ವಾರಣಾಸಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್ ನೀರಬಿದಿರೆ, ಪದ್ಮನಾಭ ಮುಂಡಕಜೆ, ಸತೀಶ್ ಹೊದ್ದೆಟ್ಟಿ, ಗಿರಿಧರ ಶೆಟ್ಟಿ, ಜಾರಪ್ಪ ಪೂಜಾರಿ ಬೆಳಾಲು, ಸಂತೋಷ್ ಕುಮಾರ್ ಶಾಂತಿನಗರ ಅವರನ್ನು ಆರಿಸಲಾಗಿದೆ.
Comments are closed.