ಉಡುಪಿ: ಉಡುಪಿ ನಗರದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸ್ವಚ್ಛ-ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ನವ ಉಡುಪಿಯ ನಿರ್ಮಾತೃ ಕೀರ್ತಿಶೇಷ ಡಾ| ವಿ.ಎಸ್. ಆಚಾರ್ಯರವರ ದೂರದರ್ಶಿತ್ವದ ಯೋಜನೆಗಳು, ಬಿಜೆಪಿ ಅವಧಿಯ ದಾಖಲೆ ಪ್ರಮಾಣದ ಅಭಿವೃದ್ಧಿ ಕೆಲಸ-ಕಾರ್ಯಗಳು ಹಾಗೂ ಕಾಂಗ್ರೆಸ್‌ನ ದುರಾಡಳಿತ, ಬ್ರಷ್ಟಾಚಾರ, ಜನವಿರೋಧಿ ನೀತಿಯು ಈ ನಗರಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರದಾನವಾಗಲಿದೆ. ಉಡುಪಿ ನಗರ ಸಭಾ ವ್ಯಾಪ್ತಿಯ ಎಲ್ಲ 35 ವಾರ್ಡುಗಳಲ್ಲಿ ಬಿಜೆಪಿಯ ಸಮರ್ಥ ಪ್ರಬಲ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲ ವಾರ್ಡುಗಳಲ್ಲಿ ಬಿಜೆಪಿ ಪರ ವಾತಾವರಣವಿದ್ದು 30ಕ್ಕೂ ಹೆಚ್ಚಿನ ವಾರ್ಡ್‌ಗಳಲ್ಲಿ ಬಿಜೆಪಿ ಜಯಬೇರಿಗಳಿಸುವ ಮೂಲಕ ಪ್ರತಿಷ್ಠಿತ ಉಡುಪಿ ನಗರಸಭೆಯ ಆಡಳಿತ ಮಗದೊಮ್ಮೆ ಬಿಜೆಪಿ ತೆಕ್ಕೆಗೆ ಬರುವುದು ಶತಸಿದ್ಧ ಎಂದು ಉಡುಪಿಯ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಅವರು ನಗರಸಭಾ ಚುನಾವಣಾ ಪ್ರಯುಕ್ತ ಅಂಬಲಪಾಡಿ ವಾರ್ಡಿನಲ್ಲಿ ಮನೆ-ಮನೆ ಬೇಟಿ ಮೂಲಕ ಮತಯಾಚನೆ ನಡೆಸಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಭವ್ಯ ಇತಿಹಾಸವಿರುವ ಉಡುಪಿ ನಗರಸಭೆ ಇಂದು ಕಾಂಗ್ರೆಸ್‌ನ ಗೂಂಡಾಗಿರಿ ಮತ್ತು ಜನವಿರೋಧಿ ನೀತಿಯಿಂದ ಜನಾಕ್ರೋಶಕ್ಕೆ ಪಾತ್ರವಾಗಿದೆ. ಆಡಳಿತ ವೈಫಲ್ಯದಿಂದ ನಲುಗಿರುವ ಉಡುಪಿ ನಗರಸಭೆಯಲ್ಲಿ ಭ್ರಷ್ಟಾಚಾರಮುಕ್ತ ಅಭಿವೃದ್ಧಿ ಪರ ದಕ್ಷ ಆಡಳಿತಕ್ಕೆ ಬಿಜೆಪಿಯೊಂದೇ ಪರಿಹಾರ ಎಂದ ಅವರು ಉಡುಪಿಯ ಮಹಾಜನತೆ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಅಂಬಲಪಾಡಿ ವಾರ್ಡ್ ಅಭ್ಯರ್ಥಿ ಹರೀಶ್ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ಹೆಚ್.ಜಯಪ್ರಕಾಶ್ ಕೆದ್ಲಾಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ, ಜಿಲ್ಲಾ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಉಡುಪಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಬಿಜೆಪಿ ಉಡುಪಿ ನಗರ ಪ್ರ.ಕಾರ್ಯದರ್ಶಿ ಜಗದೀಶ್ ಆಚಾರ್ಯ, ಅಂಬಲಪಾಡಿ ನಗರ ಸ್ಥಾನೀಯ ಸಮಿತಿ ಪ್ರ.ಕಾರ್ಯದರ್ಶಿ ರಮೇಶ್ ಉಪಾಧ್ಯಾಯ, ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಅಂಬಲಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಯೋಗೀಶ್ ಶೆಟ್ಟಿ, ವಾರ್ಡ್ ಪ್ರಮುಖರಾದ ಪ್ರವೀಣ್ ಉಪಾಧ್ಯಾಯ, ಭಾಸ್ಕರ ಸಾಲ್ಯಾನ್, ಸಂದೇಶ್, ಉಮೇಶ್ ಶೆಟ್ಟಿಗಾರ್, ವಸಂತ್ ಪ್ರಭು, ರಂಜಿತ್ ಶೆಟ್ಟಿ, ಮಿಥುನ್‌ರಾಜ್, ಸನ್ನಿವಾಸ, ಜಗದೀಶ್ ಶೆಟ್ಟಿಗಾರ್, ನಿಖಿಲ್, ಧನ್‌ರಾಜ್, ಸಂಪತ್, ಶ್ರೀಪತಿ ಆಚಾರ್ಯ, ಭಾಸ್ಕರ ಆಚಾರ್ಯ, ನಚಿಕೇತ್ ಮುಂತಾದವರು ಉಪಸ್ಥಿತರಿದ್ದರು.
Comments are closed.