ಕುಂದಾಪುರ: ನಿನ್ನೆ ಎಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ಬಿಜೆಪಿಯಿಂದ ಬಂಡಾಯ ಬಾವುಟ ಹಾರಿಸಿ ಪಕ್ಷೇತರರಾಗಿ ಚುನಾವಣಾ ಸ್ಪರ್ಧೆಗೆ ಇಳಿದಿರುವ ರಾಜೇಶ್ ಕಾವೇರಿಯವರು ರಕ್ಷಾಬಂಧನದ ದಿನದಂದು ವಿಭಿನ್ನ ರೀತಿಯಲ್ಲಿ ಮತಯಾಚನೆ ಮಾಡಿ ಗಮನ ಸೆಳೆದಿದ್ದಾರೆ.

ಭಾನುವಾರ ಬೆಳಗ್ಗಿನಿಂದಲೇ ತನ್ನ ಬೆಂಬಲಿಗರೊಂದಿಗೆ ತಾನು ಸ್ಪರ್ಧಿಸಿರುವ ಕುಂದಾಪುರದ 11ನೇ ಸೆಂಟ್ರಲ್ ವಾರ್ಡ್ನ ಪ್ರತಿ ಮನೆಗಳಿಗೆ ತೆರಳಿ ಮನೆಮಂದಿಗೆ ರಾಕಿ ಕಟ್ಟುವ ಮೂಲಕ ಮುಂಬರುವ ಚುನಾವಣೆಯಲ್ಲಿ ತನಗೆ ಆಶೀರ್ವಾದ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಕೆಲ ಮನೆಯವರು ರಾಜೇಶ್ ಕಾವೇರಿಯವರನ್ನು ಮನೆಯೊಳಗೆ ಕರೆಸಿ ಮಣೆಯಲ್ಲಿ ಕೂರಿಸಿ, ಆರತಿ ಬೆಳಗಿ ರಾಕಿ ಕಟ್ಟಿರುವ ದೃಶ್ಯವಾಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿಯವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಮೋಹನದಾಸ್ ಶೆಣೈ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ್ ಪೂಜಾರಿ ಎದುರು ರಾಜೇಶ್ ಕಾವೇರಿ ಕಣದಲ್ಲಿದ್ದಾರೆ.
Comments are closed.