ಕರಾವಳಿ

ಪಾದ ಉಳಿಕಿದೆಯೇ ಹಾಗದರೆ ತಕ್ಷಣ ಅನುಸರಿಸಬೇಕಾದ ಕೆಲವು ಅಂಶಗಳು

Pinterest LinkedIn Tumblr

ಪ್ರತಿನಿತ್ಯದ ನಮ್ಮ ಜೀವನದಲ್ಲಿ ಮುಂದಿನ ಒಂದೇ ಒಂದು ಸೆಕೆಂಡ್​​​ನಲ್ಲಿ ನಮಗೆ ಏನಾಗಬಹುದು ಎಂದು ಯಾರಿಗೂ ಗೊತ್ತಿರುವುದಿಲ್ಲ. ಏನಾದರು ಕೆಲಸ ಮಾಡುವಾಗ, ಓಡುವಾಗ ಬಿದ್ದು ಅಥವಾ ನಡೆದುಕೊಂಡು ಹೋಗುವಾಗಲೇ ಎಡವಿ ಬಿದ್ದು ಸಣ್ಣ ಪುಟ್ಟ ಗಾಯಗಳಾದರೆ ಸರಿ, ಒಂದು ವೇಳೆ ಪಾದ ಉಳುಕಿದರೆ ಕಾಲಿನ ಊತ, ಅಗಾಧ ನೋವನ್ನು ಅನುಭವಿಸಬೇಕಾಗುತ್ತದೆ. ಕೈ, ಕಾಲು, ಸೊಂಟ ಉಳುಕುವುದು ಕೇವಲ ಒಂದು ಸಂದರ್ಭವಷ್ಟೆ. ಇದನ್ನು ಯಾರು ಬೇಕೆಂದು ಮಾಡಿಕೊಳ್ಳುವುದಿಲ್ಲ. ಆದರೆ ಇಂತಹ ನೋವುಗಳು ತುಂಬಾ ಕಾಡುತ್ತವೆ. ಎದ್ದು ನೆಲದ ಮೇಲೆ ಕಾಲಿಡಲು ಆಗದಂತಹ ಪರಿಸ್ಥಿತಿಯನ್ನು ಉಳುಕು ನಿರ್ಮಾಣ ಮಾಡುತ್ತದೆ. ಹಾಗಾಗಿ ಪಾದ ಉಳುಕಿದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕೆಲವು ಅಂಶಗಳು ಇಲ್ಲಿವೆ ನೋಡಿ.

1. ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಪಾದದ ಮೇಲೆ ತೂಕ ಬೀಳುವಂತಹ ಯಾವುದೇ ಕೆಲಸವನ್ನು ಮಾಡಬೇಡಿ. ಸಾಧ್ಯವಾದರೆ ನಿಮ್ಮ ಸೊಂಟದ ಮಟ್ಟಕ್ಕಿಂತ ಮೇಲೆ ಭಾರವಾದ ವಸ್ತುಗಳನ್ನು ಎತ್ತಬೇಡಿ.
2. ಸೌಮ್ಯವಾದ ಉಳುಕು ಸಹ ಗುಣವಾಗಲು ಒಂದು ಅಥವಾ ಎರಡು ವಾರಗಳು ತೆಗೆದುಕೊಳ್ಳುತ್ತದೆ.
3. ಉಳುಕು ಸಂಭವಿಸಿದ ನಂತರದ ಮೊದಲ ಎರಡರಿಂದ ಮೂರು ದಿನಗಳ ಕಾಲ ಉಳುಕಿದ ಜಾಗಕ್ಕೆ ಆಗಾಗ ಐಸ್ ಅನ್ನು ಅನ್ವಯಿಸಿ.
4 ಉಳುಕಿದ ಜಾಗವು ಊದಿಕೊಳ್ಳುವುದನ್ನು ತಪ್ಪಿಸಲು ಎಲಾಸ್ಟಿಕ್ ಬ್ಯಾಂಡೇಜ್ ಅನ್ನು ಬಳಕೆ ಮಾಡಿ.
5. ಉಳುಕಿನ ನೋವು ನಿವಾರಣೆ ಮತ್ತು ಊತ ಕಡಿಮೆ ಮಾಡಲು ಆಸ್ಪಿರಿನ್ ಅಥವಾ ಉರಿಯೂತದ ಔಷಧಿಯನ್ನು ತೆಗೆದುಕೊಳ್ಳಿ. ನಡೆಯುವಾಗ ನಿಮ್ಮ ಪಾದದ ಮೇಲೆ ಹೆಚ್ಚು ತೂಕವನ್ನು ಬೀಳದೆ ನೋಡಿಕೊಳ್ಳಲು ಊರುಗೋಲನ್ನು ಬಳಸಿ.

Comments are closed.