ಕರಾವಳಿ

ತಿರುಮಲಕ್ಕೆ ಶ್ರೀ ಕಾಶೀ ಮಠಾಧೀಶರಿಗೆ ಭವ್ಯ ಸ್ವಾಗತ

Pinterest LinkedIn Tumblr

ಮಂಗಳೂರು: ಅಕ್ಟೋಬರ್ 27: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಹಾಗೂ 21ನೇ ಯತಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು ಬಳಿಕ ಶ್ರೀ ದೇವರ ದರ್ಶನ ಪಡೆದರು.

ತಿರುಮಲ ತಿರುಪತಿ ದೇವಸ್ವಂ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಶ್ರೀನಿವಾಸ ರಾಜು,ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಚಿನ್ನಂಗಾರಿ ರಮಣ,ಬೊಕ್ಕಸದ ಗುಮಾಸ್ತ ಗುರುಜಾ ರಾವ್, ಪೇಷ್ಕರ್ ಅವರು ಸ್ವಾಮೀಜಿ ಅವರನ್ನು ಸ್ವಾಗತಿಸಿ ತಿರುಮಲ ದೇವಳದ ವತಿಯಿಂದ ಶ್ರೀಗಳವರಿಗೆ ಸಕಲ ಗೌರವ , ಆದರಾತಿಥ್ಯ ದೊಂದಿಗೆ ದೇವಳಕ್ಕೆ ಬರಮಾಡಿಕೊಳ್ಳಲಾಯಿತು .

ತಿರುಮಲ ದೇವಸ್ಥಾನ ಸಂದರ್ಶಿಸಿದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಮತ್ತು ಮನುಕುಲದ ಕ್ಷೇಮಾಭಿವೃದ್ಧಿಗಾಗಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಗಳವರ ಜೊತೆಯಲ್ಲಿ ಮುಂಬೈಯ ಜಿ ಜಿ ಪ್ರಭು , ಮಂಗಳೂರು ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಸಿ . ಎಲ್ .ಶೆಣೈ , ತಿರುಮಲ ಕಾಶಿ ಮಠದ ಕಾರ್ಯದರ್ಶಿ ಕಾಪು ನಾರಾಯಣ ಶೆಣೈ , ಕೊಚ್ಚಿನ್ ತಿರುಮಲ ದೇವಳದ ಮೊಕ್ತೇಸರ ಜಗನ್ನಾಥ್ ಶೆಣೈ , ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ , ಮಂಜೇಶ್ವರ ದೇವಳದ ಮೊಕ್ತೇಸರರಾದ ದಿನೇಶ್ ಕಾಮತ್ ಕೋಟೇಶ್ವರ , ಮುಂಬೈ ಜಿ ಯಸ್ ಬಿ ಸೇವಾ ಮಂಡಳದ ಯಶವಂತ್ ಕಾಮತ್ , ಅಮಿತ್ ಪೈ , ಕಾಸರಗೋಡು ಶ್ರೀ ವೆಂಕಟರಮಣ ದೇವಳದ ನಾಗೇಶ್ ಕಾಮತ್ , ಕನ್ನಂಗಾಡ್ ಶ್ರೀ ವೆಂಕಟರಮಣ ದೇವಳದ ನಾಗರಾಜ್ ನಾಯಕ್ , ದಹಿಸರ್ ಕಾಶಿ ಮಠದ ಮನೋಹರ್ ಕಾಮತ್ , ಕೊಚ್ಚಿ ವಿಶ್ವನಾಥ್ ಭಟ್ ಹಾಗೂ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು .

ಮಂಜು ನೀರೇಶ್ವಾಲ್ಯ

Comments are closed.