ಕರಾವಳಿ

ಗರ್ಭಿಣಿ ಮಹಿಳೆಯರಿಗೆ ಸ್ವೀಟ್‌ಕಾರ್ನ್‌ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಉತ್ತಮ ತಿಳಿಯಿರಿ..?

Pinterest LinkedIn Tumblr

ರುಚಿ ಇದ್ದರೆ ಆರೋಗ್ಯ ಇರುವುದಿಲ್ಲ ಅನ್ನುವ ಮಾತು ಕೇಳಿರುತ್ತೀರಿ ಆದರೆ ಮಳೆಗಾಲದ ಚಳಿಗೆ ಸುಟ್ಟ ಜೋಳದ ಮೇಲೆ ಕಾರದ ಲೇಪನ ಮಾಡಿ ನಿಂಬೆ ಹುಳಿಯನ್ನು ಹಿಂಡಿ ಸವಿದರೆ ಬಾಯಿಗೆ ಸಿಗುವ ರುಚಿಗಿಯನ್ನು ನೆನಸಿಕೊಂಡರೆ ಒಮ್ಮೆಲೇ ಮೈ ಜುಮ್ ಅನ್ನುತ್ತದೆ ಆದರೆ ಅದರ ಜೊತೆಯಲ್ಲಿ ನಿಮಗೆ ಸಿಗುವ ಆರೋಗ್ಯ ಲಾಭಗಳು ಎಷ್ಟಿದೆ ಗೊತ್ತಾ ಒಮ್ಮೆ ಇಲ್ಲಿ ಓದಲೇಬೇಕು.

ಮೆಕ್ಕೆ ಜೋಳದಲ್ಲಿ ಅಧಿಕ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಜೋಳದಲ್ಲಿ ವಿಟಮಿನ್ ಬಿ ಮತ್ತು ಫಾಲಿಕ್ ಆಸಿಡ್ ಅಂಶವಿರುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗಲು ಸಹಕಾರಿಯಾಗಿದೆ ಇದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗುವುದಿಲ್ಲ.

ಇದರ ಸೇವನೆಯಿಂದ ರಕ್ತದಲ್ಲಿ ಕೊಬ್ಬಿನಂಶ ಸೇರಿಕೊಳ್ಳುವುದನ್ನು ತಡೆಯಬಹುದು.

ದೇಹದಲ್ಲಿ ಸೇರಿಕೊಂಡಿರುವ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ ಕೊಲೆಸ್ಟರಾಲ್‌ನಲ್ಲಿ 2 ವಿಧ ಒಳ್ಳೆಯ ಕೊಲೆಸ್ಟರಾಲ್‌ ಮತ್ತು ಕೆಟ್ಟ ಕೊಲೆಸ್ಟರಾಲ್‌ ಕೆಟ್ಟ ಕೊಲೆಸ್ಟರಾಲ್‌ ದೇಹದಲ್ಲಿ ಹೆಚ್ಚಾದರೆ ದೇಹದ ತೂಕ ಹೆಚ್ಚಾಗುವುದು, ಒಬೆಸಿಟಿ ಸಮಸ್ಯೆ ಪ್ರಾರಂಭವಾಗುತ್ತದೆ ಆದರೆ ಜೋಳದಲ್ಲಿ ಒಳ್ಳೆಯ ಕೊಲೆಸ್ಟರಾಲ್‌ ಇದ್ದು, ದೇಹದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ.

ಮಧುಮೇಹ ಮತ್ತು ಅಧಿಕವಾದ ಒತ್ತಡವನ್ನು ಮೆಕ್ಕೆಜೋಳ ಸೇವನೆಯಿಂದ ಕಡಿಮೆ ಗೊಳಿಸಬಹುದು ಇದು ಕರುಳಿನ ಕ್ಯಾನ್ಸರನ್ನು ದೂರವಿರುಸುವುದಲ್ಲದೆ ಇದು ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಗೊಳಿಸುವ ಮೂಲಕ ಮಧುಮೇಹಿಗಳಿಗೆ ಸಹಾಯಕವಾಗಿದೆ.

ಅಧಿಕ ಮ್ಯಾಗ್ನಿಷಿಯಂ, ಕಬ್ಬಿಣ, ಸತು, ರಂಜಕ ಇರುವುದರಿಂದ ಮೂಳೆಗೆ ಒಳ್ಳೆಯದು ಮೂಳೆಯನ್ನು ಬಲಪಡಿಸುವುದು ಮಾತ್ರವಲ್ಲ, ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.

ಇದರ ನಿಯಮಿತ ಸೇವನೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ ವಿಟಮಿನ್ ಬಿ ಜೋಳದಲ್ಲಿ ಹೆಚ್ಚಿರುವ ಕಾರಣ ಇದು ನರಮಂಡಲವನ್ನು ಆರೋಗ್ಯಕರವಾಗಿಡುತ್ತದೆ.

ಮೆಕ್ಕೆಜೋಳವನ್ನು ಕಾಸ್ಮೆಟಿಕ್‌ಗಳಲ್ಲೂ ಹೆಚ್ಚು ಬಳಕೆ ಮಾಡುತ್ತಾರೆ ಇದು ಚರ್ಮದಲ್ಲಿ ತುರಿಕೆ ಮತ್ತು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಇದರ ಎಣ್ಣೆಯನ್ನು ಹಚ್ಚಿಕೊಂಡರೆ ತ್ವಚೆ ಅಲರ್ಜಿ, ತ್ವಚೆಯಲ್ಲಿ ಕೆಂಪು ಗುಳ್ಳೆಗಳಾಗುವುದನ್ನು ತಡೆಯಬಹುದು.

ಕಣ್ಣುಗಳ ತೀಕ್ಷ್ಣತೆ ಹೆಚ್ಚಿಸಿಕೊಳ್ಳಲು ಮತ್ತು ಮೃದುವಾದ ತ್ವಚೆ ಹೊಂದಲು ಅವಶ್ಯವಿರುವ ವಿಟಮಿನ್ ಎ ಇದರಲ್ಲಿ ಹೆಚ್ಚಿರುತ್ತದೆ.

ಗರ್ಭಿಣಿಯರ ಆರೋಗ್ಯಕ್ಕೆ ಸ್ವೀಟ್‌ಕಾರ್ನ್‌ ಒಳ್ಳೆಯದು ಇದನ್ನು ಸೇವಿಸುವುದರಿಂದ ಫಾಲಿಕ್ ಆಸಿಡ್ ಕೊರತೆಯನ್ನು ನೀಗಿಸಬಹುದು.

Comments are closed.