ಕರಾವಳಿ

ಈ ಹಣ್ಣಿನಲ್ಲಿದೆ ಹಲವು ಆರೋಗ್ಯಕರ ಗುಣ

Pinterest LinkedIn Tumblr

 

ಹಳ್ಳಿಗಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅತ್ತಿ ಹಣ್ಣುಗಳು ಸಿಗುತ್ತವೆ ಆದರೆ ಅದರಲ್ಲಿರುವ ಆರೋಗ್ಯಕಾರಿ ಗುಣಗಳು ನಮಗೆ ತಿಳಿದಿರುವುದಿಲ್ಲ , ಅದರಲ್ಲೇನು ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ,

ನಿಮಗೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅತ್ತಿ ಹಣ್ಣಿಗೆ ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ.
ಉಷ್ಣತೆಯಿಂದ ಬಾಯಿಹುಣ್ಣಾಗಿದ್ದರೆ ಅತ್ತಿ ಎಲೆ ಮೇಲಿನ ಉಬ್ಬಿದ ಕಾಳುಗಳನ್ನು ತೆಗೆದು ಕಲ್ಲುಸಕ್ಕರೆಯ ಜೊತೆ ಅರೆದು ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.

ಹೆಣ್ಣು ಮಕ್ಕಳಲ್ಲಿ ಬಿಳಿ ಮುಟ್ಟು ಸಮಸ್ಯೆ ಹೆಚ್ಚಾಗಿದ್ದರೆ ಅತ್ತಿ ಹಣ್ಣಿನ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ 2 ಬಾರಿ ಕುಡಿದರೆ ತೊಂದರೆ ನಿವಾರಣೆಯಾಗುತ್ತದೆ,ಅತ್ತಿಕಾಯಿಯ ಪುಡಿಗೆ ಕಲ್ಲುಸಕ್ಕರೆ ಬೆರೆಸಿ ನೀರಿನ ಜತೆ ಕುಡಿದರೆ ಮುಟ್ಟಿನ ಸಮಯದಲ್ಲಿ ಆಗುವ ಅತಿ ಹೆಚ್ಚು ರಕ್ತಸ್ರಾವ ನಿಲ್ಲುತ್ತದೆ.

ಅತ್ತಿ ಮರದ ತೊಗಟೆ ಕಷಾಯದಿಂದ ಪ್ರತಿ ದಿನ ಬಾಯಿ ಮುಕ್ಕಳಿಸಿದರೆ ಪದೇ ಪದೇ ಆಗುತ್ತಿರುವ ಬಾಯಿಹುಣ್ಣು ನಿವಾರಣೆಯಾಗುತ್ತದೆ, ಉಗುರು ಸುತ್ತು ಆದ ಬೆರಳನ್ನು ಹತ್ತಿ ಹಣ್ಣಿನೊಳಗೆ ಇಟ್ಟು ಗಟ್ಟಿಯಾಗಿ ಕಟ್ಟಿದರೆ ಉಗುರು ಸುತ್ತು ಬೇಗ ಮಾಯುತ್ತದೆ.

ಅತ್ತಿ ಹಣ್ಣಿನ ಸೇವನೆಯಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ,ಅತ್ತಿ ಮರದ ತಾಜಾ ಎಲೆಯನ್ನು ಅರೆದು ಅದಕ್ಕೆ ಮೊಸರು ಹಾಗೂ ಸೈಂಧವ ಉಪ್ಪನ್ನು ಬೆರೆಸಿ ಕುಡಿದರೆ ಮೂಲವ್ಯಾಧಿ ಗುಣವಾಗುತ್ತದೆ.ಅತ್ತಿ ಮರದ ತೊಗಟೆಯನ್ನು ನೀರಲ್ಲಿ ತೇದು ದೇಹದಲ್ಲಿ ಊತ ಇರುವ ಜಾಗದಲ್ಲಿ ಹಚ್ಚಿದರೆ ಊತ ಬೇಗ ಶಮನವಾಗುತ್ತದೆ.

Comments are closed.