ಕರಾವಳಿ

ಯಾವಾಗಲೂ ಹಸಿವು, ಹಸಿವು ಎನ್ನುವ ಬಾಸವಾಗುತ್ತದೆಯಾ…..ಇದಕ್ಕೆ ಕಾರಣ ಗೋತ್ತೆ..?

Pinterest LinkedIn Tumblr


ನಿಮಗೆ ಪದೇ ಪದೇ ಊಟ ಮಾಡಬೇಕೆನ್ನಿಸುತ್ತದೆಯೇ? ಹಾಗಾದರೇ, ಅದಕ್ಕೆ ನಿಮ್ಮ ಮೆದುಳು ಕಾರಣವಿರಬಹುದು. ಮೆದುಳಿನ ಜೋಡಣೆ ವ್ಯವಸ್ಥೆ ಎರಡು ಕೆಲಸ ಮಾಡುತ್ತದೆ, ಒಂದು ತ್ಯಾಜ್ಯವನ್ನು ಸುರಿಸುವುದು ಮತ್ತೊಂದು ಹಸಿವಿಗೆ ದಾರಿ ತೋರಿಸುವುದು. ಜೊತೆಗೆ ನೀವು ಯಾವಾಗ ಹೊಟ್ಟೆಗೆ ತಿನ್ನಬೇಕು ಎಂದು ಸೂಚಿಸುತ್ತದೆ.

ನಮ್ಮಲ್ಲಿ ನಡೆಯುವ ಪ್ರತೀ ಕ್ರಿಯೆಯನ್ನು ನಿಯಂತ್ರಿಸುವ ಶಕ್ತಿ ನಮ್ಮ ಆಲೋಚನೆಗೆ ಸಂಬಂಧಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಮೆದುಳಿನ  ಮೂಲಕ ಮನುಷ್ಯನಿಗೆ ಸಂವಹನೆಯ ಸೂಚನೆ ಸಿಗುತ್ತದೆ. ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೇ ಮೆದುಳಿನಲ್ಲಿ ಮತ್ತೊಂದು ಸಂವಹನಕ್ಕೆ ಮಾರ್ಗವಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಈ ಕುರಿತು ಅಮೇರಿಕಾದ ಸಂಶೋಧಕ ಎಮಿಲಿ ನೋಬಲ್ ಅಧ್ಯಯನ ನಡೆಸಿದ್ದಾರೆ. ಕೋಶದಿಂದ ಕೋಶಕ್ಕೆ ಇರುವ ಸಂವಹನದಲ್ಲಿ ಪ್ರತ್ಯೇಕ ನ್ಯೂರಾನ್ ಗಳ(ನರಕೋಶಗಳ) ಮೂಲಕ ಇತರ ಜೀವಕೋಶಗಳಿಗೆ ಸಂದೇಶಗಳು ಹಾದು ಹೋಗುತ್ತವೆ. ಮತ್ತು ಕೋಶದಿಂದ ಕೋಶಕ್ಕೆ ಅಥವಾ ರಕ್ತನಾಳಗಳ ಮೂಲಕ ಸಂದೇಶಗಳು ಪ್ರಸಾರವಾಗುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಿದುಳಿನಲ್ಲಿ ನಡೆಯುವ ಕ್ರಿಯೆಗಳು, ದೇಹದ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ನಿಟ್ಟಿನಲ್ಲಿ ಹಸಿವನ್ನು ನಿಯಂತ್ರಿಸುವ ಮೆಲನಿನ್-ಕಾನ್ಸಂಟ್ರೇಟಿಂಗ್ ಹಾರ್ಮೋನ್(ಎಂಸಿಎಚ್)ನ್ನು ಕೇಂದ್ರೀಕರಿಸಿ, ನಡೆಸಿದ ಸಂಶೋಧನೆಯಲ್ಲಿ ಮೆದುಳು ಹಸಿವನ್ನು ನಿಯಂತ್ರಿಸು ತ್ತದೆ.  ಹಾಗೆಯೇ ಹಸಿವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ. ಈ ನಿಟ್ಟಿನಲ್ಲಿ ನಾವು ನಿರಂತರವಾಗಿ ತಿನ್ನಬೇಕೆಂದರೇ ಅದಕ್ಕೆ ಹಸಿವೇ ಕಾರಣ ಹೇಳಲಾಗುವುದಿಲ್ಲ. ಇದಕ್ಕೆ ಮೆದುಳು ಕೂಡಾ ಕಾರಣವಾಗಿರುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

Comments are closed.