ಕರಾವಳಿ

ಸುರತ್ಕಲ್‌ನ ಅಕ್ರಮ ಟೋಲ್‌ಗೇಟ್‌ನ್ನು ಅ.30ರೊಳಗೆ ಮುಚ್ಚಲು ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭ

Pinterest LinkedIn Tumblr

ಮಂಗಳೂರು, ಅಕ್ಟೋಬರ್.23: ಸುರತ್ಕಲ್‌ನ ಅಕ್ರಮ ಟೋಲ್‌ಗೇಟ್ ಮುಚ್ಚಲು ಒತ್ತಾಯಿಸಿ ಹಾಗೂ ಕೂಳೂರು ಹೊಸಸೇತುವೆ ನಿರ್ಮಾಣ ಆಗುವವರಗೆ ಹಳೆ ಸೇತುವೆಯಲ್ಲಿ ಸಂಚಾರ ನಿಷೇಧಿಸದಂತೆ ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಸುರತ್ಕಲ್‌ನ ಓವರ್ ಬ್ರಿಡ್ಜ್ ಕೆಳಗೆ ಅಹೋರಾತ್ರಿ ಧರಣಿ ಆರಂಭಿಸಲಾಯಿತು.

ಈ ವೇಳೆ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಧರಣಿಯಲ್ಲಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ಅ.30ಕ್ಕೆ ಸುರತ್ಕಲ್ ಟೋಲ್ ಗೇಟ್‌ನ ಟೋಲ್ ಸಂಗ್ರಹದ ಗುತ್ತಿಗೆಯ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಆ ನಂತರ ಇದರ ಗುತ್ತಿಗೆಯನ್ನು ನವೀಕರಿಸುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಸಂಸದರು ಭರವಸೆ ನೀಡಿದ್ದರು. ಆದರೆ ಈಗ ಮತ್ತೊಮ್ಮೆ ಟೋಲ್ ಗುತ್ತಿಗೆ ನವೀಕರಿಸುವ ಟೆಂಡರ್ ಪ್ರಕ್ರಿಯೆಗೆ ಹೆದ್ದಾರಿ ಪ್ರಾಧಿಕಾರ ಚಾಲನೆ ನೀಡಿದೆ. ಆ ಮೂಲಕ ಅಕ್ರಮ ಟೋಲ್‌ಗೇಟ್ ಮುಂದುವರಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರದ ಪ್ರಸ್ತಾಪದ ಹೊರತಾಗಿಯು ಸತತವಾಗಿ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕ ಸಂಗ್ರಹದ ಗುತ್ತಿಗೆ ನವೀಕರಿಸುತ್ತಿರುವ ಹೆದ್ದಾರಿ ಪ್ರಾಧಿಕಾರದ ನಿಲುವು ಖಂಡಿಸಿದ ಅವರು, ಅಕ್ಟೋಬರ್ 30ರೊಳಗೆ ಈ ಟೋಲ್ ಗೇಟ್ ಮುಚ್ಚದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮನಪಾ ಸದಸ್ಯರಾದ ದಯಾನಂದ ಶೆಟ್ಟಿ, ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್ ಹಿಲ್ಡಾ ಆಳ್ವ, ರಾಘವೇಂದ್ರ ರಾವ್, ಜೋಕಟ್ಟೆ ಪಂಚಾಯತ್ ಅಧ್ಯಕ್ಷೆ ಪ್ರೆಸಿಲ್ಲಾ ಮೊಂತರೊ, ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್ , ಪಡ್ರೆ ರಾಜೇಶ್ ಶೆಟ್ಟಿ, ಮೂಸಬ್ಬ ಪಕ್ಷಿಕೆರೆ, ಶ್ರೀನಾಥ್ ಕುಳಾಲು, ಅಯ್ಯೂಬ್ ಕೂಳೂರು, ದಿನೇಶ್ ಕುಂಪಲ, ಟಿ.ಎನ್.ರಾಘವೇಂದ್ರ, ರಹೀಂ ಪಕ್ಷಿಕೆರೆ, ಅಬೂಬಕರ್ ಬಾವಾ, ರಶೀದ್ ಮುಕ್ಕ, ನವೀನ್ ಕೊಂಚಾಡಿ, ನಾಸಿರ್ ಕೃಷ್ಣಾಪುರ, ಅಶ್ರಫ್ ಸಫಾ, ಸಲೀಂ ಕಾಟಿಪಳ್ಳ, ಹುಸೈನ್ ಕಾಟಿಪಳ್ಳ, ಸಂತೋಷ್ ಕುಮಾರ್ ಹೆಗ್ಡೆ ಕಿನ್ನಿಗೋಳಿ, ದುರ್ಗಾಪ್ರಸಾದ್ ಹೆಗ್ಡೆ ಕಿನ್ನಿಗೋಳಿ, ಶ್ರೀಕಾಂತ್ ಸಾಲ್ಯಾನ್, ಭರತ್ ಶೆಟ್ಟಿ ಕುಳಾಯಿ, ಗಂಗಾಧರ ಹೊಸಬೆಟ್ಟು, ಗಂಗಾಧರ ಬಂಜನ್, ಕ್ಲವರ್ ಡಿಸೋಜ ಕೂಳೂರು, ಜಾನ್‌ಕೂಳೂರು, ಗಿರಿಧರ್ ಸನಿಲ್, ಪುನೀತ್ ಶೆಟ್ಟಿ, ಎಂ.ಜಿ.ಹೆಗ್ಡೆ, ದಲಿತ ಮುಖಂಡರಾದ ರಘು ಎಕ್ಕಾರ್, ಭಾಸ್ಕರ್ ಬಜ್ಪೆ, ಕಮಲಾಕ್ಷ ಬಜಾಲ್, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ವಸಂತ ಪೂಜಾರಿ, ಮುನೀರ್ ಮುಕ್ಕಚ್ಚೇರಿ, ಮಧುಸೂದನ ಗೌಡ, ಕಾಂಗ್ರೆಸ್ ಮುಖಂಡರಾದ ಫಾರೂಕ್ ಉಳ್ಳಾಲ್, ಸದಾಶಿವ ಶೆಟ್ಟಿ ಸಹಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Comments are closed.