ಕರಾವಳಿ

ಉಳ್ಳಾಲ 71ನೇ ವರ್ಷದ ಶಾರದೋತ್ಸವ : ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

Pinterest LinkedIn Tumblr

ಉಳ್ಳಾಲ : ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ‌ಉತ್ಸವ ಸಮಿತಿ ಉಳ್ಳಾಲ ಇದರ ವತಿಯಿಂದ 71ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಉಳ್ಳಾಲದ ಶ್ರೀ ಶಾರದಾ ನಿಕೇತನದಲ್ಲಿ‌ಆರಂಭಗೊಂಡಿದ್ದು ಅ. 19ರವರೆಗೆ ಜರಗಲಿದೆ. ತಾ. 14ರಂದು ಮಧ್ಯಾಹ್ನ ಶಾರದೆಯು ಪ್ರತಿಷ್ಠೆಗೊಂಡಿದ್ದು. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನುದ.ಕ. ಜಿಲ್ಲಾ ಪಂಚಾಯತ್ ಸದಸ್ಯೆಧನಲಕ್ಷ್ಮಿಗಟ್ಟಿ ನೆರವೇರಿಸಿದರು.

ಸೈಂಟ್‌ಜೋಸೆಫ್‌ಇಂಜಿನಿಯರಿಂಗ್ ಸ್ಕೂಲ್‌ನ್ ಅಸಿಸ್ಟೆಂಟ್ ಪ್ರೋಫೆಸರ್‌ಡಾ| ಶಕೀಲಾ ಬಿ. ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅತಿಥಿಗಳು, ಕಾಲ ಬದಲಾಗಿದೆ, ಜನ ಬದಲಾಗಿದ್ದಾರೆ ವ್ಯವಸ್ಥೆ ಬದಲಾಗಿದೆ‌ಎಂದು ಹಳಿಯುವ ಬದಲು ನಮ್ಮ ಮನಸ್ಸು ಬದಲಾಗಿದೆ‌ಎನ್ನುವ ಸತ್ಯವನ್ನು‌ಅರಿತುಕೊಂಡು ಒಳ್ಳೆಯ ಚಿಂತನೆನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ‌ಇಂತಹ ಸಾರ್ವಜನಿಕ ಉತ್ಸವಗಳು ಮನಸ್ಸಿಗೆ ಮುದನೀಡುವಲ್ಲಿ ಸಹಕಾರಿಯಾಗಲಿ ಎಂದರು.

ಯೋಗ ಶಿಕ್ಷಕಿ ಸುಮನಾಕಾಮತ್, ನಾಟ್ಯವಿದುಷಿ ಸುನೀತಾಜಯಂತ್ ಉಳ್ಳಾಲ್, ಜಾಗೃತ ಸಹಕಾರಿ ಬ್ಯಾಂಕ್‌ನ ಪ್ರಭಾರ ಮುಖ್ಯಾಧಿಕಾರಿ ಮಲ್ಲಿಕಾ ಸುಧೀರ್, ಉಳಿಯ ಕ್ಷೇತ್ರದ ಮೊಕ್ತೇಸರರಾದ ರೂಪಾ‌ ಆನಂದ್, ವಿದ್ಯಾರತ್ನ‌ ಎಜುಕೇಶನ್‌ ಟ್ರಸ್ಟ್‌ನ ಕಾರ್ಯದರ್ಶಿ ಸೌಮ್ಯಾ‌ ಆರ್ ಶೆಟ್ಟಿ , ನಿವೇದಿತಾ ನಿತಿನ್‌ ಕುಮಾರ್, ರೆಡ್‌ ಎಫ್ ಎಂ.ನ‌ ಆರ್. ಜೆ. ರಶ್ಮಿ ಉಳ್ಳಾಲ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶಾರದಾ ಮಹಿಳಾ ವೇದಿಕೆಯ‌ಅಧ್ಯಕ್ಷೆರೇಣುಕಾಕಾಂಚನ್, ಉತ್ಸವ ಸಮಿತಿಯ‌ಅಧ್ಯಕ್ಷ ಶ್ರೀಕರ ಕಿಣಿ. ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಭರತ್‌ಕುಮಾರ್ ಸ್ವಾಗತಿಸಿದರು. ಮಹಿಳಾ ಸಮಿತಿಯ ಕಾರ್ಯದರ್ಶಿ ಪ್ರಭಾವತಿ ಪಿ. ಬಂಗೇರ ವಂದಿಸಿದರು. ಪ್ರಮೀಳಾ ಕೊಂಡಾಣ ಕಾರ್ಯಕ್ರಮ ನಿರೂಪಿಸಿದರು.

Comments are closed.