
ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸುವ ಮೂಲಕ ಯುಗಾದಿಯನ್ನು ಸ್ವಾಗತಿಸುವ ನಮಗೆ ಕಹಿಯ ರೂಪದಲ್ಲಿ ಕರಿಬೇವಿನ ಎಲೆ ಅತಿ ಪವಿತ್ರವಾಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ ‘ಒಗ್ಗರಣೆ’ ಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ.
ಕರಿಬೇವು ಸೊಪ್ಪು ಮೂಲತಃ ಒಂದು ಗಿಡಮೂಲಿಕೆ, ಇದು ತನ್ನ ಜೀರ್ಣ ಕ್ರಿಯೆಯನ್ನು ಸುಧಾರಿಸುವ ಸಾಮಥ್ರ್ಯಕ್ಕೆ ಹೆಸರುವಾಸಿ. ಅಯುರ್ವೇದದ ಪ್ರಕಾರ ಕಡಿಪತ್ತಾ ಎಂದು ಕರೆಯಲ್ಪಡುವ ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
1-2 ಟೀ ಚಮಚದಷ್ಟು ಎಲೆಯ ರಸವನ್ನು, 1ಟೀ ಚಮಚ ಲಿಂಬೆಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.
ಕರಿಬೇವಿನ ಎಲೆಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಮಾಡಿದ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.
ಅಡುಗೆಗೆ ಮಾತ್ರವಲ್ಲ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ ಅದು ಹೇಗೆ ಅಂತಾ ನೋಡಿ..:
1. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ಇದರ ಉಲ್ಲೇಖವಿದ್ದು ಇದು ದೇಹದಲ್ಲಿರುವ ಪಿತ್ತದ ಅಂಶವನ್ನು ಸಹ ಇದುಶಮನಗೊಳಿಸುತ್ತದೆ.
2. ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ
ದೇಹದಲ್ಲಿನ ಪೋಷಕಾಂಶಗಳ ಕೊರತೆಯಿಂದ ತಲೆ ಕೂದಲು ಬಿಳಿಯಾಗುವುದನ್ನು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ಬಿಳಿ ಕೂದಲು ಆಗುವುದನ್ನು ತಡೆಗಟ್ಟುವುದರೊಂದಿಗೆ ಕೂದಲು ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಒ0ದು ಲೋಟದಷ್ಟು ಮೊಸರನ್ನು ತೆಗೆದುಕೊ0ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಜಜ್ಜಿ ಚೆನ್ನಾಗಿ ಮಿಶ್ರಗೊಳಿಸಿ, ನಿಮ್ಮ ನೆತ್ತಿಗೆ ಈ ಮಿಶ್ರಣದಿ0ದ ಮಾಲೀಸು ಮಾಡಿಕೊಂದರೆ, ಕೂದಲು ಆರೋಗ್ಯದಿಂದ ಕೂಡಿರುತ್ತದೆ .
3. ಅತಿಸಾರದ ಲಕ್ಷಣಗಳನ್ನು ನಿವಾರಿಸುತ್ತದೆ
ಕರಿಬೇವಿನಲ್ಲಿ ಕಾರ್ಬಜೋಲ್ ಅಲ್ಕಾಲೋಯ್ಡ್ ಅಂಶವಿದ್ದು ಇದು ಅತಿಸಾರಕ್ಕೆ ಉತ್ತಮ ಮದ್ದಾಗಿದೆ.
4 ಮಧುಮೇಹ ನಿವಾರಕ
ಮಧುಮೇಹಿಗಳಿಗೆ ಇದು ತುಂಬಾನೇ ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಪ್ರಮಾಣ ನಮ್ಮ ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.
ಪ್ರತಿದಿನ 2-3 ಬಾರಿ ಸೇವಿಸಿದರೆ, ಆರೋಗ್ಯಕ್ಕೆ ಉತ್ತಮ. ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರಿಗೆ ಕರಿಬೇವು ಸೊಪ್ಪು ಇಷ್ಟವಾಗದಿದ್ದಲ್ಲಿ, ನೀವು ಕರಿಬೇವನ್ನು ರುಬ್ಬಿ, ಕರಿ ಮತ್ತು ಚಟ್ನಿಯಲ್ಲಿ ಬೆರೆಸಬಹುದು. ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.
5. ರಕ್ತಹೀನತೆಯನ್ನು ಹೋಗಲಾಡಿಸುತ್ತದೆ
ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸಿ ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ. ಸಾಮಾನ್ಯವಾಗಿ ಕೆಲವರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ, ಅಥವಾ ಬೆಳಗಿನ ಜಾವ ಎದ್ದಾಕ್ಷಣ ವಾಕರಿಕೆ, ಅಥವಾ ವಾಂತಿಯ ತೊಂದರೆ ಕಂಡುಬರುತ್ತದೆ. ಇಂತಹ ಸಮಸ್ಯೆ ಎದುರಿಸುವವರು ಪ್ರತಿ ದಿನ ಕರಿಬೇವಿನ ಎಲೆಗಳನ್ನು ಅರೆದು ತಯಾರಿಸಿದ ಮಿಶ್ರಣವನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಉತ್ತಮ ಪರಿಣಾಮ ದೊರಕುತ್ತದೆ
ಅಲ್ಲದೇ ಕರಿಬೇವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರೊಂದಿಗೆ ಚರ್ಮದ ಕಾಂತಿಗೂ ಇದು ಸಹಾಯಕಾರಿಯಾಗಿದೆ.
Comments are closed.