ಕರಾವಳಿ

ಅಮೃತ ಸಮಾನ ತಾಯಿಯ ಎದೆಹಾಲು ಮಗುವಿಗೆ ವಿಷಕಾರಕವಾಗಬಹುದೇ…?

Pinterest LinkedIn Tumblr

ಎದೆಹಾಲು ಜಗತ್ತಿನಲ್ಲಿರುವ ಶ್ರೇಷ್ಠ ವಿಷಯಗಳಲ್ಲಿ ಒಂದು ಎಂದು ನಾವು ಭಾವಿಸುತ್ತೇವೆ ಆದರೆ ಅದರಲ್ಲಿ ಎಷ್ಟು ಜೀವಾಣು ವಿಷಗಳು(ಟಾಕ್ಸಿನ್ಸ್) ಇರುತ್ತವೆ ಎಂದು ಕೇಳಿದರೆ ಆಶ್ಚರ್ಯ ಪಡುತ್ತೀರ. ಸಂಶೋಧನೆಯ ಪ್ರಕಾರ ಮೆಟ್ರೋಪಾಲಿಟನ್ ನಗರಗಳಲ್ಲಿ (ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಇತ್ಯಾದಿ ನಗರಗಳು) ವಾಸಿಸುವ ಜನರ ದೇಹಗಳು ಸತತವಾಗಿ ರಾಸಾಯನಿಕಗಳಿಗೆ ತೆರೆದುಕೊಳ್ಳುವ ಕಾರಣ, ಅವರ ದೇಹಗಳಲ್ಲಿಯೇ ಹಲವಾರು ಟಾಕ್ಸಿನ್ಸ್ ಇರುತ್ತವೆ ಎಂಬುದು ತಿಳಿದು ಬಂದಿದೆ. ಈ ಟಾಕ್ಸಿನ್ಸ್/ರಾಸಾಯನಿಕ ಪದಾರ್ಥಗಳು ಎದೆಹಾಲಿನಲ್ಲೂ ಕಾಣಿಸಿಕೊಳ್ಳಬಹುದು ಮತ್ತು ಮಗುವಿಗೆ ವರ್ಗವಾಗಬಹುದು.

ಮಗುವಿನ ಇಮ್ಮ್ಯೂನಿಟಿ (ಪ್ರತಿರಕ್ಷಣಾ ವ್ಯವಸ್ಥೆ) ನಿರ್ಮಾಣಗೊಳ್ಳಲಿಕ್ಕೆ, ಪಚನಕಾರ್ಯ ವೃದ್ಧಿಸಲಿಕ್ಕೆ ಮತ್ತು ಒಟ್ಟಾರೆ ಬೆಳವಣಿಗೆಗೆ ಅಗತ್ಯವಿರುವ ಫ್ಯಾಟ್, ಶುಗರ್ಸ್ ಮತ್ತು ಪ್ರೋಟೀನ್ ಗಳನ್ನ ಒದಗಿಸುವುದೇ ಎದೆಹಾಲು. ಆದರೆ ಇವುಗಳೊಂದಿಗೆ ನೀವು ನಿಮ್ಮ ಮಗುವಿಗೆ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಟಾಕ್ಸಿನ್ಸ್ ಅನ್ನು ಸಹ ನಿಮ್ಮ ಮಗುವಿಗೆ ನೀಡುತ್ತೀರ. ಇಷ್ಟೇ ಅಲ್ಲದೆ ಮನೆಯಲ್ಲೇ ಪ್ರಿ-ಕಿಂಡರ್ಗಾರ್ಡನ್ ಶಿಕ್ಷಣ ಪಡೆಯುವ ಅಥವಾ 5 ವರ್ಷಗಳವರೆಗೆ ಮನೆಯಲ್ಲೇ ಬೆಳೆಯುವ ಮಗುವು ಹಾನಿಕಾರಕ ರಾಸಾಯನಿಕಗಳಿಗೆ ತೆರೆದುಕೊಳ್ಳುವುದು ಮತ್ತಷ್ಟು ಹೆಚ್ಚಿರುತ್ತದೆ, ಏಕೆಂದರೆ ಗಾಳಿಯಲ್ಲಿರುವ ಮಾಲಿನ್ಯಕಾರಕ ಅಂಶಗಳು. ಆದರೆ ಕೇವಲ ಗಾಳಿಯಿಂದ ಮಾತ್ರವೇ ನಿಮ್ಮ ದೇಹದಲ್ಲಿ ಟಾಕ್ಸಿನ್ಸ್ ಸೇರುತ್ತವೆ ಎಂದೇನಾದರೂ ನೀವು ಯೋಚಿಸುತ್ತಿದ್ದರೆ, ಇಲ್ಲ. ಇದರ ಮೇಲೆ ಇನ್ನಷ್ಟು ಅಂಶಗಳು ಪ್ರಭಾವ ಬೀರುತ್ತವೆ.

ಈ ರಾಸಾಯನಿಕಗಳು ಎಲ್ಲಿಂದ ಬರಬಹುದು?
ನೀವು ಪ್ರತಿದಿನ ತೆರೆದುಕೊಳ್ಳುವ ಸಾಮಾನ್ಯ ಟಾಕ್ಸಿನ್ಸ್ (ಜೀವಾಣು ವಿಷ) ಯಾವುಗಳೆಂಬ ಪಟ್ಟಿ ಈ ಕೆಳಗಡೆ ಇದೆ ನೋಡಿ

BPA (ಬಿಸ್ಫೆನೋಲ್), ಇದನ್ನು ಪ್ಲಾಸ್ಟಿಕ್ ಡಬ್ಬಿಗಳನ್ನ ಮಾಡಲಿಕ್ಕೆ ಬಳಸುವರು.
PFC (ಪರ್ ಫ್ಲೋರಿನೇಟೆಡ್ ಕಂಪೌಂಡ್ಸ್ ), ಇವುಗಳು ಮುಖ್ಯವಾಗಿ ಫ್ಲೋರ್ ಕ್ಲೀನರ್ ಮತ್ತು ಇನ್ನಿತರೆ ಸ್ವಚ್ಛ ಮಾಡುವ ಉತ್ಪನ್ನಗಳಲ್ಲಿ.
ತಲೇಟ್ಸ್, ಇವುಗಳನ್ನ ಗೃಹಪಯೋಗಿ ವಸ್ತುಗಳಾದ ಕ್ಲೀನರ್, ಡಿಟರ್ಜೆಂಟ್ ಸೋಪು ಮತ್ತು ಇನ್ನಿತರೇ ವಸ್ತುಗಳಲ್ಲಿ ಸುಗಂಧ ತರಲೆಂದು ಉಪಯೋಗಿಸುತ್ತಾರೆ.
ಟಾಯ್ಲೆಟ್ ಅಲ್ಲಿ ಬಳಸುವ ಸುಗಂಧದ್ರವ್ಯಗಳು.

ಇವುಗಳನ್ನ ಹೊರತುಪಡಿಸಿ, ರಾಕೆಟ್ ಫ್ಯುಯೆಲ್, ಪೈಂಟ್ ಥಿನ್ನರ್ಸ್, ಕೀಟನಾಶಕ ಔಷದಿ -ಇವೆಲ್ಲವೂ ನಿಮ್ಮ ಎದೆಹಾಲಿನ ಮೇಲೆ ಪರಿಣಾಮ ಬೀರುತ್ತವೆ.

ನೀವು ಏನು ಮಾಡಬೇಕು?
ನಿಮ್ಮ ಎದೆಹಾಲು ಎಷ್ಟು ಶುದ್ಧವಾಗಿರಬೇಕೊ ಅಷ್ಟು ಶುದ್ಧವಾಗಿರಬೇಕು ಎಂದರೆ ನೀವು ನೈಸರ್ಗಿಕವಾದ ಪರ್ಯಾಯಗಳ ಕಡೆ ಮುಖ ಮಾಡಿ, ನಿಮ್ಮ ಮನೆಯ ಗಾಳಿಯು ಮಾಲಿನ್ಯಕ್ಕೆ ಒಳಗಾಗುವುದರಿಂದ ಕಾಪಾಡಬೇಕು. ನೀವು ಇದನ್ನ ಪ್ರತಿದಿನ ನಿಮ್ಮ ಮನೆಯಲ್ಲಿ ಬಳಸುವ ವಸ್ತುಗಳಲ್ಲಿ ಯಾವೆಲ್ಲಾ ಕೆಮಿಕಲ್ಸ್ ಬಳಸುತ್ತಾರೆ ಎಂಬುದನ್ನ ಓದುವುದರಿಂದ ಶುರು ಮಾಡಬಹುದು. ಒಂದು ವೇಳೆ ಆ ವಸ್ತುಗಳು ನಾವು ಮೇಲೆ ತಿಳಿಸಿರುವ ಯಾವುದಾದರೂ ರಾಸಾಯನಿಕಗಳಿಂದ ಮಾಡಲ್ಪಟ್ಟಿದ್ದರೆ, ನೀವು ಅವುಗಳನ್ನ ಹೊರಗೆಸೆಯುವುದೇ ಒಳಿತು.

Comments are closed.