ಕರಾವಳಿ

ಆಹಾರಕ್ರಮದಲ್ಲಿ ಬೆಳಗಿನ ಬ್ರೇಕ್ ಫಾಸ್ಟ್ ಹೇಗಿದ್ದರೆ ಉತ್ತಮ? ಗೋತ್ತೆ

Pinterest LinkedIn Tumblr

ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇರುತ್ತದೆ. ನಾವು ತಿನ್ನುವ ಆಹಾರ, ಕುಡಿಯುವ ಪಾನೀಯದ ಮೇಲೆ ಅವಲಂಬಿಸಿರುತ್ತದೆ. ಕೆಲವರಿಗೆ ಎಷ್ಟೇ ವಯಸ್ಸಾದರೂ ಇನ್ನೂ ಯುವಕರಂತೆ ಕಾಣುತ್ತಾರೆ. ಇದಕ್ಕೆ ಕಾರಣ ಅವರ ಆಹಾರಾಭ್ಯಾಸ. ಅದರಲ್ಲೂ ಮುಖ್ಯವಾಗಿ ಬೆಳಗಿನ ಉಪಹಾರ ಸಾಕಷ್ಟು ಪರಿಣಾಮ ಬೀರುತ್ತದೆ.

ನಾವು ತಿನ್ನುವ ಆಹಾರ ಹಾಗೂ ನಮ್ಮ ಮನಸ್ಥಿತಿ ದೇಹದ ಆರೋಗ್ಯ ಹಾಗೂ ಸೌಂದರ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆಹಾರಕ್ರಮದಲ್ಲಿ ಬೆಳಗಿನ ಬ್ರೇಕ್ ಫಾಸ್ಟ್ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ನಾವು ಯಂಗ್ ಲುಕ್ ಗಾಗಿ ಯಾವ ರೀತಿಯ ಆಹಾರಕ್ರಮ ಒಳ್ಳೆಯದೆಂದು ಹೇಳಿದ್ದೇವೆ ನೋಡಿ.

* ಬೆಳಗ್ಗೆ 6 ಗಂಟೆಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಹದ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯಿರಿ.

* ಬೆಳಗ್ಗೆ 7 ಗಂಟೆಗೆ ಒಂದು ಕಪ್ ಗ್ರೀನ್ ಟೀ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಆರೋಗ್ಯಕ್ಕೆ ಒಳ್ಳೆಯದು. ಮಿದುಳನ್ನು ಚುರುಕುಗೊಳಿಸುತ್ತದೆ.

* ಬೆಳಗ್ಗೆ 8 ಗಂಟೆಗೆ ಒಂದು ಕಪ್ ವೆಜಿಟೇಬಲ್ ಸೂಪ್.

ಬೆಳಗಿನ ಉಪಹಾರಕ್ಕೆ

*ಬ್ರೌನ್ ಬ್ರೆಡ್ ಸ್ಯಾಂಡ್ ವಿಚ್ ಮತ್ತು ಆಮ್ಲೇಟ್ ಅಥವಾ, ಉಪ್ಪಿಟ್ಟು, ಇಡ್ಲಿ ಹೀಗೆ ಪ್ರೊಟೀನ್ ಅಂಶ ಅಧಿಕವಿರುವ ಆಹಾರವನ್ನು ಸೇವಿಸಿ.

*ಬೆಳಗ್ಗೆ ಹಣ್ಣು ತಿನ್ನುವುದಾದರೆ ಬ್ರೇಕ್ ಫಾಸ್ಟ್ ಗೆ ಮುಂಚಿತವಾಗಿ ಸೇವಿಸಿ. ನಂತರ 1 ಗ್ಲಾಸ್ ಹಾಲು ಕುಡಿಯಿರಿ.

* ಬೆಳಗ್ಗೆ ಬೇಗನೆ ಏಳಿ. ಇದರಿಂದ ರಿಲ್ಯಾಕ್ಸ್ ಆಗಿ ಕೆಲಸ ಮಾಡಲು ಸಾಕಷ್ಟು ಸಮಯ ದೊರೆಯುತ್ತದೆ.

* ಅವಸರ-ಅವಸರವಾಗಿ ಬ್ರೇಕ್ ಫಾಸ್ಟ್ ಮಾಡಬೇಡಿ.

* 9 ಗಂಟೆ ಮುಂಚಿತವಾಗಿ ಬ್ರೇಕ್ ಫಾಸ್ಟ್ ಮುಗಿಸಿ.

* ತಿನ್ನುವಾಗ ಬೇಡದ ಆಲೋಚನೆ ಬೇಡ

* ಟಿವಿ ನೋಡುತ್ತಾ ತಿನ್ನಬೇಡಿ.

Comments are closed.