ಕರಾವಳಿ

ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಚಿತ್ರನಟಿ, ರಂಗಭೂಮಿ ಕಲಾವಿದೆ ಉಮಾಶ್ರೀ ಆಯ್ಕೆ

Pinterest LinkedIn Tumblr

ಕುಂದಾಪುರ: ಕೋಟದ ಪ್ರತಿಷ್ಠಿತ ಸಂಸ್ಥೆಯಾದ ಪಂಚವರ್ಣ ಯುವಕ ಮಂಡಲ ಈ ಬಾರಿ 21ರ ವರ್ಷಾಚರಣೆಯ ಸಂಭ್ರಮ. ಇದರ ಅಂಗವಾಗಿ ಇದೇ ಬರುವ ನವಂಬರ್ 4 ರಂದು ಕೋಟದ ವರುಣತೀರ್ಥ ಕೆರೆಯ ಸಮೀಪ ನಡೆಯಲ್ಲಿರುವ ಅದ್ಧೂರಿಯ ಸಮಾರಂಭದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಚಿತ್ರನಟಿ ಉಮಾಶ್ರೀ ಯವರಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಿದ್ದು ಪುರಸ್ಕ್ರತರಿಗೆ ಸುಮಾರು ಹತ್ತು ಸಾವಿರ ಮೌಲ್ಯದ ಬೆಳ್ಳಿ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಅಲ್ಲದೆ ಪಂಚವರ್ಣ ವಿಶೇಷ ಪುರಸ್ಕಾರಕ್ಕೆ ಕುಂದಾಪುರ ತಾಲೂಕಿನ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಮಿತ್ರಸಂಗಮ ಗೋಪಾಡಿ ಬೀಜಾಡಿ ಸಂಸ್ಥೆ ಆಯ್ಕೆ ಯಾಗಿದ್ದು ,ಪ್ರತಿಭಾ ಪುರಸ್ಕಾರ ,ಮೂವರು ಸ್ಥಳೀಯ ಸಾಧಕರಿಗೆ ವಿಶೇಷ ಅಭಿನಂದನೆ,ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಕಾರ,ಸಾಂಸ್ಕ್ರತಿಕ ಕಾರ್ಯಕ್ರಮದ ಸಲುವಾಯ ಕಲ್ಮಾಡಿ ಅಂಗನವಾಡಿ ಕೋಟತ್ತಟ್ಟು ಇಲ್ಲಿನ ಪುಟ್ಟಾಣಿಗಳಿಂದ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ,ರಾತ್ರಿ 9.ಗಂಟೆಗೆ ತೆಲಿಕದ ಬೋಳ್ಳಿ ದೇವದಾಸ ಕಾಪಿಕಾಡ್ ನಿರ್ದೇಶನದ ಹೊಸ ನಗೆ ನಾಟಕ ನಡೆಯಲಿದೆ .ನವಂಬರ್ ೧ರಂದು ರಂದು ವರುಣತೀರ್ಥ ಕೆರೆ ಸಮೀಪ ಕನ್ನಡ ಧ್ವಜಾರೋಹಣ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Comments are closed.