ಕರಾವಳಿ

ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಮೊದಲು ನೇಮಿಸಿ: ಸರಕಾರಕ್ಕೆ ಕೋಟ ಆಗ್ರಹ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಗೆ ಉಸ್ತುವಾರಿ ನೇಮಕ ಮಾಡುವಲ್ಲಿ ಸಮಿಶ್ರ ಸರಕಾರದಲ್ಲಿ ಗೊಂದಲವಿದೆ. ಸರಕಾರ ತಮ್ಮೊಳಗಿನ ಕಚ್ಚಾಟವನ್ನು ದೂರ ಸರಿಸಿ ಉಡುಪಿ ಜಿಲ್ಲೆಗೆ ಶೀಘ್ರವಾಗಿಉಸ್ತುವಾರಿನೇಮಕ ಮಾಡಬೇಕು ಎಂದು ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಶ ಪೂಜಾರಿ ಆಗ್ರಹ ಮಾಡಿದ್ದಾರೆ.

ಅವರು ಇಂದು ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ್ರು, ಉಡುಪಿ ಜಿಲ್ಲೆ ಪ್ರಗತ್ತಿಯತ್ತ ದಾಪುಗಾಲು ಹಾಕುತ್ತಿರುವ ಜಿಲ್ಲೆ.ಹೀಗಾಗಿ ಉಡುಪಿಗೆ ಉಸ್ತುವಾರಿಯ ಅಗತ್ಯ . ಆದ್ರೆ ವಿಪರ್ಯಾಸ ಎಂದ್ರೆ ಸರಕಾರ ಈವರೆಗೆ ಜಿಲ್ಲೆಗೆ ಉಸ್ತುವಾರಿಯ ನೇಮಕಮಾಡಿಲ್ಲ. ಉಸ್ತುವಾರಿ ನೇಮಕ ಮಾಡುವಲ್ಲಿಸಮಿಶ್ರ ಸರಕಾರದಲ್ಲಿಯೇ ಗೊಂದಲವಿದೆ. ಉಸ್ತುವಾರಿ ನೇಮಕದ ಬಗ್ಗೆ ಇರುವ ಗೊಂದಲವನ್ನು 2 ಪಕ್ಷಗಳು ಸರಿಪಡಿಸಿ ಜಿಲ್ಲೆಯ ಅಬಿವೃದ್ದಿಯ ಹಿತ ದೃಷ್ಟಿಯಲ್ಲಿ ಉಸ್ತುವಾರಿಯನ್ನು ಅಗಸ್ಟ್ 15 ರೊಳಗಾಗಿ ನೇಮಕ ಮಾಡಬೇಕು. ಕನಿಷ್ಠ ಪಕ್ಷ ಅಗಸ್ಟ್ 15 ರಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆದ್ರೂ ಉಸ್ತುವಾರಿಯ ನೇಮಕವನ್ನು ಸರಕಾರ ಮಾಡಬೇಕು ಎಂದು ವಂಗ್ಯ ಮಾಡಿದ್ರು.

ಸರಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಿಎಂ ಕುಮಾರಸ್ವಾಮೀ ವಿಫಲರಾಗಿದ್ದಾರೆ. ಸರಕಾರದ ಆರೋಗ್ಯ ಭಾಗ್ಯಗಳು ಬಡವರ ಪಾಲಿಗೆ ನೂಂಗಲಾರದ ತುತ್ತಾಗಿದೆ. ಆರೋಗ್ಯ ಕಾರ್ಡು ಯೋಜನೆಯ ಅನುಷ್ಠಾನದಲ್ಲಿ ಗೊಂದಲವಿದೆ. ಅನಾರೋಗ್ಯ ಪೀಡಿತರು ಸರಕಾರಿಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಅನುಮತಿಪಡೆದು ಖಾಸಗೀ ಆಸ್ಪತ್ರೆಗೆ ದಾಖಲಾಗುವ ಹೊಸ ನಿಯಮ ಜಾರಿಗೆ ತಂದಿದೆ.ಈ ಮೂಲಕ ಅನಾÀರೋಗ್ಯ ಪೀಡಿತರನ್ನು ಕೊಲ್ಲಲೆಂದು ಆರೋಗ್ಯ ಕಾಡು ಯೋಜನೆಯನ್ನು ಸರಕಾರ ಜಾರಿಗೆ ತಂದಿದೆ.

ಸಮಿಶ್ರ ಸರಕಾರದಲ್ಲಿ ಸಮನ್ವಯ ಸಮಿತಿಯೊಂದು ರಚನೆಯಾಗಿದೆ.ಆದ್ರೆ ಸಮನ್ವಯ ಸಮಿತಿ ಗಲಾಟೆ ಸಮಿತಿ. ಸರಕಾರದಲ್ಲಿಯೇ ಭಿನ್ನಭಿಪ್ರಾಯ ಮೂಡಿಸುವವರೇ ಈ ಸಮನ್ವಯ ಸಮಿತಿಯ ಸದಸ್ಯರು. ಬಜೆಟ್‍ನಲ್ಲಿ ಕೆಲವೇ ಜಿಲ್ಲೆಗಳಿಗೆ ಪ್ರಾಶ್ಯಸ್ತವನ್ನು ನೀಡಲಾಗಿದೆ. ಸಿ ಎಂ ಕುಮಾರಸ್ವಾಮೀ ಕೇವಲನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ರಾಜ್ಯದ30 ಜಿಲ್ಲೆಗಳಿಗೆ ಅವರು ಸಿ ಎಂ. ಬಜೆಟ್‍ನಲ್ಲಿ ಅನುದಾನ ವಂಚಿತವಾಗಿರುವ ಜಿಲ್ಲೆಗಳಿಗೆ ತಕ್ಷಣ ಬಜೆಟ್‍ನಲ್ಲಿ ಪೂರಕವಾದ ಅಂಶಗಳನ್ನು ಮರು ಸೇರಿಸಬೇಕು ಎಂದು ಒತ್ತಾಯ ಮಾಡಿದ್ರು.

ಬಜೆಟ್ ನಲ್ಲಿ ತಾರತಮ್ಯದ ನಿಲುವು ತೋರಿಸಿದ್ದು ಸಿ ಎಂ ಕುಮಾರಸ್ವಾಮೀ. ಹೀಗಾಗಿ ಉತ್ತರ ಕನ್ನಡದಲ್ಲಿ ಪ್ರತ್ಯೇಕ ರಾಜ್ಯ ದ ಕೂಗು ಕೇಳಿ ಬರುತ್ತಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕರ್ನಾಟಕದ ವಿಕೇಂದ್ರಿಕರಣಕ್ಕೆ ಸರಕಾÀರ ಹಾಗೂ ಸಿ ಎಂಕುಮಾರಸ್ವಾಮೀ ಕಾರಣ ಆಗ್ತಾರೆ. ಹೀಗಾಗಿ ಸಿ ಎಂ ಕೂಡಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುವಲ್ಲಿ ಬೇಟಿ ನೀಡಿ ಅಲ್ಲಿಯ ಶಾಸಕರನ್ನು ಹಾಗೂ ಜನರನ್ನು ವಿಶ್ವಾಸಕ್ಕೆ ಪಡೆದು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಬೇಕು. ಆದ್ರೆ ಸಿ ಎಂ ಹಾಗೂ ಸರಕಾರದ ಮಂತ್ರಿಗಳು ಇದ್ಯಾವುದನ್ನು ಮಾಡದೇ ಇನ್ನೋಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆಎಂದು ಟೀಕೆ ಮಾಡಿದ್ರು

ಇನ್ನೂರಾಜ್ಯದಲ್ಲಿ 18ಸಾವಿರ ಶುದ್ದ ಕುಡಿಯುವನೀರಿನ ಘಟಕವಿದೆ. ಆದ್ರೆ 18 ಸಾವಿರ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯಾಚರಿಸುತ್ತಿಲ್ಲ. ನೀರಿನ ಘಟಕವನ್ನು ಕೇವಲ ಚಸ್ತು ಪ್ರದರ್ಶನಕ್ಕೆ ಇರಿಸಿದಂತೆ ರಾಜ್ಯದಲ್ಲಿಕಂಡು ಬರುತ್ತಿದೆ.2 ಸಾವಿರ ಕೋಟಿರೂಪಾಯಿಕುಡಿಯು ನೀರಿನ ಘಟಕಕ್ಕೆಸರಕಾರ ಖರ್ಚು ಮಾಡಿದ್ದರು ಅದು ಉಪಯೋಗಕ್ಕೆ ಬಾರದೇ ನಿಷ್ಪ್ರಯೋಜಕವಾಗಿ ಬಿದ್ದಿದೆ. ಶುದ್ದ ಕುಡಿಯುವ ನೀರಿನ ಅಲವಡಿಕೆಯಲ್ಲಿ ಬಾರೀ ಗೋಲ್ ಮಾಲ್ ನಡೆದಿದೆ ಎಂಬ ಶಂಕೆಗಳು ವ್ಯಕ್ತ ವಾಗುತ್ತಿದೆ. ಕೆಲವೊಂದು ಜಿಲ್ಲೆಗಳಲ್ಲಿ ಉದ್ಘಾಟನೆ ಗೊಂಡಿರುವ ನೀರಿನ ಘಟಕದಲ್ಲಿ ಇವೆರೆಗೂ 1 ಲೀಟರ್ ನೀರು ಬಂದಿಲ್ಲ. ಹೊರ ರಾಜ್ಯದವರಿಗೆ ಶುದ್ದ ಕುಡಿಯುವ ನೀರಿನ ಘಟಕದ ಗುತ್ತಿಗೆ ನೀಡಿರುವುದರಿಂದ ಈ ರೀತಿಯ ಅವವ್ಯಹಾರ ನಡೆದಿದೆ ಎಂಬ ಆರೋಪಕೇಳಿ ಬರುತ್ತಿದೆ.ಸರಕಾರೀ ಬಗ್ಗೆ ಕೂಡಾ ಮೌನ ವಹಿಸಿದೆ ಎಂದು ಕಿಡಿ ಕಾರಿದ್ರು

ಶೀರೂರು ಶ್ರೀಗಳ ಸಹಜ ಸಾವೋ ಅಥಾವ ವಿಶಪ್ರಾಸಣ ನಡೆದಿದೇವೋ ಎಂಬುವುದು ಇನ್ನೂ ಕೂಡಾ ನಿಗೂಡವಾಗಿ ಉಳಿದಿದೆ. ಘಟನೆ ನಡೆದ ದಿನವೇ ನಾನು ಗೃಹ ಸಚಿವರಿಗೆ ಈ ಕುರಿತು ಪತ್ರ ಬರೆದು ಮನವಿ ಮಾಡಿದ್ದೇನೆ. ತನಿಖೆಯನ್ನು ನಿಕ್ಷಪಕ್ಷಪಾತವಾಗಿ ನಡೆಸಿ ಪ್ರಕರಣದ ರಹಸ್ಯವನ್ನು ಬಯಲು ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದೇನೆ. ಗೃಹ ಸಚಿವರು ಕೂಡಾ ನನ್ನ ಮನವಿಗೆ ಸಮ್ಮತಿ ನೀಡಿದ್ದಾರೆ. ಪ್ರಕರಣ ತನಿಖೆ ಸಮಗ್ರ ರೀತಿಯಲ್ಲಿ ನಡೆಯುತ್ತಿದೆ ಎಂಬುವುದು ಮೇಲ್ನೋಟಕ್ಕೆ ಕಾಣ ಸಿಗುತ್ತಿದೆ. ಮಠದ ವಿಚಾರಗಳನ್ನು ರಾಜಕೀಯತ ಚೌಕಟ್ಟಿಗೆ ತರುವ ಯಾವ ನಿಲುವು ನಮಗಿಲ್ಲ. ಶೀರೂರು ಶ್ರೀಗಳ ನಿಗೂಡ ಸಾವಿನ ಪ್ರಕರಣಕ್ಕೆ ಸಂಬಂದಿಸಿ ಪೋಲಿಸರಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಶ್ರೀಗಳ ಸಾವಿನ ಬಗ್ಗೆ ಕಾರಣ ಎನು ಎಂದು ತಿಳಿದು ಬರುತ್ತೇ. ಆನಂತರ ಎನಾದ್ರೂ ಕ್ರಮಕೈಗೋಳ್ಳಲು ಇದ್ದಲ್ಲಿ ಈ ಬಗೆ ನಿರ್ದಾರ ತಾಳಲಾಗುವುದು ಎಂದ್ರು.

ಉಸ್ತುವಾರಿ ನೇಮಕಕ್ಕೆ ಸರಕಾರ ಅಷಾಡ ಮಾಸದ ಕಾರಣ ನೀಡುತ್ತಿದೆ. ಸರಕಾರ ಶಾಸನದ ಆದಾರದಲ್ಲಿ ನಡೆಯುತ್ತಿಲ್ಲ. ಶಾಸನದ ಆದಾರದಲ್ಲಿ ನಡೆಯಬೇಕಿದ್ದ ಸರಕಾರ ಶಾಸ್ತ್ರದ ಆದಾರದ ಮೇಲೆ ನಡೆಯುತ್ತಿದೆ ಎಂದು ಸಮಿಶ್ರ ಸರಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ರು.

ಬಿಜೆಪಿ ಆಡಳಿತಕ್ಕೆ ಬರುತ್ತೇ ಎಂಬ ಅಂಜಿಕೆಯಿಂದ ಕಾಂಗ್ರೆಸ್ ಜೆ ಡಿ ಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ವಾಸ್ತವದಲ್ಲಿ ಕಾಂಗ್ರೆಸ್ ದೃತರಾಷ್ಟ್ರನೊಂದಿಗೆ ಸೇರಿ ಪುಡಿಯಾಗ್ತ ಇದೆ.ಬಿಜೆಪಿಯನ್ನು ಅದಿಕಾರದಿಂದ ದೂರ ಇಡುವ ಸಲುವಾಗಿ ಕಾಂಗ್ರೆಸ್ ಜೆ ಡಿ ಎಸ್ ನ್ನು ಅಪ್ಪಿ ಕೊಂಡಿದೆ ಎಂದು ಸಮಿಶ್ರ ಸರಕಾರದ ವಿರುದ್ದ ಲೇವಡಿ ಮಾಡಿದರು.

Comments are closed.